ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆಯಲ್ಲಿ ತಂದೆ-ಮಗಳ ಜುಗಲ್ಬಂದಿ, ಇತಿಹಾಸ ಸೃಷ್ಟಿಸಿದ ಸೌಮ್ಯ ರೆಡ್ಡಿ

By Sachhidananda Acharya
|
Google Oneindia Kannada News

Recommended Video

Jayanagar Election Results 2018 : ಇತಿಹಾಸ ಸೃಷ್ಟಿ ಮಾಡಿದ ತಂದೆ ಮಗಳ ಜುಗಲ್ ಬಂದಿ | Oneindia Kannada

ಬೆಂಗಳೂರು, ಜೂನ್ 14: ನಗರದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇಲ್ಲಿ ಜಯಶಾಲಿಯಾಗಿ ಹೊಸ ಇತಿಹಾಸ ಬರೆದಿದ್ದಾರೆ.

ಕರ್ನಾಟಕದ ವಿಧಾನಸಭೆಯ ಮಟ್ಟಿಗೆ ಹಲವು ದಾಖಲೆಗಳಿವೆ. ಇಲ್ಲಿ ತಂದೆ-ಮಗ ಏಕಕಾಲಕ್ಕೆ ಸದಸ್ಯರಾಗಿದ್ದಾರೆ. ಈ ಬಾರಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ಗೆದ್ದಿದ್ದಾರೆ. ಅಣ್ಣ-ತಮ್ಮ ಸದಸ್ಯರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇದೇ ಮೊದಲ ಬಾರಿಗೆ ತಂದೆ ಮತ್ತು ಮಗಳು ಇಬ್ಬರೂ ಏಕಕಾಲಕ್ಕೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳುಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳು

ತಂದೆ ರಾಮಲಿಂಗಾ ರೆಡ್ಡಿ ಬಿಟಿಎಂ ಲೇಔಟ್ ನಿಂದ ಸ್ಪರ್ಧಿಸಿ ಜಯಶಾಲಿಯಾಗಿ ವಿಧಾನಸಭೆ ಪ್ರವೇಶಿಸಿದ್ದರೆ, ಮಗಳು ಪಕ್ಕದ ಜಯನಗರದಿಂದ ಗೆದ್ದು ವಿಧಾನಸಭೆಗೆ ಎಂಟ್ರಿ ಕೊಟ್ಟಿದ್ದಾರೆ.

By winning Jayanagar, Soumya Reddy creates history with father Ramalinga Reddy

ಹಾಗೆ ನೋಡಿದರೆ ಈ ಬಾರಿ ಹಲವು ರಾಜಕಾರಣಿಗಳ ಮಕ್ಕಳು ಸ್ಪರ್ಧೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ವಂಶ ಪಾರಂಪರ್ಯದ ರಾಜಕೀಯದ ವಿರುದ್ಧ ಭಾರೀ ಟೀಕೆಗಳೂ ಕೇಳಿ ಬಂದಿತ್ತು. ಹೀಗಿದ್ದರೂ ತಮ್ಮ ಮಗಳಿಗೆ ರಾಮಲಿಂಗಾ ರೆಡ್ಡಿ ಟಿಕೆಟ್ ಕೊಡಿಸಿದ್ದರು. ಹೆಚ್ಚಿನವರು ಮಕ್ಕಳು ಈ ಬಾರಿಯ ಚುನಾವಣೆಯಲ್ಲಿ ಮುಗ್ಗರಿಸಿದರೂ ರೆಡ್ಡಿ ಮಾತ್ರ ತಮ್ಮ ಮಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ.

ಕರ್ನಾಟಕ ಚುನಾವಣಾ ಫಲಿತಾಂಶ : ಅಪ್ಪ-ಮಕ್ಕಳಲ್ಲಿ ಗೆದ್ದವರು, ಸೋತವರುಕರ್ನಾಟಕ ಚುನಾವಣಾ ಫಲಿತಾಂಶ : ಅಪ್ಪ-ಮಕ್ಕಳಲ್ಲಿ ಗೆದ್ದವರು, ಸೋತವರು

ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ವಿರುದ್ಧ ಜಯನಗರದಲ್ಲಿ 54,458 ಮತಗಳನ್ನು ಪಡೆದ ಸೌಮ್ಯ ರೆಡ್ಡಿ, 2889ಮತಗಳ ಅಂತರದಿಂದ ಗೆದ್ದಿದ್ದಾರೆ.

ಈ ಹಿಂದೆ ದೇವರಾಜ್ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಇದೇ ರೀತಿ ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಆಗ ದೇವರಾಜ ಅರಸು ಬದುಕಿರಲಿಲ್ಲ. ಈ ಬಾರಿ ಮಾತ್ರ ಹಾಗಲ್ಲ, ತಂದೆ-ಮಗಳು ಏಕಕಾಲಕ್ಕೆ ವಿಧಾನಸಭೆ ಪ್ರವೇಶಿಸಿ ದಾಖಲೆ ಬರೆದಿದ್ದಾರೆ.

English summary
While Sowmya Reddy won the polls from Jayanagar for the Congress, her father Ramalinga Reddy, currently MLA of neighbouring BTM Layout. For the first time in Karnataka, a father-daughter duo will be MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X