• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫಲಿತಾಂಶಕ್ಕೆ ಕ್ಷಣಗಣನೆ: ಬಿಎಸ್ವೈಗೆ 'ಒಳ್ಳೆದಾಗಲಿ' ಎಂದ ಡಿ.ಕೆ.ಶಿವಕುಮಾರ್

|
   Karnataka by Election 2019 : DKS wish BSY before election result | D K Shivakumar | Oneindia Kannada

   ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಕ್ಕೆ ಮುನ್ನ, ಮಾಜಿ ಸಚಿವ, ರಾಜ್ಯದ ಪ್ರಭಾವೀ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶುಭ ಹಾರೈಸಿದ್ದಾರೆ.

   ಸರಕಾರದ ಅಳಿವು ಉಳಿವಿನ ಪ್ರಶ್ನೆಯಾಗಿರುವ ಉಪಚುನಾವಣೆಯ ಫಲಿತಾಂಶ, ಇನ್ನೇನು ಕೆಲವು ಗಂಟೆಗಳಲ್ಲಿ ಬಹಿರಂಗವಾಗಲಿದೆ. ಅರ್ಹರೋ, ಅನರ್ಹರೋ ಎನ್ನುವುದು ನಿರ್ಧಾರವಾಗಲಿದೆ.

   ಗುಪ್ತಚರ ಇಲಾಖೆಯ ವರದಿಯನ್ನು ಆಧರಿಸಿ, ಸಿಎಂ ಯಡಿಯೂರಪ್ಪ ಹದಿಮೂರು ಸೀಟು ಗೆಲ್ಲುವುದಾಗಿ, ವಿಶ್ವಾಸದ ಮಾತನ್ನಾಡಿದ್ದಾರೆ. ಫಲಿತಾಂಶದ ಮುನ್ನಾದಿನ ಧರ್ಮಸ್ಥಳ ಮಂಜುನಾಥನ ಆಶೀರ್ವಾದವನ್ನು ಬಿಎಸ್ವೈ ಪಡೆದಿದ್ದಾರೆ.

   ಗುಪ್ತಚರ ಇಲಾಖೆಯ ಗುಪ್ತ್ ಗುಪ್ತ್ ವರದಿ: ಈ 4 ಕ್ಷೇತ್ರಗಳಲ್ಲಿ 50:50, ಬಿಎಸ್ವೈ ಫುಲ್ ಟೆನ್ಸನ್

   ಈ ನಡುವೆ, ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರಿಗೆ 'ಒಳ್ಳೆಯದಾಗಲಿ' ಎಂದು ವಿಷ್ ಮಾಡಿದ್ದಾರೆ. ಆದರೆ, ಇದು?

   ರಾಮನಗರವನ್ನು ಕ್ಲೀನ್ ಮಾಡುತ್ತೇನೆ' ಎನ್ನುವ ಡಿಸಿಎಂ ಹೇಳಿಕೆ

   ರಾಮನಗರವನ್ನು ಕ್ಲೀನ್ ಮಾಡುತ್ತೇನೆ' ಎನ್ನುವ ಡಿಸಿಎಂ ಹೇಳಿಕೆ

   'ರಾಮನಗರವನ್ನು ಕ್ಲೀನ್ ಮಾಡುತ್ತೇನೆ' ಎನ್ನುವ ಹೇಳಿಕೆಯನ್ನು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಒಂದು ದಿನದ ಹಿಂದೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, "ಡಿಸಿಎಂ ಬಹಳ ಹುಮ್ಮಸ್ಸಿನಲ್ಲಿದ್ದಾರೆ. ನಮಗಾರಿಗೂ ಆಗದ್ದು, ಅವರು ಮಾಡುವಂಗಿದ್ದರೆ ಮಾಡಲಿ" ಎಂದು ಹೇಳಿದ್ದಾರೆ.

   ಡಿಸಿಎಂಗೆ ಒಳ್ಳೆಯದಾಗಲಿ, ಡಿಕೆಶಿ

   ಡಿಸಿಎಂಗೆ ಒಳ್ಳೆಯದಾಗಲಿ, ಡಿಕೆಶಿ

   "ರಾಮನಗರದಿಂದ ದೇವೇಗೌಡ್ರು ಗೆದ್ದು ಬಂದಿದ್ದಾರೆ. ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ರಾಮನಗರವನ್ನು ಪ್ರತಿನಿಧಿಸಿದ್ದರು. ಕುಮಾರಸ್ವಾಮಿಯವರೂ ಅದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು. ನಮಗೆ ಆಗದಿದ್ದದ್ದು, ಅವರು (ಅಶ್ವಥ್ ನಾರಾಯಣ್) ಮಾಡಿದರೆ, ಅದನ್ನು ಸ್ವಾಗತಿಸಬೇಕು ತಾನೇ.. ಅವರಿಗೆ ಒಳ್ಳೆಯದಾಗಲಿ" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

   ಕನಕಪುರದಲ್ಲಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಸಿಎಂಗೆ ಡಿಕೆಶಿ ಪತ್ರ

   ಕಾಂಗ್ರೆಸ್ - ಜೆಡಿಎಸ್ಸಿಗೆ ದೋಖಾ ಮಾಡಿದ ಎಲ್ಲರಿಗೂ ಟಿಕೆಟ್

   ಕಾಂಗ್ರೆಸ್ - ಜೆಡಿಎಸ್ಸಿಗೆ ದೋಖಾ ಮಾಡಿದ ಎಲ್ಲರಿಗೂ ಟಿಕೆಟ್

   "ಕಾಂಗ್ರೆಸ್ - ಜೆಡಿಎಸ್ಸಿಗೆ ದೋಖಾ ಮಾಡಿದ ಎಲ್ಲರಿಗೂ ಟಿಕೆಟ್ ನೀಡಿದ್ದರೂ, ರೋಷನ್ ಬೇಗ್ ಮತ್ತು ಆರ್. ಶಂಕರ್ ಅವರಿಬ್ಬರಿಗೆ ನೀಡಲಿಲ್ಲ. ಅವರಿಬ್ಬರಿಗೆ, ಬಿಜೆಪಿ ಮೋಸ ಮಾಡಬಾರದಾಗಿತ್ತು. ಅನರ್ಹರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಯಡಿಯೂರಪ್ಪನವರು ಹೇಳುತ್ತಿದ್ದಾರೆ. ನೀಡಲಿ ಸಂತೋಷ" ಎಂದು ಡಿಕೆಶಿ, ವ್ಯಂಗ್ಯವಾಡಿದ್ದಾರೆ.

   ಹದಿಮೂರು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ

   ಹದಿಮೂರು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ

   "ಹದಿಮೂರು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಕಾದು ನೋಡುತ್ತೇವೆ, ಅವರಿಗೆ ಒಳ್ಳೆದಾಗಲಿ. ಬಿಜೆಪಿ ಎಲ್ಲಾ ಕ್ಷೇತ್ರವನ್ನು ಗೆಲ್ಲಲಿ" ಎಂದು ಡಿಕೆಶಿ, ವ್ಯಂಗ್ಯವಾಗಿ, ಬಿಎಸ್ವೈಗೆ ಶುಭ ಹಾರೈಸಿದ್ದಾರೆ.

   ಚಿದಂಬರಂ ಅವರನ್ನು ಭೇಟಿಯಾಗಿದ್ದೆ

   ಚಿದಂಬರಂ ಅವರನ್ನು ಭೇಟಿಯಾಗಿದ್ದೆ

   "ಚಿದಂಬರಂ ಅವರನ್ನು ಭೇಟಿಯಾಗಿದ್ದೆ. ಇಬ್ಬರೂ, ತಿಹಾರ್ ಜೈಲಿನಲ್ಲಿ ಇದ್ದಿದ್ದರಿಂದ ನಮ್ಮಿಬ್ಬರ ಭೇಟಿಗೆ ಅವಕಾಶವಿರಲಿಲ್ಲ. ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಬೇಕಿತ್ತು. ಹಾಗಾಗಿ, ಅವರನ್ನು ಭೇಟಿಯಾಗಿದ್ದೆ" ಎಂದು ಡಿಕೆಶಿ, ಚಿದು ಭೇಟಿ ವಿಚಾರದ ಬಗ್ಗೆ ಮಾತನ್ನಾಡಿದ್ದಾರೆ.

   English summary
   By Elections Result: Senior Congress Leader DK Shivakumar Best Wishes To CM Yediyurappa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X