ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಉಚ್ಚಾಟನೆಗೆ ಕೌಂಟ್ ಡೌನ್?

|
Google Oneindia Kannada News

Recommended Video

Bache Gowda is not attend the BJP by election campaigns | Oneindia kannada

ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇನ್ನೇನಿದ್ದರೂ, ಮತದಾನದ (ಡಿ 5) ದಿನದ ಅಸಲಿ ಆಟ. ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.

ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಹೊಸಕೋಟೆ ಕೂಡಾ ಒಂದು. ತೀವ್ರ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ಈ ಕ್ಷೇತ್ರದಲ್ಲಿ , ಬಿಜೆಪಿ - ಕಾಂಗ್ರೆಸ್- ಪಕ್ಷೇತರರ ನಡುವೆ ತ್ರಿಕೋನ ಸ್ಪರ್ಧೆ.

ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸುವ ಕಾಂಗ್ರೆಸ್ ಹೇಳಿಕೆಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸುವ ಕಾಂಗ್ರೆಸ್ ಹೇಳಿಕೆ

ಬಿಜೆಪಿಯ ಕಟ್ಟಾಳು ಆಗಿದ್ದ ಶರತ್ ಬಚ್ಚೇಗೌಡ, ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ, ಪಕ್ಷೇತರರಾಗಿ ಸ್ಪರ್ಧಿಸಿ, ಪಕ್ಷದಿಂದ ಅಮಾನತುಗೊಂಡಿದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ, ಶರತ್, ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.

ಮಗನ ಪರ ಪ್ರಚಾರಕ್ಕೆ ಬಚ್ಚೇಗೌಡ್ರು ಬರ್ತಾರಾ? ಶರತ್ ಕ್ಲಿಯರ್ ಕಟ್ ಸ್ಪಷ್ಟನೆಮಗನ ಪರ ಪ್ರಚಾರಕ್ಕೆ ಬಚ್ಚೇಗೌಡ್ರು ಬರ್ತಾರಾ? ಶರತ್ ಕ್ಲಿಯರ್ ಕಟ್ ಸ್ಪಷ್ಟನೆ

ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರಿಗೆ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ, ರಾಜ್ಯ ಬಿಜೆಪಿ ಘಟಕ ಮತ್ತು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಆದರೆ, ಅದನ್ನು ಅವರು ಪಾಲಿಸಲಿಲ್ಲ.

ತನ್ನ ಮಗ ಸ್ಪರ್ಧಿಸಿರುವ ಹೊಸಕೋಟೆ

ತನ್ನ ಮಗ ಸ್ಪರ್ಧಿಸಿರುವ ಹೊಸಕೋಟೆ

ತನ್ನ ಮಗ ಸ್ಪರ್ಧಿಸಿರುವ ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರದಲ್ಲಿ, ಬಿಜೆಪಿ ಪರ ಪ್ರಚಾರ ನಡೆಸುವಂತೆ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಯಡಿಯೂರಪ್ಪ ಸೂಚಿಸಿದ್ದರು. ಆದರೆ, ಯಾವ ಸೂಚನೆಗೂ ಕ್ಯಾರೇ ಅನ್ನದ ಬಚ್ಚೇಗೌಡ್ರು, ಪ್ರಚಾರದಿಂದ ದೂರ ಉಳಿದರು. ಬಹಿರಂಗ ಪ್ರಚಾರ ಮುಗಿಯುವ ಸ್ವಲ್ಪದಿನಕ್ಕೆ ಮುನ್ನವಾದರೂ, ಬಚ್ಚೇಗೌಡ್ರು ಬರಬಹುದು ಎನ್ನುವ ಬಿಜೆಪಿ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು.

ಪ್ರಚಾರದಿಂದ ದೂರವುಳಿದ ಬಚ್ಚೇಗೌಡ

ಪ್ರಚಾರದಿಂದ ದೂರವುಳಿದ ಬಚ್ಚೇಗೌಡ

ಬಿಜೆಪಿ ಪರವಾಗಿಯೂ ಪ್ರಚಾರ ಮಾಡದೇ, ಮಗನ ಪರವಾಗಿಯೂ ಮತಯಾಚಿಸದೇ ಬಚ್ಚೇಗೌಡ್ರು ದೂರ ಉಳಿದರು. ಹೊಸಕೋಟೆಯಲ್ಲಿ ಮಗ ಸ್ಪರ್ಧಿಸಿರುವುದರಿಂದ ಪ್ರಚಾರ ಮಾಡಲಾಗದೇ ಇದ್ದಲ್ಲಿ, ಚಿಕ್ಕಬಳ್ಳಾಪುರದಲ್ಲಾದರೂ, ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ಪ್ರಚಾರಕ್ಕೂ ಬಚ್ಚೇಗೌಡ್ರು ಹೋಗಲಿಲ್ಲ.

ಪಕ್ಷದ ಸೂಚನೆಯನ್ನು ಮೀರಿದ್ದಕ್ಕಾಗಿ ಶಿಸ್ತುಕ್ರಮ

ಪಕ್ಷದ ಸೂಚನೆಯನ್ನು ಮೀರಿದ್ದಕ್ಕಾಗಿ ಶಿಸ್ತುಕ್ರಮ

ಸರಕಾರದ ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಉಪಚುನಾವಣೆಯಲ್ಲಿ ಪಕ್ಷದ ಸೂಚನೆಯನ್ನು ಮೀರಿದ್ದಕ್ಕಾಗಿ ಮತ್ತು ಅಶಿಸ್ತು ತೋರಿದ್ದಕ್ಕಾಗಿ, ತನ್ನ ಸಂಸದ ಬಿ.ಎನ್.ಬಚ್ಚೇಗೌಡರ ವಿರುದ್ದ ಶಿಸ್ತುಕ್ರಮವನ್ನು, ಬಿಜೆಪಿ, ಯಾವುದೇ ಕ್ಷಣದಲ್ಲಾದರೂ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿದೆ.

ಶರತ್ ಬಚ್ಚೇಗೌಡ ಉಚ್ಚಾಟನೆ

ಶರತ್ ಬಚ್ಚೇಗೌಡ ಉಚ್ಚಾಟನೆ

ನಾಮಪತ್ರ ಸಲ್ಲಿಕೆ ಹಿಂಪಡೆಯುವ ಕೊನೆಯ ದಿನದಂದು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಶರತ್ ಬಚ್ಚೇಗೌಡ ಅವರನ್ನು ಉಚ್ಚಾಟಿಸಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ, ಬಚ್ಚೇಗೌಡ್ರು ಕೂಡಾ ರಾಜೀನಾಮೆ ನೀಡಲಿದ್ದಾರೆಂದು ಸುದ್ದಿಯಾಗಿತ್ತು.

ಶಿಸ್ತುಕ್ರಮ ಎದುರಿಸಬೇಕಾದಂತಹ ಕೆಲಸವನ್ನು ನನ್ನ ತಂದೆ ಮಾಡಿಲ್ಲ

ಶಿಸ್ತುಕ್ರಮ ಎದುರಿಸಬೇಕಾದಂತಹ ಕೆಲಸವನ್ನು ನನ್ನ ತಂದೆ ಮಾಡಿಲ್ಲ

"ನನ್ನ ಪರವಾಗಿ ಬಚ್ಚೇಗೌಡ್ರು ಪ್ರಚಾರ ನಡೆಸಿದರೆ ತಾನೇ, ಅವರ ವಿರುದ್ದ ಶಿಸ್ತುಕ್ರಮ. ನನ್ನ ತಂದೆ, ಪ್ರಚಾರಕ್ಕೆ ಬರುವುದಿಲ್ಲ. ಶಿಸ್ತುಕ್ರಮ ಎದುರಿಸಬೇಕಾದಂತಹ ಕೆಲಸವನ್ನು ನನ್ನ ತಂದೆ ಮಾಡಿಲ್ಲ. ನನ್ನ ತಂದೆ ಮಾಡಿರುವ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ನಾನು ಮತಯಾಚಿಸುತ್ತೇನೆ" ಎಂದು ಶರತ್ ಬಚ್ಬೇಗೌಡ ಹೇಳಿದ್ದರು.

English summary
By Elections: BJP May Take Disciplinary Action Against Their Chikkaballapur MP BN Bache Gowda For Not Campaigning For Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X