ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಸೋಲು : ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ

|
Google Oneindia Kannada News

Recommended Video

ಲೋಕಸಭಾ ಚುನಾವಣೆ 2019ರ ತನಕ ಬಿ ಎಸ್ ಯಡಿಯೂರಪ್ಪಗೆ ಕೊಂಚ ರಿಲೀಫ್ | Oneindia Kannada

ಬೆಂಗಳೂರು, ನವೆಂಬರ್ 08 : ಕರ್ನಾಟಕ ವಿಧಾನಸಭೆ ಚುನಾವಣೆ 2018, ಐದು ಕ್ಷೇತ್ರಗಳ ಉಪ ಚುನಾವಣೆ ಮುಖಭಂಗದ ನಂತರ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿಬರಲಾರಂಭಿಸಿದೆ. ಆದರೆ, ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಯಾರು? ಎಂದರೆ, ಯಾರೂ ಇಲ್ಲ ಎಂದೇ ಹೇಳಬೇಕು.

2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 + ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬುದು ಹೈಕಮಾಂಡ್ ನೀಡಿರುವ ಟಾರ್ಗೆಟ್. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಬೇಕಾದರೆ ಕಾರ್ಯತಂತ್ರ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು?ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು?

ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆ, ಕರ್ನಾಟಕ ವಿಧಾನಸಭೆ ಚುನಾವಣೆ 2018, ಜಯನಗರ ಮತ್ತು ರಾಜರಾಜೇಶ್ವರಿ ನಗರ ಚುನಾವಣೆ, ಐದು ಕ್ಷೇತ್ರಗಳ ಉಪ ಚುನಾವಣೆ ಹೀಗೆ ಬಿಜೆಪಿಗೆ ಪದೇ ಪದೇ ಹಿನ್ನಡೆಯಾಗಿದೆ.

ಯಡಿಯೂರಪ್ಪನವರನ್ನ ಬದಲಾಯಿಸಲ್ಲ, ಬಿಜೆಪಿಯಲ್ಲಿ ಆಕ್ರೋಶ ನಿಲ್ಲಲ್ಲ, ಏಕೆ?ಯಡಿಯೂರಪ್ಪನವರನ್ನ ಬದಲಾಯಿಸಲ್ಲ, ಬಿಜೆಪಿಯಲ್ಲಿ ಆಕ್ರೋಶ ನಿಲ್ಲಲ್ಲ, ಏಕೆ?

ಬಿಜೆಪಿ ನಾಯಕರು ತಮ್ಮ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತಯೂ ಬಿಜೆಪಿ ಮುಂದಿದೆ. ಲೋಕಸಭೆ ಚುನಾವಣೆ ಎದುರಾಗಿರುವುದರಿಂದ ನಾಯಕತ್ವ ಬದಲಾವಣೆ ದೂರದ ಮಾತಾಗಿದೆ.....

ಯಡಿಯೂರಪ್ಪ ಶಕ್ತಿ ಕುಂದಿದೆ, ನಾಯಕತ್ವದ ಬಗ್ಗೆ ಮಾಜಿ ಸಚಿವ ಅಪಸ್ವರಯಡಿಯೂರಪ್ಪ ಶಕ್ತಿ ಕುಂದಿದೆ, ನಾಯಕತ್ವದ ಬಗ್ಗೆ ಮಾಜಿ ಸಚಿವ ಅಪಸ್ವರ

ತಪ್ಪು ತಿದ್ದಿಕೊಳ್ಳುವ ಅವಕಾಶವಿದೆ

ತಪ್ಪು ತಿದ್ದಿಕೊಳ್ಳುವ ಅವಕಾಶವಿದೆ

ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನ ವಿಫಲವಾಗಿದೆ. ಈಗ ಉಪ ಚುನಾವಣೆಯಲ್ಲಿ ಜಮಖಂಡಿ ಮತ್ತು ಬಳ್ಳಾರಿಯಲ್ಲಿ ಸೋಲಾಗಿದೆ. 2019ರ ಲೋಕಸಭಾ ಚುನಾವಣೆಯೊಳಗೆ ಬಿಜೆಪಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಿದರೆ ಹೆಚ್ಚಿನ ಸ್ಥಾನಗಳನ್ನುಗಳಿಸಬಹುದಾಗಿದೆ.

ನಾಯಕತ್ವ ಬದಲಾವಣೆ ಇಲ್ಲ

ನಾಯಕತ್ವ ಬದಲಾವಣೆ ಇಲ್ಲ

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಬಗ್ಗೆ ಚರ್ಚೆ ನಡೆಯಬಹುದು. ಆದರೆ, ಯಡಿಯೂರಪ್ಪ ಅವರಷ್ಟು ಪ್ರಭಾವ ಹೊಂದಿರುವ ನಾಯಕರು ಯಾರೂ ಇಲ್ಲ. ಆದ್ದರಿಂದ, ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ. ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳುವ ಜೊತೆಗೆ ಹೊಸ ನಾಯಕರನ್ನು ರೂಪಿಸುವ ಜವಾಬ್ದಾರಿಯೂ ಪಕ್ಷದ ಮೇಲಿದೆ.

ವಿಫಲವಾದ ಅಸ್ತ್ರ

ವಿಫಲವಾದ ಅಸ್ತ್ರ

2018ರ ವಿಧಾನಸಭೆ ಚುನಾವಣೆ ಸಮಯದಿಂದ ಬಿಜೆಪಿ ಬಿ.ಶ್ರೀರಾಮುಲು ಅವರನ್ನು ಪರ್ಯಾಯ ನಾಯಕ ಎಂದು ಬಿಂಬಿಸಲು ಪ್ರಯತ್ನ ನಡೆಸಿದೆ. ಆದರೆ, ಈ ಪ್ರಯತ್ನ ವಿಫಲವೂ ಆಗಿದೆ. ಈಗ ಬಳ್ಳಾರಿ ಉಪ ಚುನಾವಣೆ ಬಳಿಕ ಶ್ರೀರಾಮುಲು ಅವರ ಪ್ರಭಾವ ಮತ್ತಷ್ಟು ಕಡಿಮೆ ಆಗಿದೆ. ಆದ್ದರಿಂದ, ಬಿಜೆಪಿ ನಾಯಕತ್ವ ಬದಲಾವಣೆಗೆ ಸದ್ಯಕ್ಕೆ ಕೈ ಹಾಕುವುದಿಲ್ಲ.

ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆ

2019ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದರೆ ಯಡಿಯೂರಪ್ಪ ಅನಿವಾರ್ಯ. ಯಡಿಯೂರಪ್ಪ ಬದಲಾವಣೆಯಾದರೆ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಬಿಜೆಪಿಯನ್ನು ಕಟ್ಟಿ ಹಾಕುವುದು ಸುಲಭವಾಗಲಿದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದ್ದೇವೆ ಎಂದು ಮೈತ್ರಿ ಪಕ್ಷಗಳು ಘೋಷಣೆ ಮಾಡಿವೆ.

ಆತ್ಮಾವಲೋಕನದ ಕಾಲ

5 ಕ್ಷೇತ್ರಗಳ ಉಪ ಚುನಾವಣೆಯ ಹಿನ್ನಡೆ, ಮುಂದಿನ ಚುನಾವಣೆ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದದ್ದಾರೆ.

English summary
After Karnataka BJP's poor show in by elections party state president B.S.Yeddyurappa under pressure from within the party to step down. Ahead of the Lok Sabha elections 2019 party will not change leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X