ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವರು ಸಚಿವರಿಗೆ ಕೊಕ್: ಬಿಜೆಪಿಯ ಯಾವ ಶಾಸಕರಿಗೆ ಸಚಿವ ಸ್ಥಾನ ಭಾಗ್ಯ?

|
Google Oneindia Kannada News

ನವದೆಹಲಿ, ಮೇ. 11: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಬಾರಿಯ ದೆಹಲಿ ಭೇಟಿ ಫಲಪ್ರದ ಕೊಡುವ ಮುನ್ಸೂಚನೆ ನೀಡಿದೆ. ಸಂಪುಟ ಪುನಾರಚನೆಗೆ ಕೇಂದ್ರ ವರಿಷ್ಠರು ಗ್ರೀನ್ ಸಿಗ್ನಲ್ ಸಿಗಲಿದ್ದು, ಹಾಲಿ ಸಚಿವರಲ್ಲಿ ನಡುಕ ಹುಟ್ಟಿಸಿದೆ. ಸಚಿವ ಸ್ಥಾನ ಅಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಸಂಪುಟ ಪುನಾರಚನೆಯಾದರೆ ಐವರು ಸಚಿವರು ಸಚಿವಗಿರಿ ಕಳೆದುಕೊಳ್ಳಲಿದ್ದು, ಹತ್ತು ಮಂದಿ ನೂತನ ಸಚಿವರು ಬೊಮ್ಮಾಯಿ ಕ್ಯಾಬಿನೆಟ್ ಸೇರಲಿದ್ದಾರೆ.

ಬುಧವಾರ ಸಚಿವ ಸಂಪುಟ ಸಭೆ ನಡೆಯಬೇಕಿತ್ತು. ಸಿಎಂ ದೆಹಲಿ ಭೇಟಿ ಮುಗಿಸಿಕೊಂಡು ಬಂದು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಹಲವು ತಿಂಗಳಿನಿಂದ ನನೆಗುದಿಗೆ ಬಿದ್ದಿರುವ ಸಂಪುಟ ಪುನಾರಚನೆ ಬಗ್ಗೆ ಕೇಂದ್ರ ವರಿಷ್ಠರ ಜತೆ ಮಾತುಕತೆ ನಡೆಸುವ ಸಲುವಾಗಿ ಸಂಪುಟ ಸಭೆಯನ್ನು ಮುಂದೂಡಲಾಯಿತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಸಂಪುಟ ಪುನಾರಚನೆಯ ಬಗ್ಗೆ ಮಾತುಕತೆ ನಡೆದಿದೆ.

ಸಚಿವ ಸ್ಥಾನ ಅಲಂಕರಿಸುವವರ ಸಂಭಾವ್ಯ ಪಟ್ಟಿ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮಾಜಿ ಸಚಿವ ರಮೇಶ್ ಜರಕಿಹೊಳಿ, ಮೈಸೂರಿನ ಕೆ.ಅರ್. ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ , ವಿಜಯೇಂದ್ರ, ಪಿ. ರಾಜೀವ್, ಪೂರ್ಣಿಮಾ, ಬಸನಗೌಡ ಪಾಟೀಲ್, ದತ್ತಾತ್ರೇಯ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಸಚಿವ ಸ್ಥಾನದಿಂದ ಸಚಿವ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಪ್ರಭು ಚವ್ಹಾಣ್, ನಾರಾಯಣಗೌಡ ಸೇರಿದಂತೆ ಹಲವರಿಗೆ ಸಚಿವ ಸ್ಥಾನದಿಂದ ಕೋಕ್ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಹತ್ತು ಮಂದಿ ನೂತನ ಸಚಿವರು ಆಗಮಿಸಿದ್ದಲ್ಲಿ ಖಾತೆಗಳು ಬದಲಾವಣೆ ಆಗಲಿದ್ದು, ಬಿಜೆಪಿ ಸಚಿವರಲ್ಲಿ ಮುನಿಸಿಗೆ ನಾಂದಿ ಹಾಡುವ ಲಕ್ಷಣ ಗೋಚರಿಸುತ್ತಿದೆ.

ಇನ್ನು ಸಂಪುಟ ಪುನಾರಚನೆಯಾದರೆ ಐವರು ಹಿರಿಯ ಸಚಿವರಿಗೆ ಕೋಕ್ ನೀಡುವುದು ಗ್ಯಾರೆಂಟಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಹಾಲಿ ಸಚಿವರಲ್ಲಿ ನಡುಕ ಶುರುವಾಗಿದೆ. ಈಗಾಗಲೇ ಸಚಿವ ಸ್ಥಾನ ಅಲಂಕರಿಸಿ ಮಹತ್ವದ ಹೆಸರು ಗಳಿಸದ ಹಿರಿಯ ನಾಯಕರಿಗೆ ಕೋಕ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರ ರಾಜೀನಾಮೆ, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹುಟ್ಟು ಹಾಕುವ ಸಾಧ್ಯತೆಯಿದೆ. ಬೊಮ್ಮಾಯಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸಂಪುಟ ಸರ್ಜರಿಯ ಚಿತ್ರಣ ಸಿಗಲಿದೆ.

 ಯಾರಿಗೆ ಸಚಿವ ಸ್ಥಾನ ಸಿಗಲಿದೆ

ಯಾರಿಗೆ ಸಚಿವ ಸ್ಥಾನ ಸಿಗಲಿದೆ

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮಾಜಿ ಸಚಿವ ರಮೇಶ್ ಜರಕಿಹೊಳಿ, ಮೈಸೂರಿನ ಕೆ.ಅರ್. ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ , ವಿಜಯೇಂದ್ರ, ಪಿ. ರಾಜೀವ್, ಪೂರ್ಣಿಮಾ, ಬಸನಗೌಡ ಪಾಟೀಲ್, ದತ್ತಾತ್ರೇಯ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

 ಬಿಜೆಪಿ ಸಚಿವರಲ್ಲಿ ಮುನಿಸಿಗೆ ನಾಂದಿ

ಬಿಜೆಪಿ ಸಚಿವರಲ್ಲಿ ಮುನಿಸಿಗೆ ನಾಂದಿ

ಸಚಿವ ಸ್ಥಾನದಿಂದ ಸಚಿವ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಪ್ರಭು ಚವ್ಹಾಣ್, ನಾರಾಯಣಗೌಡ ಸೇರಿದಂತೆ ಹಲವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಹತ್ತು ಮಂದಿ ನೂತನ ಸಚಿವರು ಆಗಮಿಸಿದ್ದಲ್ಲಿ ಖಾತೆಗಳು ಬದಲಾವಣೆ ಆಗಲಿದ್ದು, ಬಿಜೆಪಿ ಸಚಿವರಲ್ಲಿ ಮುನಿಸಿಗೆ ನಾಂದಿ ಹಾಡುವ ಲಕ್ಷಣ ಗೋಚರಿಸುತ್ತಿದೆ.

ಐವರು ಹಿರಿಯ ಸಚಿವರಿಗೆ ಕೊಕ್

ಐವರು ಹಿರಿಯ ಸಚಿವರಿಗೆ ಕೊಕ್

ಇನ್ನು ಸಂಪುಟ ಪುನಾರಚನೆಯಾದರೆ ಐವರು ಹಿರಿಯ ಸಚಿವರಿಗೆ ಕೊಕ್ ನೀಡುವುದು ಗ್ಯಾರೆಂಟಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಹಾಲಿ ಸಚಿವರಲ್ಲಿ ನಡುಕ ಶುರುವಾಗಿದೆ. ಈಗಾಗಲೇ ಸಚಿವ ಸ್ಥಾನ ಅಲಂಕರಿಸಿ ಮಹತ್ವದ ಹೆಸರು ಗಳಿಸದ ಹಿರಿಯ ನಾಯಕರಿಗೆ ಕೋಕ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರ ರಾಜೀನಾಮೆ, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹುಟ್ಟು ಹಾಕುವ ಸಾಧ್ಯತೆಯಿದೆ. ಬೊಮ್ಮಾಯಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸಂಪುಟ ಸರ್ಜರಿಯ ಚಿತ್ರಣ ಸಿಗಲಿದೆ.

Recommended Video

KKR ತಂಡದಲ್ಲಿ ಯಾರು ಇರ್ಬೇಕು ಬೇಡ ಅಂತಾ ನಿರ್ಧರಿಸೋ ಸ್ವಾತಂತ್ರ್ಯ ಕಳೆದುಕೊಂಡ ಶ್ರೇಯಸ್ | Oneindia Kannada
 ಖಾತೆ ಉಳಿಸಿಕೊಳ್ಳಲು ಸಚಿವರ ಪರದಾಟ

ಖಾತೆ ಉಳಿಸಿಕೊಳ್ಳಲು ಸಚಿವರ ಪರದಾಟ

ಸಚಿವ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಹಾಲಿ ಸಚಿವರು ತಮ್ಮ ಖಾತೆ ಉಳಿಸಿಕೊಳ್ಳಲು ಹರ ಸಾಹಸ ಮಾಡುತ್ತಿದ್ದಾರೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವರ ಪೈಕಿ ಹಲವರು ತಮಗೆ ಇದೇ ಖಾತೆ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಅವರ ಬೇಡಿಕೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗಿದೆ. ವಿಜಯೇಂದ್ರ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ಪ್ರಭಾವಿ ಖಾತೆಗಳು ಸಿಗಲಿದ್ದು, ಇದರಿಂದ ಸುಮಾರು ಸಚಿವರ ಖಾತೆ ಬದಲಾಗಲಿದೆ. ಹೀಗಾಗಿ ಹಾಲಿ ಸಚಿವರು ತಮ್ಮ ಖಾತೆ ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ವಿಚಾರವಾಗಿ ಹಾಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬುಧವಾರ ವಿಧಾನಸೌಧದಲ್ಲಿ ಖಾತೆ ಬದಲಾವಣೆ ಬಗ್ಗೆ ಉಲ್ಲೇಖಿಸಿ ಹೇಳಿಕೆ ಸಹ ನೀಡಿರುವುದು ಗಮನಾರ್ಹ.

English summary
Karnataka Cabinet Expansion: Is CM Basavaraj Bommai got green signal from BJP high command for cabinet expansion. 5 Ministers likely to be Removed and 10 MLAs to Become Ministers in Basavaraj Bommai Cabinet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X