ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೇ ಬಿಎಸ್ವೈ ಸರಕಾರದ ಬಿಗ್ ಶಾಕ್?

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ವೀಕೆಂಡ್ ಕರ್ಫ್ಯೂನ ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನಲೆಯಲ್ಲಿ ಯಡಿಯೂರಪ್ಪ ಸರಕಾರ ಮತ್ತೊಂದು ಖಡಕ್ ನಿರ್ಧಾರಕ್ಕೆ ಬರಲು ನಿರ್ಧಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಾರಾಂತ್ಯದ ಕರ್ಫ್ಯೂ ಸೋಮವಾರ (ಏ 26) ಬೆಳಗ್ಗೆಗೆ ಮುಕ್ತಾಯಗೊಳ್ಳಲಿದೆ. ಅಂದೇ ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆಯನ್ನು ಕರೆದಿರುವುದರಿಂದ ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಸರಕಾರ ಬಿಗಿ ಕ್ರಮಕ್ಕೆ ಮುಂದಾಗಬಹುದು.

 ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3, ಮಾಡಬೇಕಾಗಿರುವುದು 5 ಕೊರೊನಾ ಲಕ್ಷಣವಿದ್ದರೂ, RTPCR ನೆಗೆಟಿವ್: ಕಾರಣಗಳು 3, ಮಾಡಬೇಕಾಗಿರುವುದು 5

ದೆಹಲಿ ನಂತರ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಆಕ್ಸಿಜನ್, ಬೆಡ್ ಮುಂತಾದ ಸಮಸ್ಯೆಗಳಿಂದ ಜನರು ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 170 ವಾಹನಗಳು ಜಪ್ತಿಕೋವಿಡ್ ನಿಯಮ ಉಲ್ಲಂಘನೆ ಮಾಡಿದ 170 ವಾಹನಗಳು ಜಪ್ತಿ

ವೈರಾಣುವಿನ ಚೈನ್ ಬ್ರೇಕ್ ಮಾಡಲು ಕನಿಷ್ಟ ಹದಿನೈದು ದಿನವಾದರೂ ಕಠಿಣ ನಿರ್ಧಾರಕ್ಕೆ ಬರಲೇ ಬೇಕು ಎನ್ನುವ ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸನ್ನು ಯಡಿಯೂರಪ್ಪ ಸರಕಾರ ಯಥಾವತ್ ಪಾಲಿಸಲು ಮುಂದಾಗಿದೆ ಎನ್ನುವ ಮಾಹಿತಿಯಿದೆ.

 ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಲಾಕ್‌ಡೌನ್

ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಲಾಕ್‌ಡೌನ್

ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಹೇರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮೂರು ವಾರಗಳಲ್ಲೇ ಅತ್ಯಂತ ಕಮ್ಮಿ 5,888 ಕೇಸುಗಳಷ್ಟೇ ಮುಂಬೈನಲ್ಲಿ ವರದಿಯಾಗಿದೆ. ಬರೀ ರಾಜಧಾನಿಯಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಹೊಸ ಸೋಂಕಿತರ ಪ್ರಮಾಣ ಗಣನೀಯವಾಗಿ ಕಮ್ಮಿಯಾಗಿದೆ.

 ಸೋಂಕು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ

ಸೋಂಕು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಿರುವುದರಿಂದ ಅದನ್ನು ವಾರದ ದಿನಗಳಲ್ಲೂ ಮುಂದುವರಿಸುವ ಖಡಕ್ ನಿರ್ಧಾರಕ್ಕೆ ಯಡಿಯೂರಪ್ಪ ಸರಕಾರ ಬರಬಹುದು ಎನ್ನುವ ಬಲವಾದ ಮಾತು ಕೇಳಿ ಬರುತ್ತಿದೆ. ಸೋಂಕು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲೂ ವಾರಪೂರ್ತಿ ಲಾಕ್‌ಡೌನ್ ಮಾಡುವುದೇ ಉತ್ತಮ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

 ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಶಿಫಾರಸು

ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಶಿಫಾರಸು

ಸ್ವಲ್ಪ ಸಡಿಲಗೊಳಿಸಿದರೂ ಜನರನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಆರ್ಥಿಕ ಚಟುವಟಿಕೆ ಏನೇ ಇರಲಿ, ಕೊನೆಯ ಪಕ್ಷ ಒಂದು ವಾರವಾದರೂ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ಇದ್ದರೆ, ನೈಟ್, ವೀಕೆಂಡ್ ಕರ್ಫ್ಯೂ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಸರಕಾರಕ್ಕೆ ಶಿಫಾರಸನ್ನು ಮಾಡಿದ್ದಾರೆ.

Recommended Video

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada
 ಲಸಿಕೆ ವಿತರಣೆ, ಲಾಕ್‌ಡೌನ್ ವಿಚಾರದಲ್ಲಿ ಪ್ರಮುಖ ನಿರ್ಧಾರ

ಲಸಿಕೆ ವಿತರಣೆ, ಲಾಕ್‌ಡೌನ್ ವಿಚಾರದಲ್ಲಿ ಪ್ರಮುಖ ನಿರ್ಧಾರ

ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯವನ್ನು ಆಲಿಸಿರುವ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಸೋಮವಾರ ಹನ್ನೊಂದು ಗಂಟೆಗೆ ಸಂಪುಟ ಸಭೆಯನ್ನು ಕರೆಯಲಾಗಿದೆ. ಉಚಿತ ಲಸಿಕೆ ವಿತರಣೆ ಮತ್ತು ಲಾಕ್‌ಡೌನ್ ವಿಚಾರದಲ್ಲಿ ಸರಕಾರ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

English summary
Cabinet Meeting On Apr 26, Yediyurappa Government May Take Tough Stand On Lockdown, Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X