ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಟಿಕೆಟ್ ಹಂಚಿಕೆ; ಸಿದ್ದರಾಮಯ್ಯ ಮೇಲುಗೈ!

|
Google Oneindia Kannada News

ಬೆಂಗಳೂರು, ನವೆಂಬರ್ 01 : ಕರ್ನಾಟಕ ಕಾಂಗ್ರೆಸ್ ಉಪ ಚುನಾವಣೆಗೆ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದೆ.

17 ಶಾಸಕರು ಅನರ್ಹಗೊಂಡಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಚುನಾವಣೆ ನಡೆಸಲು ದಿನಾಂಕವನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ 15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಉಪ ಚುನಾವಣೆ ನಡೆಯಲಿದೆಯೇ? ಇಲ್ಲವೇ ಎಂಬುದು ತೀರ್ಪಿನ ಮೇಲೆ ನಿಂತಿದೆ.

ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಹೇಳಿದ್ದೇನು? ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಹೇಳಿದ್ದೇನು?

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ತಮ್ಮ ಆಪ್ತರಿಗೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಕೊಡಿಸಿದ್ದಾರೆ. ಹೈಕಮಾಂಡ್ ಸಹ ಉಪ ಚುನಾವಣೆ ಸಂಪೂರ್ಣ ಜವಾಬ್ದಾರಿಯನ್ನು ಸಿದ್ದರಾಮಯ್ಯ ಹೆಗಲಿಗೆ ವಹಿಸಿದೆ.

ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ! ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ!

ಅಭ್ಯರ್ಥಿಗಳ ಪಟ್ಟಿ

ಅಭ್ಯರ್ಥಿಗಳ ಪಟ್ಟಿ

ಭೀಮಣ್ಣ ನಾಯ್ಕ್ (ಯಲ್ಲಾಪುರ), ಹಿರೇಕೆರೂರು ( ಬಿ. ಎಚ್. ಬನ್ನಿಕೋಡ್), ರಾಣೆಬೆನ್ನೂರು (ಕೆ. ಬಿ. ಕೋಳಿವಾಡ), ಚಿಕ್ಕಬಳ್ಳಾಪುರ (ಎಂ. ಅಂಜನಪ್ಪ), ಕೆ. ಆರ್.ಪುರ (ಎಂ. ನಾರಾಯಣಸ್ವಾಮಿ), ಮಹಾಲಕ್ಷ್ಮೀ ಲೇಔಟ್ ( ಎಂ. ಶಿವರಾಜ್), ಹೊಸಕೋಟೆ (ಪದ್ಮಾವತಿ ಸುರೇಶ್), ಹುಣಸೂರು (ಎಚ್. ಪಿ. ಮಂಜುನಾಥ್) ಅಭ್ಯರ್ಥಿಗಳಾಗಿದ್ದಾರೆ.

ಸಿದ್ದರಾಮಯ್ಯ ಮೇಲುಗೈ

ಸಿದ್ದರಾಮಯ್ಯ ಮೇಲುಗೈ

ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಹೊಸಕೋಟೆ, ಹುಣಸೂರು, ಮಹಾಲಕ್ಷ್ಮೀ ಲೇಔಟ್, ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ಸೂಚಿಸಿದವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಶಾಸಕ ಕೆ. ಬಿ. ಕೋಳಿವಾಡ ಸಿದ್ದರಾಮಯ್ಯ ವಿರುದ್ಧದ ಮುನಿಸನ್ನು ಮರೆತು ಟಿಕೆಟ್ ಪಡೆದಿದ್ದಾರೆ. ರಾಣೆಬೆನ್ನೂರು, ಹಿರೇಕೆರೂರು ಮತ್ತು ಹುಣಸೂರು ಕ್ಷೇತ್ರದಲ್ಲಿ ಮಾಜಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.

ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ

ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯ, ಕುರುಬ ಸಮುದಾಯದ ಎಂ. ಶಿವರಾಜ್ ಅಭ್ಯರ್ಥಿ. ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ. ಆದ್ದರಿಂದ, 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. 17 ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ಮತ್ತು ಮಸ್ಕಿ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿಲ್ಲ.

ಬಂಡಾಯ ಅಭ್ಯರ್ಥಿಗಳಿಗೆ ಗಾಳ

ಬಂಡಾಯ ಅಭ್ಯರ್ಥಿಗಳಿಗೆ ಗಾಳ

ಕಾಂಗ್ರೆಸ್ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದರೂ ಇನ್ನೂ 7 ಕ್ಷೇತ್ರ ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡವರನ್ನು ಪಕ್ಷಕ್ಕೆ ಸೆಳೆದು ಟಿಕೆಟ್ ನೀಡುವುದು ಕಾಂಗ್ರೆಸ್ ತಂತ್ರವಾಗಿದೆ. ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಮತ್ತು ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.

English summary
Congress announced 8 candidates for the by elections of Karnataka. Opposition leader Siddaramaiah supporters get the ticket in many assembly seat. By election will be held on December 5, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X