ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಯಾವ-ಯಾವ ಶಾಸಕರು ಸಂಪುಟ ಸೇರಲಿದ್ದಾರೆ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಒನ್ ಇಂಡಿಯಾ ಕನ್ನಡ 'ಸಂಪುಟ ಪುನಾರಚನೆಯಲ್ಲಿ ಯಾರಿಗೆ ಅವಕಾಶ ನೀಡಬೇಕು?' ಎಂದು ಓದುಗರನ್ನು ಪ್ರಶ್ನಿಸಿತ್ತು. 1,412 ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಕ್ರಿಯಿಸಿದ ಎಲ್ಲರಿಗೂ ಒನ್ ಇಂಡಿಯಾದ ಪರವಾಗಿ ಕೃತಜ್ಞತೆಗಳು.

ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯೋ?, ಪುನರ್ ರಚನೆಯೋ?ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯೋ?, ಪುನರ್ ರಚನೆಯೋ?

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 8 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ 6 ಸ್ಥಾನ ಕಾಂಗ್ರೆಸ್ ಪಾಲಿಗೆ, 2 ಸ್ಥಾನ ಜೆಡಿಎಸ್ ಪಾಲಿಗೆ ಸಿಗಲಿವೆ. ಕಾಂಗ್ರೆಸ್‌ನಲ್ಲಿ 6 ಸ್ಥಾನಗಳಿಗೆ ಡಜನ್‌ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಹಿರಿಯ ಶಾಸಕರು, ಮಾಜಿ ಸಚಿವರು ಸೇರಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ

ಸಂಪುಟ ವಿಸ್ತರಣೆ ಮತ್ತು ಪುನಾರಚನೆಯಲ್ಲಿ ಯಾರಿಗೆ ಅವಕಾಶ ನೀಡಬೇಕು? ಎಂದು ನಾಲ್ಕು ಆಯ್ಕೆಗಳನ್ನು ಜನರಿಗೆ ನೀಡಲಾಗಿತ್ತು. ಶೇ 16.57ರಷ್ಟು ಜನರು ಪುನಾರಚನೆ ಮಾಡುವುದು ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ...

ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯೋ?, ಪುನರ್ ರಚನೆಯೋ?ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯೋ?, ಪುನರ್ ರಚನೆಯೋ?

ಯಾರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು?

ಯಾರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು?

ಯಾರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು?
'ಸಂಪುಟ ಪುನಾರಚನೆಯಲ್ಲಿ ಯಾರಿಗೆ ಅವಕಾಶ ನೀಡಬೇಕು?' ಎಂದು ಒನ್ ಇಂಡಿಯಾ ಕನ್ನಡ ಓದುಗರನ್ನು ಪ್ರಶ್ನಿಸಿತ್ತು.
* ಹೊಸ, ಯುವ ಶಾಸಕರಿಗೆ
* ಅನುಭವಿ ರಾಜಕಾರಣಿಗಳಿಗೆ
* ಉತ್ತರ ಕರ್ನಾಟಕದ ಶಾಸಕರಿಗೆ
* ಪುನಾರಚನೆ ಆಗುವುದು ಬೇಡ

ಎಂಬ ಆಯ್ಕೆಗಳನ್ನು ನೀಡಲಾಗಿತ್ತು. 1412 ಓದುಗರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯಾವುದಕ್ಕೆ ಎಷ್ಟು ಮತ?

ಯಾವುದಕ್ಕೆ ಎಷ್ಟು ಮತ?

* ಹೊಸ, ಯುವ ಶಾಸಕರಿಗೆ ಎಂದು ಶೇ 42.63 ರಷ್ಟು
* ಅನುಭವಿ ರಾಜಕಾರಣಿಗಳಿಗೆ ಎಂದು ಶೇ 13.31 ರಷ್ಟು
* ಉತ್ತರ ಕರ್ನಾಟಕದ ಶಾಸಕರಿಗೆ ಎಂದು 27.48 ರಷ್ಟು
* ಪುನಾರಚನೆ ಆಗುವುದು ಬೇಡ 16.57 ರಷ್ಟು ಜನರು ವೋಟ್ ಮಾಡಿದ್ದಾರೆ.

ಹೊಸ ಯುವ ಶಾಸಕರಿಗೆ ಅವಕಾಶ

ಹೊಸ ಯುವ ಶಾಸಕರಿಗೆ ಅವಕಾಶ

ಹೊಸ, ಯುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಿ ಎಂದು 602 ಜನರು ಮತ ಹಾಕಿದ್ದಾರೆ. ಎಂದು ಶೇ 42.63 ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಸಂಪುಟ ಪುನಾರಚನೆ ಬೇಡ

ಸಂಪುಟ ಪುನಾರಚನೆ ಬೇಡ

ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಮಾತ್ರ ಕಳೆದಿದೆ. ಆದ್ದರಿಂದ ಈಗ ಸಂಪುಟ ಪುನಾರಚನೆ ಮಾಡುವುದು ಬೇಡ ಎಂದು ಶೇ 16.57ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಈ ಆಯ್ಕೆಗೆ 234 ಜನರು ಮತ ಹಾಕಿದ್ದಾರೆ.

English summary
Karnataka Chief Minister H.D.Kumaraswamy cabinet expansion will be held on December 22, 2018. Here are the poll survey result of the kannada.oneindia.com.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X