ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರಾಗುವ ಕನಸು: ಮೇ 6ರ ಬಳಿಕ ನನಸು

|
Google Oneindia Kannada News

ಬೆಂಗಳೂರು, ಮೇ 4: ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ನಿರೀಕ್ಷೆಯಂತೆ ಅವರು ಇಲ್ಲಿ ಯಾವುದೇ ಬದಲಾವಣೆಯನ್ನು ತಕ್ಷಣದಲ್ಲಿಯೇ ಕೈಗೊಂಡಿಲ್ಲ. ಒಂದಷ್ಟು ಕುತೂಹಲ, ತಳಮಳವನ್ನು ಉಳಿಸಿಯೇ ಮರಳಿದ್ದಾರೆ.

ಅಮಿತ್ ಶಾ ದೆಹಲಿಗೆ ವಾಪಸ್, ಬಸವರಾಜ ಬೊಮ್ಮಾಯಿ ಸೇಫ್! ಅಮಿತ್ ಶಾ ದೆಹಲಿಗೆ ವಾಪಸ್, ಬಸವರಾಜ ಬೊಮ್ಮಾಯಿ ಸೇಫ್!

ಗಜಪ್ರಸವವಾದ ಸಂಪುಟ ವಿಸ್ತರಣೆ

ಗಜಪ್ರಸವವಾದ ಸಂಪುಟ ವಿಸ್ತರಣೆ

ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬುದು ಗಜಪ್ರಸವವಾಗಿದೆ. ಕಳೆದ ಆರು ತಿಂಗಳಿನಿಂದಲೂ ಪದೇ ಪದೇ ಚರ್ಚೆಗೆ ಬರುತ್ತಲೇ ಇದೆ. ಇದಕ್ಕಾಗಿ ಮುಖ್ಯಮಂತ್ರಿ ಹಲವು ಬಾರಿ ದೆಹಲಿಗೆ ಹೋಗಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇನ್ನು ಬಿಜೆಪಿ ಪ್ರಮುಖ ನೀತಿ ನಿರ್ಧಾರಕರಲ್ಲಿ ಒಬ್ಬರಾದ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದರಾದರೂ ಪರಿಹಾರ ಆಗುತ್ತದೆಯೇ ಎಂದು ನಿರೀಕ್ಷಿಸಿದವರಿಗೆ ಮತ್ತೆ ಹುಸಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದು, ಅವರು ಮೇ 6ರಂದು ಮರಳುತ್ತಾರೆ. ಅವರು ಬಂದ ಬಳಿಕವೇ ಕರ್ನಾಟಕದ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಎಂಬ ಸಂದೇಶ ರವಾನೆಯಾಗಿದೆ.

ಬೊಮ್ಮಾಯಿಗಿಲ್ಲ ಕಂಟಕ:

ಬೊಮ್ಮಾಯಿಗಿಲ್ಲ ಕಂಟಕ:

ಅಮಿತ್ ಶಾ ಅವರ ಬಂದು ಹೋದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಖುರ್ಚಿ ಸೇಫ್ ಎಂಬ ಲಕ್ಷಣ ತೋರಿಸುತ್ತಿದೆ. ಈ ಮೂಲಕ ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂರ ಮೂರನೇ ಬಾರಿ ಸೇಫ್ ಆದಂತಾಗಿದೆ. ಬಿಟ್‌ಕಾಯಿನ್ ಹಗರಣದಲ್ಲಿ ಬೊಮ್ಮಾಯಿ ಖುರ್ಚಿ ಕಳೆದುಕೊಳ್ಳುತ್ತಾರೆ ಎಂಬ ವಾತಾವರಣವೇ ನಿರ್ಮಾಣವಾಗಿತ್ತು. ಆಗಲೂ ಪ್ರಧಾನಿ ಆದಿಯಾಗಿ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂಬ ಹೇಳಿಕೆ ಬಂತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪಗಳೂ ಬಸವರಾಜ ಬೊಮ್ಮಾಯಿ ಅವರ ಖುರ್ಚಿ ಕಸಿದುಕೊಳ್ಳಬಹುದು ಎಂದು ಹೇಳಲಾಗಿತ್ತು. ಆಗಲೂ ಪಾರಾಗಿದ್ದರು. ಈಗ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಾಯಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ದೆಹಲಿ ನಾಯಕರು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ನಾಲ್ವರು ಉಪಮುಖ್ಯಮಂತ್ರಿಗಳು:

ನಾಲ್ವರು ಉಪಮುಖ್ಯಮಂತ್ರಿಗಳು:

ಬಸವರಾಜ ಬೊಮ್ಮಾಯಿ ಅವರ ಸಂಪುಟ ಬಲಪಡಿಸಲು ಮತ್ತು ಮುಂದಿನ ಚುನಾವಣೆ ವೇಳೆಗೆ ಎಲ್ಲಾ ಸಮುದಾಯಗಳಿಗೂ ಅಧಿಕಾರ ನೀಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಬಿಜೆಪಿ ನಾಲ್ವರು ಉಪಮುಖ್ಯಮಂತ್ರಿಗಳನ್ನು ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಪ್ರಾದೇಶಿಕ, ಜಾತಿ ಪರಿಗಣಿಸಿ ನಾಲ್ವರು ಉಪಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಲಿವೆ. ಆಮೂಲಕ ಸಂಪುಟದಲ್ಲಿ ಆಮೂಲಾಗ್ರ ಬದಲಾವಣೆ ತರಲು ನಿರ್ಧರಿಸಲಾಗಿದೆ.


ಬಿಜೆಪಿ ಕೋರ್ ಕಮಿಟಿ ಸಭೆ ರದ್ದು ಮಾಡಿದ ಅಮಿತ್ ಶಾ ಅವರು ಮಧ್ಯಾಹ್ನದ ಭೋಜನ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿಯೇ ಪ್ರಮುಖ ರಾಜಕೀಯ ಚರ್ಚೆಗಳಾಗಿವೆ.

ಹೊಸ ಮುಖಗಳಿಗೆ ಮಣೆ:

ಹೊಸ ಮುಖಗಳಿಗೆ ಮಣೆ:

ಸಂಪುಟದಲ್ಲಿ ಸದ್ಯ 5 ಸ್ಥಾನಗಳು ಖಾಲಿ ಇವೆ. ಈ ಮಧ್ಯೆ ಐದಾರು ಸಚಿವರಿಗೆ ಕೊಕ್ ಕೊಡಲು ತೀರ್ಮಾನಿಸಲಾಗಿದೆ. ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ, ವಿ.ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚಾವ್ಹಾಣ್ ಸಹಿತ ಹಲವರು ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಅದೇ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ, ಬಿ.ವೈ. ರಾಘವೇಂದ್ರ, ಪಿ. ರಾಜೀವ್, ಎಂ.ಪಿ. ರೇಣುಕಾಚಾರ್ಯ ಹೀಗೆ ಹಲವು ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ. ಯಾರಿಗೆ ಅದೃಷ್ಟ ಎಂಬುದು ಮೇ 6ರ ಬಳಿಕವೇ ನಿರ್ಧಾರವಾಗಲಿದೆ.

English summary
Union Home Minister Amit Shah has come and retrun fromKarnataka. As expected, they have not made any immediate changes here. Cabinet expansion Decision after on May 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X