ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಿಸಿ ಪಾಟೀಲ್ ಟ್ವೀಟ್

|
Google Oneindia Kannada News

Recommended Video

ಕಾಂಗ್ರೆಸ್ ವಿರುದ್ಧವೇ ಮಾತನಾಡಿದ ಬಿ.ಸಿ. ಪಾಟೀಲ್..! | Oneindia Kannada

ಬೆಂಗಳೂರು, ಅಕ್ಟೋಬರ್ 07: ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ ಮುಂದೆ ಮಂಡಿಯೂರಿ, ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ನನಗೆ ನನ್ನ ಕ್ಷೇತ್ರದ ಮತದಾರರೇ ಹೈಕಮಾಂಡ್. ಸಂಪುಟ ವಿಸ್ತರಣೆಯನ್ನು ವಿಳಂಬದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಅವರು ಗರಂ ಆಗಿ ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗದಿಂದ 16 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಕೇವಲ ಒಬ್ಬರಿಗೆ ಸಚಿವ ಸ್ಥಾನ ನೀಡಿದ್ದಾರೆ. ಲಿಂತಾಯತ ಶಾಸಕರು ಏನು ಮಾಡಿದ್ದಾರೆ.

ನಿಗಮ ಮಂಡಳಿಗಳೆಲ್ಲ ಬೇಡ, ಸಚಿವ ಸ್ಥಾನವೇ ಬೇಕು: ಬಿಸಿ ಪಾಟೀಲ್‌ನಿಗಮ ಮಂಡಳಿಗಳೆಲ್ಲ ಬೇಡ, ಸಚಿವ ಸ್ಥಾನವೇ ಬೇಕು: ಬಿಸಿ ಪಾಟೀಲ್‌

ನಮ್ಮಲ್ಲಿಯೇ ಯಾರೋ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಕರೆ ಮಾಡಿ ಆಮಿಷ ಒಡ್ಡಿದ್ದು ನಿಜ: ಬಿಸಿ ಪಾಟೀಲ್ಯಡಿಯೂರಪ್ಪ ಕರೆ ಮಾಡಿ ಆಮಿಷ ಒಡ್ಡಿದ್ದು ನಿಜ: ಬಿಸಿ ಪಾಟೀಲ್

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದು, ಇದಕ್ಕೆ ನಾನಾ ಕಾರಣಗಳಿರಬಹುದು. ಆದರೆ, ಇದರಿಂದ ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಅನ್ಯಾಯವಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದ್ದಂತಾಗಿದೆ ಎಂದು ತಮ್ಮ ಪಕ್ಷದ ವಿರುದ್ಧವೇ ಬಿಸಿ ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಟ್ಯಾಗ್ ಮಾಡಿ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಬೇಡುವ ಪರಿಸ್ಥಿತಿ: ಬಿಸಿ ಪಾಟೀಲ್

ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡಬೇಡುವ ಪರಿಸ್ಥಿತಿ: ಬಿಸಿ ಪಾಟೀಲ್

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ ಮುಂದೆ ಮಂಡಿಯೂರಿ, ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಬಿ.ಸಿ. ಪಾಟೀಲ್​ ಈ ಹಿಂದೆ ಕಾಂಗ್ರೆಸ್​ ಪಕ್ಷದ ಧೋರಣೆಯನ್ನು ಟೀಕಿಸಿದ್ದರು. ಈಗ ಸಂಪುಟ ವಿಸ್ತರಣೆಯನ್ನು ವಿಳಂಬ ಮಾಡುವ ಮೂಲಕ ಶಾಸಕರನ್ನು ಅವಮಾನಿಸಲಾಗುತ್ತಿದೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗುತ್ತಿದೆ ಮತ್ತು ಪಕ್ಷದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಪಾಟೀಲ್​ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್​ ವಿರುದ್ಧ ದನಿಯೆತ್ತಿದ್ದ ಬಿಸಿ ಪಾಟೀಲ್

ಉತ್ತರ ಕರ್ನಾಟಕ ಭಾಗದಿಂದ 16 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಕೇವಲ ಒಬ್ಬರಿಗೆ ಸಚಿವ ಸ್ಥಾನ ನೀಡಿದ್ದಾರೆ. ಲಿಂತಾಯತ ಶಾಸಕರು ಏನು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಹಿರೇಕೆರೂರು ಕ್ಷೇತ್ರ ಕಾಂಗ್ರೆಸ್​ ಗೌರವವನ್ನು ಎತ್ತಿ ಹಿಡಿದಿದೆ. ಬಿಜೆಪಿಯವರು 25 ಕೋಟಿ ರೂ. ಮತ್ತು ಮಂತ್ರಿ ಸ್ಥಾನ ಕೊಡುತ್ತೇವೆ ಎಂದರು. ನಾನು ಹಣಕ್ಕೆ ಆಸೆ ಪಡುವವನಲ್ಲ. ಕ್ಷೇತ್ರದ ಮತದಾರರೇ ನನ್ನ ಹೈಕಮಾಂಡ್​ ಎಂದಿದ್ದಾರೆ.

ಸಂಪುಟ ವಿಸ್ತರಣೆ: ಆಕಾಂಕ್ಷಿಗಳ ಗೂಟದ ಕಾರು ಏರುವ ಕನಸು ಮತ್ತೆ ಭಗ್ನಸಂಪುಟ ವಿಸ್ತರಣೆ: ಆಕಾಂಕ್ಷಿಗಳ ಗೂಟದ ಕಾರು ಏರುವ ಕನಸು ಮತ್ತೆ ಭಗ್ನ

ನಿಮ್ಮಂಥ ನಾಯಕರು ಬಿಜೆಪಿಗೆ ಬೇಕಿದೆ

ನಿಮಗೆ ಕಾಂಗ್ರೆಸ್ಸಿನ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯದು, ನಿಮ್ಮಂಥವರು ಎಲ್ಲಾ ಪಕ್ಷಕ್ಕೂ ಸಲ್ಲುತ್ತಾರೆ. ಬಿಜೆಪಿಗೆ ಬಂದು ಬಿಡಿ, ನಿಮಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ರಾಜಕೀಯ ಕುಟುಂಬದ ಸ್ವಂತ ಅಸ್ತಿ ಆಗುತ್ತಿದೆ

ರಾಜಕೀಯ ಕುಟುಂಬದ ಸ್ವಂತ ಅಸ್ತಿ ಆಗುತ್ತಿದೆ, ಅದಕ್ಕೆ ನಿಮಗೆ ಸಚಿವ ಸ್ಥಾನ ಸಿಗುತ್ತಿಲ್ಲ, ನೀವು ಹೋರಾಟ ಮಾಡಿ ಪಡೆದುಕೊಳ್ಳಬೇಕು ಎಂದು ಷಡಕ್ಷರಿ ಎಂಬುವರು ಟ್ವೀಟ್ ಮಾಡಿ ಬೆಂಬಲಿಸಿದ್ದಾರೆ.

ದೇವೇಗೌಡರಿಂದ ಸಿಕ್ತು ಗ್ರೀನ್ ಸಿಗ್ನಲ್, ಅ. 12ರೊಳಗೆ ಸಂಪುಟ ವಿಸ್ತರಣೆ ದೇವೇಗೌಡರಿಂದ ಸಿಕ್ತು ಗ್ರೀನ್ ಸಿಗ್ನಲ್, ಅ. 12ರೊಳಗೆ ಸಂಪುಟ ವಿಸ್ತರಣೆ

ಸಚಿವರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯನಾ?

ಸಚಿವರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯನಾ? ಹಿರೇಕೆರೂರಿನ ಶಾಸಕರಾಗಿ ನೀವು ಈಗಲೂ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು.

ಸುಮ್ಮನಿದ್ರೆ ಹೇಡಿತನ ಎಂದು ತಿಳಿಯುತ್ತಾರೆ

ಸುಮ್ಮನಿದ್ರೆ ಹೇಡಿತನ ಎಂದು ತಿಳಿಯುತ್ತಾರೆ, ನಿಮ್ಮ ಹಕ್ಕಿಗಾಗಿ ನೀವು ದನಿ ಎತ್ತಿದ್ದಾರೆ. ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

English summary
JDS- Congress Cabinet Expansion : Hirekerur MLA BC Patil tweeted with anger calling Congress is killing democracy by delaying cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X