ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ:10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ

|
Google Oneindia Kannada News

ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶದ ಬಿಸಿ ನಡುವೆ ಉಪ ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿದ್ದ ಶಾಸಕರು ಇಂದು ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯಲಿದ್ದಾರೆ.

ಈ ನಡುವೆ ಜಾತ್ಯಾತೀತ ಜನತಾ ದಳ(ಜೆಡಿಎಸ್) ತನ್ನ ಅಭ್ಯರ್ಥಿಗಳನ್ನು 14 ಕ್ಷೇತ್ರಗಳಲ್ಲಿ ಮಾತ್ರ ನಿಲ್ಲಿಸಲು ನಿರ್ಧರಿಸಿದೆ. 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ 14ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ ಕುಮಾರಸ್ವಾಮಿ ಅವರು ಪ್ರಕಟಿಸಿದರು.

15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ನಿರೀಕ್ಷೆಯಂತೆ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಜೆಡಿಎಸ್ ಬೆಂಬಲ ನೀಡಲಿದೆ.

ಉಪ ಚುನಾವಣೆ: 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್
10 ಅಭ್ಯರ್ಥಿಗಳ ಮೊದಲ ಪಟ್ಟಿ

* ಯಶವಂತಪುರ: ಟಿ.ಎನ್ ಜವರಾಯಿಗೌಡ
* ಹುಣಸೂರು: ಸೋಮಶೇಖರ್
* ಕೆ. ಆರ್ ಪೇಟೆ: ಬಿ. ಎಲ್ ದೇವರಾಜ್
* ಚಿಕ್ಕಬಳ್ಳಾಪುರ: ಕೆ.ಪಿ ಬಚ್ಚೇಗೌಡ.
* ಶಿವಾಜಿನಗರ: ತನ್ವೀರ್ ಅಹ್ಮದ್.
* ಯಲ್ಲಾಪುರ: ಚೈತ್ರಾ ಗೌಡ.
* ಕೆ. ಆರ್ ಪುರಂ: ಕೃಷ್ಣಮೂರ್ತಿ
* ರಾಣೇಬೆನ್ನೂರು: ಮಲ್ಲಿಕಾರ್ಜುನ ಹಲಗೇರಿ
* ಹಿರೇಕೆರೂರು: ಅಂಜನಪ್ಪ ಜಟ್ಟೆಪ್ಪ
* ವಿಜಯನಗರ: ಎನ್ . ಎಂ ನಬಿ

JDS releases candites list for 14 constituencies

ಕರ್ನಾಟಕದ 8 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ.ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.

ಅನರ್ಹ ಶಾಸಕರ ಭವಿಷ್ಯ, ಸುಪ್ರೀಂ ತೀರ್ಪಿನ ಸಾರಾಂಶಅನರ್ಹ ಶಾಸಕರ ಭವಿಷ್ಯ, ಸುಪ್ರೀಂ ತೀರ್ಪಿನ ಸಾರಾಂಶ

ಅನರ್ಹಗೊಂಡ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಂತಿಮಗೊಳಿಸಿದ್ದು, ತೀರ್ಪು ನೀಡಿದ್ದು, ಅರ್ನಹತೆಯನ್ನು ಎತ್ತಿ ಹಿಡಿದರೂ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

15 ಕ್ಷೇತ್ರದ ಉಪ ಚುನಾವಣೆಗೆ ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.

English summary
By polls 2019: JDS today(Nov 14) released candidates for 10 constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X