• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮೀಕ್ಷೆ: ಸಿದ್ದರಾಮಯ್ಯ ಅವರ ಕೈ ಹಿಡಿದ ಅನ್ನಭಾಗ್ಯ ಯೋಜನೆ

By Mahesh
|

ಬೆಂಗಳೂರು, ಆಗಸ್ಟ್ 21: ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿ ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ವರದಿ ನೀಡಿದೆ. ಇದರ ಜತೆಗೆ ಸರ್ಕಾರದ ಯೋಜನೆಗಳು ಹಾಗೂ ಸಮಸ್ಯೆಗಳ ಬಗ್ಗೆ ಕೂಡಾ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಈ ವರದಿಯಂತೆ ಸರ್ಕಾರದ ಜನಪ್ರಿಯ ಯೋಜನೆಗಳ ಪೈಕಿ ಅನ್ನಭಾಗ್ಯಕ್ಕೆ ಜನತೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆಯ ವರದಿಯನ್ನು ತಯಾರಿಸಲಾಗಿದೆ.

ಸಮೀಕ್ಷೆ: ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಯಾರು?

ಈ ಪೈಕಿ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳ ವಿವಿಧ ಧರ್ಮ, ಜಾತಿಯ ಜನರನ್ನು ಮಾತನಾಡಿಸಿ, ವಿವಿಧ ವಿಭಾಗಗಳಲ್ಲಿ ಜನರ ಬೇಡಿಕೆಗಳೇನು? ಸರ್ಕಾರದ ಸಾಧನೆಗಳೇನು? ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ.

ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ಬಹುಮತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗೆ 4 ಸಾವಿರ ಕೋಟಿ ರು ವೆಚ್ಚ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ದಾರ ಕುಟುಂಬದ ಒಬ್ಬರಿಗೆ 7 ಕೆ.ಜಿಯಂತೆ ಒಂದು ರುಪಾಯಿದರದಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. ಇದರ ಜತೆಗೆ ಉಪ್ಪು, ತಾಳೆ ಎಣ್ಣೆ ಸಬ್ಸಿಡಿ ದರದಲ್ಲಿ ಲಭ್ಯದಲ್ಲಿ ಪೂರೈಸಲಾಗುತ್ತಿದೆ.

C fore Pre – Poll Survey Report Which schemes of the govt is the best?

ಶ್ರೇಯಾಂಕ ಪಟ್ಟಿ ಹೀಗಿದೆ:

ಅನ್ನಭಾಗ್ಯ : ಶೇ79

ಮಧ್ಯಾಹ್ನದ ಬಿಸಿಯೂಟ: ಶೇ38

ವಿದ್ಯಾಸಿರಿ: ಶೇ26

ಕ್ಷೀರಭಾಗ್ಯ: ಶೇ16

ಕೃಷಿಭಾಗ್ಯ: ಶೇ 11


ಇದೇ ರೀತಿ ಈ ಸರ್ಕಾರದ ಆಡಳಿತ ಅವಧಿಯಲ್ಲಿ ಸಾರ್ವಜನಿಕರು ಅನುಭವಿಸಿದ ಸಮಸ್ಯೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೊನೆ ಸ್ಥಾನದವರೆಗಿನ ಪಟ್ಟಿ

ಸಿ ವೋಟರ್ ಸಮೀಕ್ಷೆ: ಬರೀ ಬೊಗಳೆ ಎಂದ ಓದುಗರು!

ಕುಡಿಯುವ ನೀರಿನ ಕೊರತೆ: ಶೇ 37

ಹದಗೆಟ್ಟ ರಸ್ತೆ: ಶೇ 26

ಕಸ ವಿಂಗಡಣೆ ಹಾಗೂ ಸಂಸ್ಕರಣೆ: ಶೇ 15

ನಿರುದ್ಯೋಗ : ಶೇ 11

ವಿದ್ಯುತ್ ವ್ಯತ್ಯಯ : ಶೇ 11

ನೀರಾವರಿ ಯೋಜನೆ ಕೊರತೆ : ಶೇ 11

ಮಿಕ್ಕಂತೆ ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ, ಬೆಲೆ ಏರಿಕೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜನತೆ ಉತ್ತರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
C fore Pre – Poll Survey prediction: Which schemes of the govt is the best? . Which is the most important problem in your constituency? .C fore conducted the pre-poll survey in Karnataka between July 19 and August 10, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more