ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ಗೂ ಮುನ್ನಾ ಸಂಪುಟ ವಿಸ್ತರಣೆ, ಎಂಬಿ ಪಾಟೀಲ್‌ಗೆ ಸಚಿವ ಸ್ಥಾನ ಸಾಧ್ಯತೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 27: ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಶಾಸಕರಿಗೆ ಮಣೆ ಹಾಕುವ ಸಲುವಾಗಿ ಬಾಕಿ ಇರುವ ಖಾತೆಗಳ ಹಂಚಿಕೆಗೆ ಕಾಂಗ್ರೆಸ್ ಕೈ ಹಾಕಿದೆ.

ಬಜೆಟ್ ಮುನ್ನವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎನ್ನಲಾಗಿದ್ದು. ಜೂನ್ 30ರಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.

ಸಚಿವ ಸ್ಥಾನ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಲಾಗುತ್ತಿದೆಯಾ?ಸಚಿವ ಸ್ಥಾನ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಲಾಗುತ್ತಿದೆಯಾ?

ಕಾಂಗ್ರೆಸ್‌ 6 ಖಾತೆಗಳನ್ನು ಉಳಿಸಿಕೊಂಡಿದ್ದು ಅದರಲ್ಲಿ 5 ಖಾತೆಗಳ ಹಂಚಿಕೆ ನಡೆಯಲಿದೆ. ಇನ್ನೊಂದು ಖಾತೆಯನ್ನು ಬಜೆಟ್ ನಂತರ ಹಂಚುವ ಸಾಧ್ಯತೆ ಇದೆ.

Cabinet expansion before budget, MB Patil may get portfolio

ಅತೃಪ್ತ ಶಾಸಕರ ಬಣದ ಪ್ರಮುಖ ಎಂ.ಬಿ.ಪಾಟೀಲ್ ಅವರು ನಿನ್ನೆ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರಿಗೆ ಖಾತೆ ಸಿಗುವುದು ಬಹುತೇಕ ಖಚಿತ.

ರಾಹುಲ್ ಗಾಂಧಿ ಮುಂದೆ ಮತ್ತೆ ಅಳಲು ತೋಡಿಕೊಳ್ಳಲಿದ್ದಾರಾ ರಾಜ್ಯ ಕಾಂಗ್ರೆಸ್ಸಿಗರು?ರಾಹುಲ್ ಗಾಂಧಿ ಮುಂದೆ ಮತ್ತೆ ಅಳಲು ತೋಡಿಕೊಳ್ಳಲಿದ್ದಾರಾ ರಾಜ್ಯ ಕಾಂಗ್ರೆಸ್ಸಿಗರು?

ಎಂಬಿ ಪಾಟೀಲ್, ಬಿ.ಕೆ.ಸಂಗಮೇಶ್ (ಲಿಂಗಾಯತು), ಸಿ.ಎಸ್.ಶಿವಳ್ಳಿ (ಕುರುಬ), ಈ ತುಕಾರಾಂ (ಎಸ್‌ಟಿ), ರಾಮಲಿಂಗಾ ರೆಡ್ಡಿ ಅಥವಾ ಎಂ ಕೃಷ್ಣಪ್ಪ (ರೆಡ್ಡಿ-ಒಕ್ಕಲಿಗ) ಅವರುಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

English summary
Congress planing to expansion the cabinet and 5 more MLA's to the cabinet. They have 6 portfolio's in their account. dissident MLA MB Patil may get portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X