ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಮತ್ತೊಂದು ಉದ್ಧಟತನ!

|
Google Oneindia Kannada News

ಬೆಂಗಳೂರು, ಫೆ. 19: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಮತ್ತೊಂದು ಖ್ಯಾತೆ ತೆಗೆದಿದ್ದಾರೆ. ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಮರಾಠಿ ಹೊರತು ಪಡಿಸಿ ಅನ್ಯ ಭಾಷಿಕರ ಸಮೀಕ್ಷೆಗೆ ಆದೇಶ ಮಾಡಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ತಿರ್ಮಾನಿಸಿರುವ ವಿಚಾರಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು, ಸಮೀಕ್ಷೆಗೆ ಗಡಿ ಭಾಗದ ಗ್ರಾಮ ಪಂಚಾಯತಿಗಳಿಗೆ ಆದೇಶ ನೀಡಿರುವುದು ತುಂಬಾ ಅಪ್ರಸ್ತುತ ಎಂದಿದ್ದಾರೆ. ಮಾಹಾರಾಷ್ಟ್ರ ಸರ್ಕಾರದ ಆದೇಶವನ್ನು ರಾಜ್ಯದ ಕನ್ನಡಿಗರೆಲ್ಲ ವಿರೋಧಿಸುತ್ತೇವೆ. ಅಲ್ಲಿನ ಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರ ಇಂತಹ ಸಮೀಕ್ಷೆಯ ಮೂಲಕ ಹೆದರಿಸುವ ಪ್ರಯತ್ನ ಮಾಡಬಾರದು. ಸೌಹಾರ್ಧತೆಯಿಂದ ಸೌಜನ್ಯದಿಂದ ಇರುವ ಮಹಾರಾಷ್ಟ್ರದ ಕನ್ನಡಿಗರಿಗೆ ಆ ಸರ್ಕಾರ ಗೌರವ ಹಾಗೂ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಭದ್ರತೆಯನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ.

C Somasekhar has expressed outrage on Maha govt decision to conduct survey non Marathi people

Recommended Video

ಮಂಗಳನ ಅಂಗಳದಲ್ಲಿ ಪರ್ಸೀವರೆನ್ಸ್ ರೋವರ್ ಇಳಿಸಿದ ಕರ್ನಾಟಕ ಮೂಲದ ವಿಜ್ಞಾನಿ | Karnataka | Oneindia Kannada

ಅನಗತ್ಯವಾಗಿ ಆಗಾಗ್ಗೆ ಗಡಿ ಭಾಗದಲ್ಲಿನ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮಾಡಬಾರದು. ಜವಾಬ್ದಾರಿಯುತ ಸರ್ಕಾರವಾಗಿ ಎಲ್ಲರ ಅಭಿವೃದ್ಧಿಗೆ ಮಾಹಾ ಸರ್ಕಾರ ಶ್ರಮಿಸಬೇಕು ಎಂದು ಸಿ. ಸೋಮಶೇಖರ್ ಆಗ್ರಹಿಸಿದ್ದಾರೆ.

English summary
The Karnataka Border Development Authority chairman C Somasekhar has expressed outrage on Maharashtra governments decision to conduct survey of non Marathi people. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X