• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಮೇಯರ್ ಆಗಿದ್ದ ಆರ್. ಶಂಕರ್ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ!

|

ಬೆಂಗಳೂರು, ಜ. 13: ಬೆಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಆಗಿದ್ದ ಆರ್. ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರದ ಮಾಜಿ ಶಾಸಕ. ಇದೀಗ ಎರಡನೇ ಬಾರಿ ಸಚಿವರಾಗಿ ಸಿಎಂ ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆ ಆಗಿರುವ, ಆರ್. ಶಂಕರ್ ಅವರು ಮೂಲತಃ ಬೆಂಗಳೂರಿನವರು. ತಮ್ಮ ರಾಜಕೀಯ ದೂರದೃಷ್ಟಿಯಿಂದ ಬಿಬಿಎಂಪಿ ಕಾರ್ಪೊರೇಟರ್ ಸ್ಥಾನದಿಂದ ಮಂತ್ರಿ ಪದವಿಗೇರಿದ ಚಾಣಾಕ್ಷ ರಾಜಕಾರಣಿ. ಅವರ ರಾಜಕೀಯ ಜೀವನದ ಸಂಪೂರ್ಣ ವ್ಯಕ್ತಿಚಿತ್ರಣ ಇಲ್ಲಿದೆ.

ಕುರುಬ ಸಮುದಾಯಕ್ಕೆ ಸೇರಿರುವ ಆರ್. ಶಂಕರ್ ಅವರು ಶಾಸಕರಾಬೇಕು ಎಂಬ ಒಂದೇ ಉದ್ದೇಶದಿಂದ ಬೆಂಗಳೂರಿನಿಂದ ರಾಣೆಬೆನ್ನೂರಿಗೆ ತೆರಳಿದ್ದರು. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಒಮ್ಮೆ ಸೋತಿದ್ದ ಅವರು, 2018ರಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಿಂದ (ಕೆಪಿಜೆಪಿ) ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದರು. ಅವರು ಗೆದ್ದಿದ್ದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ವಿರುದ್ಧ ಎಂಬುದು ಗಮನಿಸಬೇಕಾದ ಅಂಶ.

ನೂತನ ಸಚಿವ, ಶ್ರೀಮಂತ ರಾಜಕಾರಣಿ ಎಂಬಿಟಿ ನಾಗರಾಜ್ ವ್ಯಕ್ತಿಚಿತ್ರಣ!

2018ರಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಬಳಿಕ ಕೆಪಿಜೆಪಿಯನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರುವ ಮೂಲಕ ಅನರ್ಹ ಶಾಸಕರಾಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಶಂಕರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಅತಂತ್ರರಾಗಿದ್ದ ಶಂಕರ್ ಅವರಿಗೆ, ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಮತ್ತೆ ಸಚಿವರನ್ನಾಗಿ ಮಾಡಿದ್ದಾರೆ.

ಸಚಿವ ಆರ್. ಶಂಕರ್ ವ್ಯಕ್ತಿಪರಿಚಯ

* ಆರ್. ಶಂಕರ್ ಅವರ ಜನ್ಮಸ್ಥಳ ಬೆಂಗಳೂರು

* ಜನನ : ಫೆಬ್ರುವರಿ 1, 1965

* ತಂದೆ : ರಾಮಚಂದ್ರಪ್ಪ

* ವಿದ್ಯಾರ್ಹತೆ : ಎಸ್ಎಸ್ಎಲ್‌ಸಿ

* ಪತ್ನಿ ಹೆಸರು : ಧನಲಕ್ಷ್ಮೀ

* ಮಕ್ಕಳು : ಇಬ್ಬರು (ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಮಗಳು)

ನಾಲ್ಕನೇ ಬಾರಿ ಸಚಿವರಾದ ಅರವಿಂದ್ ಲಿಂಬಾವಳಿ ವ್ಯಕ್ತಿಚಿತ್ರಣ!

* 2008ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪಮೇಯರ್

* 2013ರಲ್ಲಿ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಮಾಜಿ ಸಚಿವ ಕೆ.ಬಿ. ಕೋಳಿವಾಡ ವಿರುದ್ಧ ಸ್ಪರ್ಧಿಸಿ ಸೋಲು

* 2018ರಲ್ಲಿ ಕೆಪಿಜೆಪಿ ಪಕ್ಷದಿಂದ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

* ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ವಿರುದ್ಧ ಜಯಗಳಿಸಿ ವಿಧಾನಸಭೆ ಪ್ರವೇಶ

* ಕಾಂಗ್ರೆಸ್-ಜೆಡಿಎಸ್ ಸರಕಾರದಲ್ಲಿ ಪರಿಸರ ಮತ್ತು ಅರಣ್ಯ ಸಚಿವರಾಗಿ ಮೊದಲ ಬಾರಿ ಮಂತ್ರಿ ಪದವಿ

* ಪೌರಾಡಳಿತ ಸಚಿವರಾಗಿಯೂ ಹೆಚ್ಚುವರಿ ಖಾತೆ

* 2019ರಲ್ಲಿ ಬದಲಾದ ರಾಜಕೀಯದಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ

* 2020ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ

* 2021ರಲ್ಲಿ ಈಗ ಮೂರನೆ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

English summary
BBMP former deputy mayor R Shankar was originally from Bengaluru. From his political foresight, he is an aspiring politician who has become minister from the position of BBMP corporator. Here is his full profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X