ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಯ್ ದರ ನೀತಿಗೆ ವಿರೋಧ: ನಾಳೆ ರಾಜ್ಯದಾದ್ಯಂತ ಕೇಬಲ್ ಟಿವಿ ಬಂದ್‌

|
Google Oneindia Kannada News

ಬೆಂಗಳೂರು, ಜನವರಿ 23: ಟ್ರಾಯ್ ಜಾರಿಗೆ ತರುತ್ತಿರುವ ಹೊಸ ಕೇಬಲ್ ನೀತಿಯನ್ನು ವಿರೋಧಿಸಿ ರಾಜ್ಯ ಕೇಬಲ್ ಟಿವಿ ಆಪರೇಟರ್‌ ನಾಳೆ ಪ್ರತಿಭಟನೆ ಮಾಡಲಿದ್ದು, ನಾಳೆ ಬೆಳಿಗ್ಗೆಯಿಂದ ಸಂಜೆ ವರೆಗೂ ಕೇಬಲ್ ಟಿವಿ ಬಂದ್ ಆಗಲಿವೆ.

ಬೆಳಿಗ್ಗೆ 6 ಗಂಟೆ ಇಂದ ರಾತ್ರಿ 10 ಗಂಟೆ ವರೆಗೂ ಟಿವಿಗಳಲ್ಲಿ ಕೇಬಲ್ ಸೆಟ್‌ಅಪ್ ಬಾಕ್ಸ್‌ ಹೊಂದಿದ ಮನೆಗಳ ಟಿವಿಯಲ್ಲಿ ಯಾವುದೇ ಚಾನೆಲ್‌ಗಳು ಬರುವುದಿಲ್ಲ. ಕರ್ನಾಟಕ ಮಾತ್ರವಲ್ಲದೆ ಆಂದ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡುಗಳಲ್ಲೂ ನಾಳೆ ಕೇಬಲ್ ಬಂದ್ ಆಗಲಿದೆ.

ಹೊಸ ಕೇಬಲ್ ನಿಯಮಗಳಿಗೆ ವಿರೋಧ, ಜನವರಿ 24ರಂದು ಕೇಬಲ್ ಬಂದ್‌ ಹೊಸ ಕೇಬಲ್ ನಿಯಮಗಳಿಗೆ ವಿರೋಧ, ಜನವರಿ 24ರಂದು ಕೇಬಲ್ ಬಂದ್‌

ಟ್ರಾಯ್‌ ಹೊಸ ಕೇಬಲ್ ದರ ನೀತಿಯನ್ನು ಫೆಬ್ರವರಿ ಒಂದರಿಂದ ಜಾರಿಗೆ ತರಲಲಿದೆ. ಹೊಸ ನೀತಿಯು ಜಾರಿಗೆ ಬಂದಲ್ಲಿ ಗ್ರಾಹಕ ತನಗೆ ಇಷ್ಟವಾದ ಚಾನೆಲ್‌ಗೆ ಮಾತ್ರವೇ ಹಣ ನೀಡಿ ನೋಡಬಹುದಾಗಿದೆ. ಇದು ಕೇಬಲ್ ಆಪರೇಟರ್‌ಗಳಿಗೆ ಆದಾಯ ಕಡಿಮೆ ಮಾಡುವ ಜೊತೆಗೆ ಶ್ರಮ ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಗ್ರಾಹಕರಿಗೂ ಇದು ಹೊರೆಯಾಗುತ್ತದೆ ಕೇಬಲ್ ಟಿವಿ ಆಪರೇಟರ್‌ಗಳು ಹೇಳಿದ್ದಾರೆ.

Cable operators protesting against TRAI new cable rules on January 24

ದೇಶದ ಕೆಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲೆಂದು ಹೊಸ ನೀತಿಯನ್ನು ಸರ್ಕಾರ ಹೇರಲು ಹೊರಟಿದೆ. ಸರ್ಕಾರವು 18% ತೆರಿಗೆಯನ್ನು ಕೇಬಲ್ ಉದ್ಯಮದ ಮೇಲೆ ಹೊರಿಸಿದೆ, ಈ ಉದ್ಯಮವು ಸರ್ಕಾರದ ಸಹಾಯವಿಲ್ಲದೆ ದಶಕಗಳಿಂದ ನಡೆದುಕೊಂಡು ಬಂದಿದೆ ಆದರೆ ಈಗ ಉದ್ಯಮವನ್ನೇ ನಾಶ ಮಾಡಲು ಸರ್ಕಾರ ಹೊರಟಿದೆ. ಕೇಬಲ ಉದ್ಯಮವನ್ನೇ ನಂಬಿಕೊಂಡಿರುವ ಹಲವು ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ರಾಜ್ಯ ಕೇಬಲ್ ಸಂಘ ಹೇಳಿದೆ.

ಜ.24ಕ್ಕೆ ಕೇಬಲ್ ಆಪರೇಟರ್‌ಗಳ ಪ್ರತಿಭಟನೆ: ಬೆಂಗಳೂರಿಗೂ ಅನ್ವಯಿಸುತ್ತಾ? ಜ.24ಕ್ಕೆ ಕೇಬಲ್ ಆಪರೇಟರ್‌ಗಳ ಪ್ರತಿಭಟನೆ: ಬೆಂಗಳೂರಿಗೂ ಅನ್ವಯಿಸುತ್ತಾ?

ಟ್ರಾಯ್‌ ನೀತಿಗಳ ವಿರುದ್ಧ ಕೇಬಲ್ ಆಪರೇಟರ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ ಆದರೆ ಅಲ್ಲಿಯೂ ಅವರಿಗೆ ಹಿನ್ನಡೆ ಆಗಿದೆ. ಆದರೆ ಸುಪ್ರಿಂ ತೀರ್ಪನ್ನು ಮರುಪರಿಶೀಲನೆಗೆ ಅರ್ಜಿ ಹಾಕಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.

English summary
Cable operators protesting against TRAI new cable rules on January 24. Cable TV will be shut down on January 24 in Karnataka, Andhra Pradesh, Telangana, Kerala and Tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X