ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಮಹತ್ವದ ತೀರ್ಮಾನಗಳು ಹೀಗಿವೆ!

|
Google Oneindia Kannada News

ಬೆಂಗಳೂರು, ಸೆ. 04: ಗಣೇಶ ಹಬ್ಬದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊಡಲಾಗಿದೆ. ಶನಿವಾರ ವಿಧಾನಸೌಧದಲ್ಲಿ ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಂಪುಟಸ ಸದಸ್ಯರು ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ತಜ್ಞರೊಂದಿಗೆ ಚರ್ಚೆ ಮಾಡಿ ಸಿಎಂ ಬೊಮ್ಮಾಯಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.

ಅದರೊಂಚಿಗೆ ಹಲವು ಮಹತ್ವದ ತೀರ್ಮಾನಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನಮ ಬೀಜ ನಿಗಮ ಸಾಲ ಪಡೆಯುವ ಮೊತ್ತ ಹೆಚ್ಚಿಸಲು ಒಪ್ಪಿಗೆ, ಮೈಸೂರು ಅರಮನೆಯಲ್ಲಿ ಇನ್ಮುಂದೆ ಫೋಟೊ ಶೂಟ್ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಟ್ಟಿದೆ.

ಶನಿವಾರ ನಡೆದ ಸಂಪುಟ ಸಭೆಯ ತೀರ್ಮಾನಗಳು ಹೀಗಿವೆ:

* ಕೃಷಿ ಇಲಾಖೆ ಅಡಿಯಲ್ಲಿ ಬೀಜ ನಿಗಮ ಸಾಲ ಪಡೆಯಲು ಶೂರಿಟಿಯನ್ನು 10 ರಿಂದ 20 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಂಪುಟ ಒಪ್ಪಿದೆ. ಇನ್ಮುಂದೆ ಬೀಜ ನಿಗಮ 20 ಕೋಟಿ ರೂ. ಸಾಲ ಪಡೆಯಲು ಅನುಕೂಲವವಾಗಲಿದೆ.

Karnataka Cabinet Meeting Today (04 Sept 2021) Highlights and Key Decisions Taken

* ಮೈಸೂರು ಅರಮನೆ ಚಿತ್ರೀಕರಣ ಪ್ರಕರಣ ಲೋಕಾಯುಕ್ತ ತನಿಖೆ ನಡೆದಿತ್ತು. ಅದರಲ್ಲಿ ಅಷ್ಟೊಂದು ಗಂಭೀರತೆ ಇಲ್ಲ ಎಂದು ಪ್ರಕರಣ ಕೈ ಬಿಡಲಾಗಿದೆ.

ಮೈಸೂರು ಅರಮನೆಯಲ್ಲಿ ಫ್ಲಾಶ್ ಹಾಕದೆಯೇ ಪೋಟೊ ತೆರೆಯಲು ಅವಕಾಶವಿದೆ. ಮೈಸೂರು ಅರಮನೆಯಲ್ಲಿ ಫ್ಲ್ಯಾಶ್ ಇಲ್ಲದೆ ಫೋಟೊ ಶೂಟ್ ಮಾಡ ಬಹುದು ಎಂದು ಸಂಪುಟ ಒಪ್ಪಿಗೆ ಕೊಟ್ಟಿದೆ.

* ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನದಿ ನೀರು ಬಿಡುಗಡೆಗೆ ಕೋರ್ಟ್‌ ಒಪ್ಪಿಗೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ 26 ಕೆರೆಗಳನ್ನು ತುಂಬಿಸಲು 98 ಕೋಟಿ ರೂ. ಅನುದಾಮ ಮಂಜೂರು ಮಾಡಲು ಒಪ್ಪಿಗೆ.

* ರಾಜ್ಯದಲ್ಲಿ ಇನ್ವೆಸ್ಟ್‌ಮೆಂಟ್ ಕನ್ಸಲ್ಟಂಟ್ ಇನ್ನೊಂದು ವರ್ಷ ಮುಂದುವರೆಸಲು ತೀರ್ಮಾನ. ಅದಕ್ಕೆ ವರ್ಷಕ್ಕೆ 12 ಕೋಟಿ ರೂ. ಕೊಡಲು ಒಪ್ಪಿಗೆ ಕೋವಿಡ್ ಸಂಕಷ್ಟದಿಂದ ಆ ಸಂಸ್ಥೆಯಿಂದ ಲಾಭವಾಗಿರಲಿಲ್ಲ. ಆದರೆ ಇನ್ವೆಸ್ಟ್‌ಮೆಂಟ್ ಕಾರ್ಯಕ್ರಮ ಮಾಡಲು ಈ ವರ್ಷ ಸಂಸ್ಥೆ ಮುಂದುವರೆಸಲು ತೀರ್ಮಾನ ಮಾಡಲಾಗಿದೆ.

* ಶಿಕ್ಷಕರ ವರ್ಗಾವಣೆಗೆ ವಿಧೇಯಕ ತಂದಿದ್ದೆವು, ಈ ವಿಧೇಯಕಕ್ಕೆ ತಿದ್ದುಪಡಿ ಮಾಡಿ ಜಾರಿಗೆ ತರಲು ಒಪ್ಪಿಗೆ ನೀಡಲಾಗಿದೆ.

* ಸೂರ್ಯನಗರ 2: ಹೌಸಿಂಗ್ ಬೊರ್ಡ್ ನಿಂದ ಮನೆ ನಿರ್ಮಾಣಕ್ಕೆ ರೈತರು ಸರ್ಕಾರಕ್ಕೆ 50-50 ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನ

Karnataka Cabinet Meeting Today (04 Sept 2021) Highlights and Key Decisions Taken

* ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಕೊಡಲು ತೀರ್ಮಾನ

* ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಕೋರ್ಟ್ ಆದೇಶದಂತೆ ಭೂಸ್ವಾಧೀನಕ್ಕೆ ನರಸಿಂಹರಾಜಪುರ ತಾಲೂಕು 110, ಅಜ್ಜಂಪುರ ತಾಲೂಕಿನಲ್ಲಿ 115 ಎಕರೆ ಸ್ವಾಧೀನಕ್ಕೆ ಕ್ರಮ.

* ಜಿಟಿಟಿಸಿ ಕೇಂದ್ರಗಳನ್ನು ಮಾಡಲು ಅನುಮತಿ ಮಾಗಡಿ ತಾಲೂಕು 54 ಕೋಟಿ ದೇವನಹಳ್ಳಿ ತಾಲೂಕಿನಲ್ಲಿ 47ಕೋಟಿ

* ಐಟಿಐ ತರಬೇತಿ ಪಡೆಯುವ 13,061 ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಯೋಜನೆ, ಅದಕ್ಕಾಗಿ 18 ಕೋಟಿ ರೂ. ಅನುದಾನ ಬಿಡುಗಡೆ

* ಸರ್ಕಾರಿ ವೈಮಾನಿಕ‌ ತರಬೇತಿ ಶಾಲೆ ಸ್ಥಾಪನೆಗೆ ಸಂಪುಟದ ನಿರ್ಧಾರ. ಹಿಂದೆ ಜಕ್ಕೂರಿನಲ್ಲಿ ರಾಜೀವ್ ಸೊಸೈಟಿಗೆ ಅನುಮತಿ ಕೊಡಲಾಗಿತ್ತು. ಆದರೆ ಇಲ್ಲಿಯವರೆಗೆ ಸೊಸೈಟಿ ಕಾರ್ಯ ಆರಂಭಿಸಿಲ್ಲ. ಹಾಗಾಗಿ ಬೇರೆಯವರಿಗೆ ಪಿಪಿಎ ಅಡಿಯಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಸಮ್ಮತಿ

* ರಾಜ್ಯದಲ್ಲಿ ಕೊರೊನಾ ಮೂರನೇ ಆತಂಕ ಹಿನ್ನೆಲೆ ಅದರ ನಿರ್ವಹಣಗೆ 17.72 ಕೋಟಿ ರೂ. ಮಂಜೂರು

* ಡಿಲಿಮಿಟೇಷನ್ ಕಮಿಷನ್ ಮಾಡಲು ತೀರ್ಮಾನ. 2013 ಮುಂಚೆ ಸರ್ಕಾರದ ವ್ಯಾಪ್ತಿಗೆ ಇತ್ತು. ಎರಡು ಹಂತದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅವಕಾಶ.

ಈಗ ಡಿಲಿಮಿಟೇಷನ್ ಪ್ರಕರಣ ಕೋರ್ಟ್ ಮುಂದೆ ಇದೆ. ನಾವು ಕೋರ್ಟ್ ಮುಂದೆ ಹೊಸದಾಗಿ ಕಮಿಷನ್ ಮಾಡಿದ್ದೇವೆ ಎಂದು ಹೇಳುತ್ತೇವೆ. ಕೋರ್ಟ್ ಏನು ಹೇಳುತ್ತದೆ ಅದನ್ನು ಮಾಡುತ್ತೇವೆ ಎಂದ ಮಾಧುಸ್ವಾಮಿ.

* ಮೈಸೂರು ಅರಮನೆಗೆ ಸಂಬಂಧಿಸಿದಂತೆ ಲೋಕಾಯುದಲ್ಲಿ ಒಟ್ಟು 7 ಪ್ರಕರಣಗಳಿದ್ದವು. ಅವುಗಳಲ್ಲಿ ಗಂಭೀರವಲ್ಲದ ಎರಡು ಪ್ರಕರಣಗಳನ್ನು ಕೈಬಿಡಲಾಗಿದೆ. ಬಣ್ಣ ಹಾಗೂ ವಿಡಿಯೋ ಚಿತ್ರೀಕರಣ ಪ್ರಕರಣಗಳಿದ್ದವು. ಪೋಟೋ ತೆಗೆಯಬಾರದೆಂಬ ನಿಯಮವಿದ್ದರೂ ಫೋಟೋ ಸೆಶನ್ ಮಾಡಲಾಗಿತ್ತು. ಈಗ ಛಾಯಾಚಿತ್ರ ತೆಗೆಯಲು ಅವಕಾಶವಿದೆ. ಹೀಗಾಗಿ ಗಂಭೀರವಲ್ಲದ ಎರಡು ಪ್ರಕರಣಗಳನ್ನು ಕೈಬಿಡಲಾಗಿದೆ.

* ಸರಕು ಸೇವೆ ತಿದ್ದುಪಡಿ ವಿಧೇಯಕಕ್ಕೆ ಅನುಮತಿ ಕೊಡಲಾಗಿದೆ

* ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನ ಮಾಡಲಾಗಿದೆ. ಆನ್‌ಲೈನ್ ಜೂಜು ನಿಷೇಧಕ್ಕೆ ಸಂಪುಟ ಒಪ್ಪಿಗೆ. ಬರುವ ಅಧಿವೇಶನದಲ್ಲಿ ಈ ಕಾಯ್ದೆ ಅಂಗೀಕಾರ. ಆ ಮೂಲಕ ಎಲ್ಲ ರೀತೀಯ ಆನ್‌ಲೈನ್ ಜೂಜು ರಾಜ್ಯದಲ್ಲಿ ನಿಷೇಧವಾಗಲಿದೆ

Recommended Video

ಆಂತರಿಕ ಬಿರುಕು! ಅಫ್ಘಾನಸ್ತಾನದಲ್ಲಿ ಕಿರಿ ಕಿರಿ | Oneindia Kannada

English summary
Karnataka Cabinet Meeting Today (04 Sept 2021) Highlights and Key Decisions Taken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X