ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್. ಡಿ. ದೇವೇಗೌಡ ಭೇಟಿಯಾದ ಬಿ. ವೈ. ವಿಜಯೇಂದ್ರ!

|
Google Oneindia Kannada News

ಬೆಂಗಳೂರು, ಫೆಬ್ರವರಿ 26 : ಕರ್ನಾಟಕ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಭೇಟಿಯಾದರು.

ಬುಧವಾರ ಸಂಜೆ ಪದ್ಮನಾಭನಗರದ ನಿವಾಸದಲ್ಲಿ ಬಿ. ವೈ. ವಿಜಯೇಂದ್ರ ದೇವೇಗೌಡರನ್ನು ಭೇಟಿ ಮಾಡಿದರು. ಯಡಿಯೂರಪ್ಪ ಫೆಬ್ರವರಿ 27ರಂದು 78ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಟ್ವೀಟ್ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಟ್ವೀಟ್

ಫೆಬ್ರವರಿ 27ರ ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಡಿಯೂರಪ್ಪಗೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ಬಿ. ವೈ. ವಿಜಯೇಂದ್ರ ಎಚ್. ಡಿ. ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಹುಟ್ಟುಹಬ್ಬದಂದು ಸಿಎಂ ಯಡಿಯೂರಪ್ಪ ದಿನಚರಿ ಏನು ಗೊತ್ತಾ?ಹುಟ್ಟುಹಬ್ಬದಂದು ಸಿಎಂ ಯಡಿಯೂರಪ್ಪ ದಿನಚರಿ ಏನು ಗೊತ್ತಾ?

ಯಡಿಯೂರಪ್ಪ ಅಭಿನಂದನಾ ಸಮಾರಂಭದಲ್ಲಿ 'ಧಣಿವರಿಯದ ಧೀಮಂತ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ವಿವಿಧ ಪಕ್ಷಗಳ ನಾಯಕರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಆಹ್ವಾನ ನೀಡಲಾಗಿದೆ.

ಟ್ರಂಪ್ ಭೇಟಿಯಾದ ಸಿಎಂ ಯಡಿಯೂರಪ್ಪ; ಫೋಟೊ ವೈರಲ್ಟ್ರಂಪ್ ಭೇಟಿಯಾದ ಸಿಎಂ ಯಡಿಯೂರಪ್ಪ; ಫೋಟೊ ವೈರಲ್

ಅಭಿನಂದನಾ ಸಮಾರಂಭ

ಅಭಿನಂದನಾ ಸಮಾರಂಭ

ಯಡಿಯೂರಪ್ಪ ಅಭಿನಂದನಾ ಸಮಾರಂಭಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ. ಬಿ. ವೈ. ವಿಜಯೇಂದ್ರ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಆಹ್ವಾನಿಸಿದ್ದಾರೆ.

ಯಡಿಯೂರಪ್ಪ ಮನವಿ

78ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟರ್ ಮೂಲಕ ತಮ್ಮ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿಗೆ ಮನವಿಯೊಂದನ್ನು ಮಾಡಿದ್ದಾರೆ.

ಕೇಂದ್ರ ನಾಯಕರ ಉಪಸ್ಥಿತಿ

ಕೇಂದ್ರ ನಾಯಕರ ಉಪಸ್ಥಿತಿ

ಅಭಿನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ. ಎಲ್. ಸಂತೋಷ್ ಸೇರಿದಂತೆ ಹಲವು ನಾಯಕರು. ಕರ್ನಾಟಕದ ಕೇಂದ್ರ ಸಚಿವರು ಪಾಲ್ಗೊಳ್ಳುತ್ತಿದ್ದಾರೆ.

ಕಾವೇರಿಗೆ ವಾಸ್ತವ್ಯ ಬದಲು

ಕಾವೇರಿಗೆ ವಾಸ್ತವ್ಯ ಬದಲು

78ನೇ ಹುಟ್ಟು ಹಬ್ಬದ ದಿನವೇ ಯಡಿಯೂರಪ್ಪ 'ಧವಳಗಿರಿ'ಯಿಂದ ಕಾವೇರಿಗೆ ವಾಸ್ತವ್ಯ ಬದಲಿಸಲಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಪಕ್ಕದ 'ಕಾವೇರಿ' ನಿವಾಸವನ್ನು ಸಿದ್ದರಾಮಯ್ಯ ಬಿಟ್ಟುಕೊಟ್ಟಿದ್ದು, ಇನ್ನು ಮುಂದೆ ಯಡಿಯೂರಪ್ಪ ಅಲ್ಲಿಯೇ ಇರಲಿದ್ದಾರೆ.

English summary
Karnataka chief minister B.S.Yediyurappa son B. Y. Vijayendra met former pm H. D. Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X