ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ: 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್

|
Google Oneindia Kannada News

ಬೆಂಗಳೂರು, ನವೆಂಬರ್ 14: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿದ್ದ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ ಸಿಕ್ಕ ಬೆನ್ನಲ್ಲೇ ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡಿದ್ದಾರೆ.

ಇಂದು ಭಾರತೀಯ ಜನತಾ ಪಕ್ಷವನ್ನು 16 ಮಂದಿ ಅನರ್ಹ ಶಾಸಕರು ಅಧಿಕೃತವಾಗಿ ಸೇರ್ಪಡೆಗೊಂಡರು. ನಿರೀಕ್ಷೆಯಂತೆ ಬಹುತೇಕ ಎಲ್ಲರಿಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಶಿವಾಜಿನಗರದ ಟಿಕೆಟ್ ಕೈ ತಪ್ಪಿದ್ದು ಎಂ ಶರವಣ ಅವರಿಗೆ ನೀಡಲಾಗಿದೆ.

ಅನರ್ಹ ಶಾಸಕರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಅನರ್ಹ ಶಾಸಕರು ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಇದಕ್ಕೂ ಮುನ್ನ ಇಂದು 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ 14ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ ಕುಮಾರಸ್ವಾಮಿ ಅವರು ಪ್ರಕಟಿಸಿದರು. ಕರ್ನಾಟಕದ 8 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

By polls 2019: BJP announces candidates, names of 13 rebel MLAs

ಬಿಜೆಪಿ ಪ್ರಕಟಿಸಿರುವ 14 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ:

* ಅಥಣಿ: ಮಹೇಶ್ ಕುಮಟಳ್ಳಿ
* ಕಾಗವಾಡ: ಶ್ರೀಮಂತ ಪಾಟೀಲ್
* ಗೋಕಾಕ: ರಮೇಶ್ ಜಾರಕಿಹೊಳಿ
* ಯಲ್ಲಾಪುರ: ಶಿವರಾಂ ಹೆಬ್ಬಾರ್
* ಹಿರೇಕೆರೂರು: ಬಿ ಸಿ ಪಾಟೀಲ್
* ವಿಜಯನಗರ(ಬಳ್ಳಾರಿ): ಆನಂದ್ ಸಿಂಗ್
* ಚಿಕ್ಕಬಳ್ಳಾಪುರ: ಸುಧಾಕರ್
* ಕೆ. ಆರ್ ಪುರ: ಬೈರತಿ ಬಸವರಾಜ್
* ಯಶವಂತಪುರ: ಎಸ್ ಟಿ ಸೋಮಶೇಖರ್
* ಮಹಾಲಕ್ಷ್ಮಿ ಲೇಔಟ್: ಕೆ ಗೋಪಾಲಯ್ಯ
* ಹೊಸಕೋಟೆ: ಎಂ ಟಿ ಬಿ ನಾಗರಾಜ್
* ಕೃಷ್ಣರಾಜಪೇಟೆ: ಕೆ ಸಿ ನಾರಾಯಣ ಗೌಡ
* ಹುಣಸೂರು: ಎಚ್ ವಿಶ್ವನಾಥ್
* ಶಿವಾಜಿನಗರ: ಎಂ. ಶರವಣ

ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.

17 ಅನರ್ಹ ಶಾಸಕರಲ್ಲಿ ಒಬ್ಬರಿಗೆ ಮಾತ್ರ ಬಿಜೆಪಿ ಬಾಗಿಲು ಬಂದ್: ಆಗ ಅನರ್ಹ, ಈಗ ಅತಂತ್ರ!17 ಅನರ್ಹ ಶಾಸಕರಲ್ಲಿ ಒಬ್ಬರಿಗೆ ಮಾತ್ರ ಬಿಜೆಪಿ ಬಾಗಿಲು ಬಂದ್: ಆಗ ಅನರ್ಹ, ಈಗ ಅತಂತ್ರ!

ಅನರ್ಹಗೊಂಡ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಂತಿಮಗೊಳಿಸಿದ್ದು, ತೀರ್ಪು ನೀಡಿದ್ದು, ಅರ್ನಹತೆಯನ್ನು ಎತ್ತಿ ಹಿಡಿದರೂ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. 15 ಕ್ಷೇತ್ರದ ಉಪ ಚುನಾವಣೆಗೆ ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.

English summary
BJP announces names of 13 rebel MLAs as its candidates for the first list of bypolls in Karnataka. Shivajinagar ticket is goven to M Sharavana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X