ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ ಸನಿಹ: ಕಾಂಗ್ರೆಸ್‌ಗೆ ಬಂಡಾಯದ ಭೀತಿ

|
Google Oneindia Kannada News

Recommended Video

ಸಂಪುಟ ವಿಸ್ತರಣೆ ಸನಿಹ: ಕಾಂಗ್ರೆಸ್‌ಗೆ ಬಂಡಾಯದ ಭೀತಿ | Oneindia Kannada

ಬೆಂಗಳೂರು, ನವೆಂಬರ್ 30: ಸಂಪುಟ ವಿಸ್ತರಣೆ ದಿನ ಸಮೀಪಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್‌ಗೆ ಬಂಡಾಯದ ಭೀತಿ ಎದುರಾಗಿದೆ.

ಹತ್ತು ಮಂದಿ ಅತೃಪ್ತ ಶಾಸಕರು ಇಂದು ಮುಂಬೈಗೆ ತೆರಳಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಇದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಸಹ ಇದಕ್ಕೆ ಪುಷ್ಠಿನೀಡುವಂತೆಯೇ ಇದೆ.

ಬೆಳಗಾವಿ ಅಧಿವೇಶನಕ್ಕೆ ಮುಂಚೆ ಸಂಪುಟ ವಿಸ್ತರಣೆ ಪಕ್ಕಾಬೆಳಗಾವಿ ಅಧಿವೇಶನಕ್ಕೆ ಮುಂಚೆ ಸಂಪುಟ ವಿಸ್ತರಣೆ ಪಕ್ಕಾ

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಇಂದು ಮುಂಬೈಗೆ ಹಾರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಆದರೆ ಅದನ್ನು ಸ್ವತಃ ರಮೇಶ್ ಅವರೇ ಅಲ್ಲಗಳೆದಿದ್ದಾರೆ. ಆದರೆ ಬೆಂಬಲಿಗರಿಗೆ ಸಚಿವ ಸ್ಥಾನ ನೀಡದೇ ಹೋದರೆ ಬಂಡಾಯದ ಮುನ್ಸೂಚನೆಯನ್ನೂ ನೀಡಿದ್ದಾರೆ.

ಈ ವಿಷಯದ ಮಾಧ್ಯಮಗಳಿಗೆ ಪ್ರತಿಕ್ರಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, 'ಯಾರು ಎಲ್ಲಿಗೆ ಬೇಕಾದ್ರು ಹೋಗಲಿ, ಮುಂಬೈ, ದೆಹಲಿ ಬೇಕಾದರೆ ಸಿಂಗಪುರಕ್ಕೂ ಹೋಗಲಿ ನಮಗೇನು' ಎಂದು ಸಿಟ್ಟಾದರು. ಅವರೇ ಸಿಟ್ಟೆ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಾಕಿರುವುದನ್ನು ಸ್ಪಷ್ಟಪಡಿಸುತ್ತಿತ್ತು.

ಬೆಂಬಲಿಗರಿಗಾಗಿ ರಮೇಶ್ ಜಾರಕಿಹೊಳಿ ಲಾಭಿ

ಬೆಂಬಲಿಗರಿಗಾಗಿ ರಮೇಶ್ ಜಾರಕಿಹೊಳಿ ಲಾಭಿ

ಈ ಮುಂಚೆಯೇ ಕೂಡಾ ರಮೇಶ್ ಜಾರಕಿಹೊಳಿ ಬಂಡಾಯದ ಮುನ್ಸೂಚನೆ ತೋರಿದ್ದರು, ಬೆಂಬಲಿಗ ಶಾಸಕರನ್ನು ಒಟ್ಟು ಮಾಡಿಕೊಂಡು ಗೋವಾ ದಾರಿದಾರಿ ಹಿಡಿದಿದ್ದಾಗಿ ಹಿಂದೊಮ್ಮೆ ಸುದ್ದಿಯಾಗಿತ್ತು. ಆದರೆ ಅದು ಸುಳ್ಳಾಯಿತು. ಆ ನಂತರ ಸಹ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೆಂಬಲಿತ ಶಾಸಕರಿಗೆ ಸಚಿವ ಸ್ಥಾನಕ್ಕಾಗಿ ರಮೇಶ್‌ ಒತ್ತಾಯ ಮಾಡಿದ್ದರು.

ಬಿ.ಸಿ.ಪಾಟೀಲ್‌ ಮಾತು

ಬಿ.ಸಿ.ಪಾಟೀಲ್‌ ಮಾತು

ಬಿ.ಸಿ.ಪಾಟೀಲ್ ಅವರನ್ನು ಈಗಾಗಲೇ ಬಿಜೆಪಿ ನಾಯಕರು ಸಂಪರ್ಕ ಮಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿ.ಸಿ.ಪಾಟೀಲ್ ಅವರು ನಾನು ಎಲ್ಲಿಗೂ ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಅವರು ರಮೇಶ್ ಜಾರಕಿಹೊಳಿ ಅವರ ಬೆಂಬಲಿತ ಶಾಸಕರ ಪಟ್ಟಿಯಲ್ಲಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದಲ್ಲಿ ಪಕ್ಷದ ವಿರುದ್ಧ ನಿಲ್ಲುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ! ಕುಮಾರಸ್ವಾಮಿ ಮಾತು ಕೇಳಿ ಕಂಗಾಲಾಗಿರುವ ರಾಹುಲ್ ಗಾಂಧಿ!

ಸತೀಶ್ ಜಾರಕಿಹೊಳಿ ಎಚ್ಚರಿಕೆ

ಸತೀಶ್ ಜಾರಕಿಹೊಳಿ ಎಚ್ಚರಿಕೆ

ಸಚಿವ ಸ್ಥಾನ ಕೈತಪ್ಪಿದ್ದಾಗ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದ ಸತೀಶ್ ಜಾರಕಿಹೊಳಿ ಅವರು ಆಗಾಗ್ಗೆ ಮೈತ್ರಿ ಸರ್ಕಾರದ ಹುಳುಕುಗಳ ಪ್ರಸ್ತಾಪ ಮಾಡುತ್ತಾ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ವಿಷಯದಲ್ಲಿ ಈಗಾಗಲೇ ಹಿನ್ನಡೆ ಅನುಭವಿಸಿರುವ ಅವರು ಈ ಬಾರಿ ಸಚಿವ ಸ್ಥಾನ ಕೈತಪ್ಪಿದರೆ ಪಕ್ಷದ ವಿರುದ್ಧ ನಿಲ್ಲುವ ಸಾಧ್ಯತೆ ಇದೆ.

ಎಂಟಿಬಿ ನಾಗರಾಜ್‌ ಜೊತೆ ಮೂವರು ಶಾಸಕರು

ಎಂಟಿಬಿ ನಾಗರಾಜ್‌ ಜೊತೆ ಮೂವರು ಶಾಸಕರು

ಸಚಿವ ಸ್ಥಾನದ ರೇಸಿನಲ್ಲಿ ಎಂಟಿಬಿ ನಾಗರಾಜು ಸಹ ಮೊದಲಿಗೆ ಇದ್ದಾರೆ. ಅವರ ಜೊತೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಶಿಡ್ಲಘಟ್ಟ ಶಾಸಕ ಮುನಿಯಪ್ಪ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರುಗಳು ಇದ್ದಾರೆ. ಸಿದ್ದರಾಮಯ್ಯ ಆಪ್ತರಾಗಿದ್ದ ಎಂಟಿಬಿ ನಾಗರಾಜು ಮೊದಲ ಸುತ್ತಿನಲ್ಲಿ ಸಚಿವ ಸ್ಥಾನ ಸಿಗದೇ ಹೋದಾಗ ಸಿದ್ದರಾಮಯ್ಯ ವಿರುದ್ಧವೇ ಬಂಡಾಯ ಎದ್ದಿದ್ದರು.

ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್

ಬಂಡಾಯ ಶಮನಕ್ಕೆ ಸಿದ್ದರಾಮಯ್ಯ ಮದ್ದು

ಬಂಡಾಯ ಶಮನಕ್ಕೆ ಸಿದ್ದರಾಮಯ್ಯ ಮದ್ದು

ಸಂಪುಟ ವಿಸ್ತರಣೆ ನಂತರ ಪಕ್ಷದಲ್ಲಿ ಉಂಟಾಗುವ ಬಂಡಾಯವನ್ನು ಶಮನ ಮಾಡುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ವಹಿಸಿದೆ. ಹಾಗಾಗಿ ಸಿದ್ದರಾಮಯ್ಯ ಅವರು ತಮ್ಮ ಮೆಚ್ಚಿನ ಶಿಷ್ಯ ಜಮೀರ್ ಅವರ ನೆರವಿನೊಂದಿಗೆ ಈಗಾಗಲೇ ಎಲ್ಲ ಸಚಿವಾಕಾಂಕ್ಷಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಸೂಚನೆ: ದೆಹಲಿಗೆ ತೆರಳಿದ ಕಾಂಗ್ರೆಸ್ ನಾಯಕರುಸಿದ್ದರಾಮಯ್ಯ ಸೂಚನೆ: ದೆಹಲಿಗೆ ತೆರಳಿದ ಕಾಂಗ್ರೆಸ್ ನಾಯಕರು

English summary
Cabinet expansion may happen on Monday or Thursday. Congress party afraid of dissidents. High command ask Siddaramaiah to handle dissident MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X