ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ರೋಹ ಮಾಡಿದಕ್ಕೆ ಸೇಡು: ಈ ಬಿಜೆಪಿ ಸಚಿವ ಕಾಂಗ್ರೆಸ್ಸಿನ 'ಟಾರ್ಗೆಟ್'

|
Google Oneindia Kannada News

ಸಚಿವರೊಬ್ಬರ ವಿರುದ್ದ ಎದುರಾಗಿರುವ ಆರೋಪವನ್ನು ವಿರೋಧ ಪಕ್ಷಗಳು ಸದನದಲ್ಲಿ ಪ್ರಸ್ತಾವಿಸಿ ರಂಪ ರಾಮಾಯಣ ಮಾಡುತ್ತದೆ ಎನ್ನುವ ಮುಂದಾಲೋಚನೆಯನ್ನು ಮಾಡಿಕೊಂಡೇ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಆಖಾಡಕ್ಕೆ ಇಳಿದಿರಬಹುದು.

ಹಾಗಾಗಿಯೇ, ಮೊದಲು ಸಚಿವರಾದ ಮುನಿರತ್ನ ಅವರು ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅವರಿಂದ, ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಯಡಿಯೂರಪ್ಪ, ಸದನ ಆರಂಭಕ್ಕೆ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಕ್ಲೋಸ್ ಡೋರ್‍ ಮೀಟಿಂಗ್ ನಡೆಸಿದರು.

ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಹೇಳಿಕೆಗೆ ಕ್ಷಮೆ ಕೋರಿದ ಮಾಜಿ ಸ್ಪೀಕರ್ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ ಹೇಳಿಕೆಗೆ ಕ್ಷಮೆ ಕೋರಿದ ಮಾಜಿ ಸ್ಪೀಕರ್

ಬೈರತಿ ಬಸವರಾಜ್ ವಿರುದ್ದ ಭೂಕಬಳಿಕೆ ವಿಚಾರವನ್ನು ಸದನದಲ್ಲಿ ಪ್ರಸ್ತಾವನೆ ಆಗದಂತೆ ನೋಡಿಕೊಳ್ಳಲು ಬಿಜೆಪಿ ಪಟ್ಟ ಹರಸಾಹಸವೆಲ್ಲಾ ವ್ಯರ್ಥವಾಯಿತು. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ನಡುವೆ ಆರೋಪ/ಪ್ರತ್ಯಾರೋಪದಿಂದ ಸದನವನ್ನು ಸ್ಪೀಕರ್ ಕಾಗೇರಿಯವರು ಸೋಮವಾರಕ್ಕೆ (ಡಿ 20) ಮುಂದೂಡಿದರು.

ಬೈರತಿ ಬಸವರಾಜ್ ಅವರನ್ನು ರಕ್ಷಿಸಲು ವಲಸೆ ಸಚಿವರಾದ ಡಾ.ಸುಧಾಕರ್, ಮುನಿರತ್ನ, ಎಸ್.ಟಿ.ಸೋಮಶೇಖರ್ ಹೆಣಗಾಡಿದರು. ಅಂದು ಪಕ್ಷಕ್ಕೆ ಮೋಸ ಮಾಡಿದವರಿಗೆ ಪಾಠ ಕಲಿಸಬೇಕೆನ್ನುವ ಸ್ಪಷ್ಟ ಟಾರ್ಗೆಟ್ ಕಾಂಗ್ರೆಸ್ಸಿಗರಲ್ಲಿ ಇದ್ದದ್ದು ಕಂಡು ಬಂತು.

ಬೆಳಗಾವಿ; ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತುಬೆಳಗಾವಿ; ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು

 ಸಚಿವರಾದ ಬೈರತಿ ಬಸವರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್

ಸಚಿವರಾದ ಬೈರತಿ ಬಸವರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್

ಸಚಿವರಾದ ಬೈರತಿ ಬಸವರಾಜ್ ಮತ್ತು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ವಿರುದ್ದ ಭೂಕಬಳಿಕೆಯ ಖಾಸಗಿ ಪ್ರಕರಣದ ಆರೋಪದ ಹಿನ್ನಲೆಯಲ್ಲಿ ನಿಯಯ 60ರ ನಿಲುವಳಿ ಸೂಚನೆಯಡಿ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲವೆಂದು ಸ್ಪೀಕರ್ ಕಾಗೇರಿ ರೂಲಿಂಗ್ ನೀಡಿದ್ದರು. ಆದರೂ, ಡಿವೈಎಸ್ಪಿ ಗಣಪತಿ ಪ್ರಕರಣದಂತೆ ಇಲ್ಲೂ ಅವಕಾಶ ನೀಡಬೇಕೆಂದು ಕಾಂಗ್ರೆಸ್ಸಿಗರು ಪಟ್ಟು ಹಿಡಿದಾಗ ಉಂಟಾದ ಗದ್ದಲದಿಂದ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.

 ರಾಜೀನಾಮೆ ಕೊಡಿಸುವಂತೆ ಮಾಡುವ ಅಜೆಂಡಾ

ರಾಜೀನಾಮೆ ಕೊಡಿಸುವಂತೆ ಮಾಡುವ ಅಜೆಂಡಾ

ಬೈರತಿ ಬಸವರಾಜ್ ಸೇರಿದಂತೆ ಹಲವು ಶಾಸಕರು ತಮ್ಮ ನಿಷ್ಠೆಯನ್ನು ಬದಲಿಸಿ ಬಿಜೆಪಿಯನ್ನು ಸೇರಿದ್ದರು. ಇವರ ಬೆಂಬಲದ ಹಿನ್ನಲೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ವಲಸೆ ಬಂದವರು ಸಚಿವರಾಗಿದ್ದರು. ಪಕ್ಷಕ್ಕೆ ದ್ರೋಹ ಬಗೆದ ಹಿನ್ನಲೆಯಲ್ಲಿ ಬೈರತಿ ಮತ್ತು ಆರ್.ಶಂಕರ್ ವಿರುದ್ದ ಕಾಂಗ್ರೆಸ್ ತೊಡೆ ತಟ್ಟಿದೆ. ಹೇಗಾದರೂ ಮಾಡಿ ಬೈರತಿ ಬಸವರಾಜ್ ಅವರು ರಾಜೀನಾಮೆ ಕೊಡಿಸುವಂತೆ ಮಾಡುವ ಅಜೆಂಡಾವನ್ನು ಕಾಂಗ್ರೆಸ್ ಹಾಕಿಕೊಂಡಂತಿದೆ.

 ಸಚಿವರೊಬ್ಬರು ರಾಜೀನಾಮೆ ನೀಡಿದರೆ ಬಿಜೆಪಿಗೆ ದೊಡ್ಡ ಹಿನ್ನಡೆ

ಸಚಿವರೊಬ್ಬರು ರಾಜೀನಾಮೆ ನೀಡಿದರೆ ಬಿಜೆಪಿಗೆ ದೊಡ್ಡ ಹಿನ್ನಡೆ

ಸಚಿವರೊಬ್ಬರು ರಾಜೀನಾಮೆ ನೀಡಿದರೆ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದ್ದು, ಇದರ ಲಾಭವನ್ನು ಪಡೆದುಕೊಳ್ಳುವುದು ಕಾಂಗ್ರೆಸ್ಸಿನ ಸ್ಪಷ್ಟ ಉದ್ದೇಶ. ಜೊತೆಗೆ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಪರ್ಯಾಯ ನಾಯಕರನ್ನಾಗಿ ನಾರಾಯಣ ಸ್ವಾಮಿಯವರನ್ನು ಮುನ್ನಲೆಗೆ ತರುವ ಉದ್ದೇಶವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಪಕ್ಷಾಂತರದ ಪಾಠವನ್ನು ಕಲಿಸಬೇಕೆನ್ನುವ ಉದ್ದೇಶವೂ ಕಾಂಗ್ರೆಸ್ ಮುಖಂಡರಿಗಿದೆ.

 ಡಿವೈಎಸ್ಪಿ ಗಣಪತಿ ಪ್ರಕರಣದಿಂದ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ರಾಜೀನಾಮೆ

ಡಿವೈಎಸ್ಪಿ ಗಣಪತಿ ಪ್ರಕರಣದಿಂದ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ರಾಜೀನಾಮೆ

ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಡಿವೈಎಸ್ಪಿ ಗಣಪತಿ ಪ್ರಕರಣದಿಂದ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ರಾಜೀನಾಮೆಯನ್ನು ಪಡೆಯಲು ಬಿಜೆಪಿ ಯಶಸ್ವಿಯಾಗಿತ್ತು. ಹಾಗಾಗಿ, ಆ ವಿದ್ಯಮಾನಕ್ಕೆ ತಿರುಗೇಟು ನೀಡಲು ಬೈರತಿ ಬಸವರಾಜ್ ಪ್ರಕರಣವನ್ನು ಬಳಸಿಕೊಳ್ಳಲು ತೀರ್ಮಾನಿಸಿದಂತಿದೆ. ಜೊತೆಗೆ, ಬೈರತಿಗೆ ಹಿನ್ನಡೆ ಉಂಟು ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಕೆ.ಆರ್.ಪುರಂ ಕ್ಷೇತ್ರ ಗೆಲ್ಲುವುದು ಸುಲಭವಾಗಬಹುದು ಎನ್ನುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ.

Recommended Video

ವಿರಾಟ್ ಕೊಹ್ಲಿ ವಿಮಾನದಲ್ಲಿ ಇಶಾಂತ್ ಕಾಲೆಳದದ್ದು ಹೀಗೆ | Oneindia Kannada

English summary
Byrathi Basavaraj Land Grabbing Accusation Created Ruckus In Karnataka Assembly. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X