ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಿಡೀರನೆ ಮುಂಬೈಗೆ ಹೊರಟ ವಿಜಯೇಂದ್ರ, ಕೈ ಅತೃಪ್ತ ಶಾಸಕರ ಭೇಟಿ?

|
Google Oneindia Kannada News

Recommended Video

ಕಾಂಗ್ರೆಸ್ ಅತೃಪ್ತ ಶಾಸಕರನ್ನ ಭೇಟಿ ಮಾಡಲು ಮುಂಬೈಗೆ ಹೊರಟ ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರ | Oneindia Kannada

ಬೆಂಗಳೂರು, ಫೆಬ್ರವರಿ 07: ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಇಂದು ರಾತ್ರಿ ದಿಢೀರನೆ ಮುಂಬೈಗೆ ತೆರಳಿದ್ದು, ಅಲ್ಲಿ ಕಾಂಗ್ರೆಸ್‌ ಅತೃಪ್ತ ಶಾಸಕರ ಭೇಟಿ ಆಗಲಿದ್ದಾರೆ ಎನ್ನಲಾಗಿದೆ.

ಇಂದು ಸದನಕ್ಕೆ ಗೈರಾಗಿರುವ ಶಾಸಕರಲ್ಲಿ ಕೆಲವರು ಮುಂಬೈನಲ್ಲಿ ಇದ್ದಾರೆ ಎಂದು ಶಂಕಿಸಲಾಗಿದ್ದು, ವಿಜಯೇಂದ್ರ ಅವರು ಮುಂಬೈಗೆ ಹಾರಿರುವ ಸುದ್ದಿ ಗಮನಿಸಿದರೆ ಶಂಕೆ ನಿಜವೆನಿಸುತ್ತದೆ.

BY Vijayendra went to Mumbai, may meet congress dissident MLAs

ಮುಂಬೈನಲ್ಲಿ ಇರುವ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಭೇಟಿ ಆಗಿ ಮಾತುಕತೆ ಆಡಲು ಯಡಿಯೂರಪ್ಪ ಅವರ ಪ್ರತಿನಿಧಿಯಾಗಿ ವಿಜಯೇಂದ್ರ ಅವರು ಮುಂಬೈಗೆ ತೆರಳಿದ್ದಾರೆ.

ಆಪರೇಷನ್ ಕಮಲ : ಮುಂಬೈನಲ್ಲಿದ್ದಾರೆ ಅತೃಪ್ತ ಕಾಂಗ್ರೆಸ್ ಶಾಸಕರುಆಪರೇಷನ್ ಕಮಲ : ಮುಂಬೈನಲ್ಲಿದ್ದಾರೆ ಅತೃಪ್ತ ಕಾಂಗ್ರೆಸ್ ಶಾಸಕರು

ಅತೃಪ್ತ ಶಾಸಕರನ್ನು ಗುರುವಾರ ಅಥವಾ ಬಜೆಟ್ ದಿನ ಕರೆತಂದು ಬಜೆಟ್‌ಗೆ ವಿರುದ್ಧವಾಗಿ ಮತಚಲಾಯಿಸುವಂತೆ ಮಾಡುವ ಸಾಧ್ಯತೆ ಇದೆ. ಇದರ ಜವಾಬ್ದಾರಿಯನ್ನು ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಅವರು ವಹಿಸಿರುವ ಸಾಧ್ಯತೆ ಇದೆ.

ಬಜೆಟ್ ಮಂಡನೆ ದಿನವೇ ಸಿಎಲ್‌ಪಿ ಸಭೆ ಕರೆದ ಸಿದ್ದರಾಮಯ್ಯ!ಬಜೆಟ್ ಮಂಡನೆ ದಿನವೇ ಸಿಎಲ್‌ಪಿ ಸಭೆ ಕರೆದ ಸಿದ್ದರಾಮಯ್ಯ!

ಇಂದು ಆರಂಭವಾದ ಬಜೆಟ್ ಅಧಿವೇಶನದಕ್ಕೆ ಎಂಟು ಜನ ಕಾಂಗ್ರೆಸ್ ಶಾಸಕರು ಮತ್ತು ಒಬ್ಬರು ಜೆಡಿಎಸ್ ಶಾಸಕರು ಗೈರಾಗಿದ್ದರು. ಅದರಲ್ಲಿ ಕೆಲವರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಿಲ್ಲ: ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಿಲ್ಲ: ಯಡಿಯೂರಪ್ಪ

ಶಾಸಕರಾದ ರಮೇಶ್ ಜಾರಕಿಹೊಳಿ (ಗೋಕಾಕ್), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಮಹೇಶ್ ಕುಮಟಳ್ಳಿ (ಅಥಣಿ), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್ (ಹಿರೆಕೇರೂರು). ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮುಳಬಾಗಿಲು ಶಾಸಕ ಎಚ್.ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್.ಶಂಕರ್ ಇಂದು ಅಧಿವೇಶನಕ್ಕೆ ಗೈರಾಗಿದ್ದರು.

English summary
BY Vijayendra went to Mumbai suddenly. He may meet congress dissident MLAs. source saying that Congress dissidents MLAs were in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X