ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ; ಶಾಸಕರಿಗೆ ಸಂಕಷ್ಟ ತಂದ ಹೈಕಮಾಂಡ್ ಸೂಚನೆ?

|
Google Oneindia Kannada News

Recommended Video

ಬಿಎಸ್ವೈ ಗೆ ಹೈಕಮಾಂಡ್ ಕೊಟ್ಟ ಸೂಚನೆ ಏನು? | BSY | BJP | HIGHCOMMAND | ONEINDIA KANNADA

ಬೆಂಗಳೂರು, ಜನವರಿ 24 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ಮಧ್ಯಾಹ್ನ ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪುನಃ ಚರ್ಚೆಗಳು ಆರಂಭವಾಗಿದೆ. ಆದರೆ, ಹೈಕಮಾಂಡ್ ಸೂಚನೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ತರುವ ಸಾಧ್ಯತೆ ಇದೆ.

15 ಕ್ಷೇತ್ರ ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು, ಮೂಲ ಬಿಜೆಪಿಯವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ 16 ಸ್ಥಾನಗಳು ಖಾಲಿ ಇವೆ. ಇದಕ್ಕೆ 2 ಡಜನ್‌ಗೂ ಅಧಿಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ.

ಶುಕ್ರವಾರ ಸಿಎಂ ವಾಪಸ್: ಕಾಯುತ್ತಿದೆ ಸಚಿವಾಕಾಂಕ್ಷಿಗಳ ದಂಡುಶುಕ್ರವಾರ ಸಿಎಂ ವಾಪಸ್: ಕಾಯುತ್ತಿದೆ ಸಚಿವಾಕಾಂಕ್ಷಿಗಳ ದಂಡು

"ದಾವೋಸ್‌ನಿಂದ ಮರಳಿದ ಕೂಡಲೇ ಸಂಪುಟ ವಿಸ್ತರಣೆ ನಡೆಯಲಿದೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದರು. ಶುಕ್ರವಾರ ಮಧ್ಯಾಹ್ನ ಅವರು ರಾಜ್ಯಕ್ಕೆ ಮರಳಲಿದ್ದು, ಸಂಪುಟ ವಿಸ್ತರಣೆಯ ಚಟುವಟಿಕೆ ಗರಿಗೆದರಲಿದೆ.

ಸಂಪುಟ ವಿಸ್ತರಣೆ ವಿಳಂಬವಾಗಿರುವುದು ನಿಜ: ಡಾ. ಅಶ್ವಥ್‌ನಾರಾಯಣಸಂಪುಟ ವಿಸ್ತರಣೆ ವಿಳಂಬವಾಗಿರುವುದು ನಿಜ: ಡಾ. ಅಶ್ವಥ್‌ನಾರಾಯಣ

ಬಿಜೆಪಿಯ ರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆಯಾಗಿದೆ. ಜೆ. ಪಿ. ನಡ್ಡಾ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ನೂತನ ಅಧ್ಯಕ್ಷರನ್ನು ಭೇಟಿಯಾಗಲಿದ್ದು, ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಸಂಪುಟ ವಿಸ್ತರಣೆ: ಯಡಿಯೂರಪ್ಪ ಗೆ ಅಮಿತ್ ಶಾ ಸೂಚನೆಸಂಪುಟ ವಿಸ್ತರಣೆ: ಯಡಿಯೂರಪ್ಪ ಗೆ ಅಮಿತ್ ಶಾ ಸೂಚನೆ

ಹೈಕಮಾಂಡ್ ಸೂಚನೆ ಏನು?

ಹೈಕಮಾಂಡ್ ಸೂಚನೆ ಏನು?

ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ವಲಸೆ ಬಂದು ಶಾಸಕರಾಗಿರುವವರ ಪೈಕಿ 6 ಶಾಸಕರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಮೂಲ ಬಿಜೆಪಿಯವರಿಗೂ ಅವಕಾಶ ನೀಡಬೇಕು ಎಂಬದು ಹೈಕಮಾಂಡ್ ಸೂಚನೆಯಾಗಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪಗೆ ಹೊಸ ಸಂಕಷ್ಟ ತರುವ ಸಾಧ್ಯತೆ ಇದೆ.

ಯಡಿಯೂರಪ್ಪ ತೀರ್ಮಾನ ಅಂತಿಮ

ಯಡಿಯೂರಪ್ಪ ತೀರ್ಮಾನ ಅಂತಿಮ

ಉಪ ಚುನಾವಣೆಯಲ್ಲಿ ಗೆದ್ದ 12 ಶಾಸಕರಲ್ಲಿ ಯಾವ 6 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಬೇಕಿದೆ. ಉಳಿದ ಸ್ಥಾನಗಳಿಗೆ ಮೂಲ ಬಿಜೆಪಿಗರನ್ನು ಪರಿಗಣಿಸಲಾಗುತ್ತದೆ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ.

ದೆಹಲಿ ಚುನಾವಣೆ ಮುಗಿಯಲಿ

ದೆಹಲಿ ಚುನಾವಣೆ ಮುಗಿಯಲಿ

ಪಕ್ಷದ ಹೈಕಮಾಂಡ್ ನಾಯಕರು ದೆಹಲಿ ವಿಧಾನಸಭೆ ಚುನಾವಣೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ. ಅಲ್ಲಿಯ ತನಕ ಕಾಯಿರಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ.

ಸೋತವರ ಕಥೆ ಏನು?

ಸೋತವರ ಕಥೆ ಏನು?

ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಗ್, ಎಚ್. ವಿಶ್ವನಾಥ್ ಸೋತಿದ್ದಾರೆ. ಸೋತವರಿಗೂ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಈಗ ಗೆದ್ದ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ಸಿಗುವುದು ಅನುಮಾನವಾಗಿದೆ. ಇನ್ನೂ ಚುನಾವಣೆಯಲ್ಲಿ ಟಿಕೆಟ್ ಬಿಟ್ಟುಕೊಟ್ಟ ಆರ್. ಶಂಕರ್, ರೋಷನ್ ಬೇಗ್‌ಗೆ ಯಾವ ಸ್ಥಾನಮಾನ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬಿ. ಸಿ. ಪಾಟೀಲ್ ಹೇಳಿದ್ದೇನು?

ಬಿ. ಸಿ. ಪಾಟೀಲ್ ಹೇಳಿದ್ದೇನು?

ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಬಿ. ಸಿ. ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಏನಾಗುತ್ತಿದೆ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿಗಳು ಬಂದ ನಂತರವೇ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸುತ್ತಾರೆ. ಉಳಿದ ವಿಚಾರಗಳು ತಿಳಿದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

English summary
BJP high command direction to B.S.Yediyurappa about cabinet expansion. In 12 MLA's who won by election 6 will get minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X