ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ; ಬಿಜೆಪಿಗೆ ಸವಾಲಾಗಿರುವ ಕ್ಷೇತ್ರಗಳು

|
Google Oneindia Kannada News

ಬೆಂಗಳೂರು, ನವೆಂಬರ್ 20 : 15 ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದೆ. ಆಡಳಿತ ಪಕ್ಷ ಬಿಜೆಪಿಗೆ ಈ ಚುನವಣೆ ಮಹತ್ವದ್ದಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಕಣಕ್ಕಿಳಿಸಿದೆ.

ಡಿಸೆಂಬರ್ 5ರಂದು 15 ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಅಂತ್ಯಗೊಂಡಿದ್ದು, ಪ್ರಚಾರದ ಅಬ್ಬರ ಜೋರಾಗಿದೆ. ಕನಿಷ್ಠ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯಯತೆ ಬಿಜೆಪಿಗೆ ಇದೆ.

ಬಳ್ಳಾರಿ; ಉಪ ಚುನಾವಣೆ ಹೊಸ್ತಿಲಲ್ಲಿ ಮಹತ್ವದ ಬದಲಾವಣೆಬಳ್ಳಾರಿ; ಉಪ ಚುನಾವಣೆ ಹೊಸ್ತಿಲಲ್ಲಿ ಮಹತ್ವದ ಬದಲಾವಣೆ

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದವರು ಈ ಬಾರಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆಯೇ ಇಲ್ಲವಾಗಿದೆ. ಆದ್ದರಿಂದ, ಉಪ ಚುನಾವಣೆಯಲ್ಲಿ ಪಕ್ಷ ಕ್ಷೇತ್ರವನ್ನು ವಶಕ್ಕೆ ಪಡೆಯಲಿದೆಯೇ? ಕಾದು ನೋಡಬೇಕು.

ಉಪ ಚುನಾವಣೆ; ಬಿಜೆಪಿಗೆ ಕಗ್ಗಂಟಾದ ಮೂರು ಕ್ಷೇತ್ರದ ಬಂಡಾಯ ಉಪ ಚುನಾವಣೆ; ಬಿಜೆಪಿಗೆ ಕಗ್ಗಂಟಾದ ಮೂರು ಕ್ಷೇತ್ರದ ಬಂಡಾಯ

ಕಳೆದ ಬಾರಿ ಬಿಜೆಪಿ 9, 6, 5 ಸಾವಿರ ಚಿಲ್ಲರೆ ಮತಗಳಿಸಿದ ಕ್ಷೇತ್ರಗಳಲ್ಲಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪೈಪೋಟಿ ನೀಡಿ ಬಿಜೆಪಿಯಿಂದ ಕಣಕ್ಕಿಳಿದಿರುವ ಅನರ್ಹ ಶಾಸಕರು ಗೆದ್ದು ಬರಲಿದ್ದಾರೆಯೇ?.

ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆ

ಕೆ. ಆರ್. ಪೇಟೆ ಕ್ಷೇತ್ರ

ಕೆ. ಆರ್. ಪೇಟೆ ಕ್ಷೇತ್ರ

ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ಕ್ಷೇತ್ರ ಬಿಜೆಪಿಗೆ ಸವಾಲಿನ ಕ್ಷೇತ್ರವಾಗಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಡೆದ ಮತ ಕೇವಲ 9,819. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ನಾರಾಯಣ ಗೌಡ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಕಳೆದ ಬಾರಿ ನಾರಾಯಣ ಗೌಡ (ಜೆಡಿಎಸ್) 88016, ಕಾಂಗ್ರೆಸ್‌ನ ಕೆ. ಬಿ. ಚಂದ್ರಶೇಖರ್ 70,897 ಮತ್ತುಬಿಜೆಪಿಯ ಬಿ. ಸಿ. ಮಂಜು 9,819 ಮತಗಳನ್ನು ಪಡೆದಿದ್ದರು.

ಹುಣಸೂರು ಕ್ಷೇತ್ರ

ಹುಣಸೂರು ಕ್ಷೇತ್ರ

ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೆ. ಎಸ್. ರಮೇಶ್ ಕುಮಾರ್ ಪಡೆದ ಮತಗಳು 6,406. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಎಚ್. ವಿಶ್ವನಾಥ್ ಈ ಬಾರಿ ಬಿಜೆಪಿ ಹುರಿಯಾಳು.

ಕಳೆದ ಬಾರಿ ಎಚ್. ವಿಶ್ವನಾಥ್ (ಜೆಡಿಎಸ್) 91,667, ಎಚ್. ಪಿ. ಮಂಜುನಾಥ್ (ಕಾಂಗ್ರೆಸ್) 83,092 ಮತಗಳನ್ನು ಪಡೆದಿದ್ದರು. ಈ ಬಾರಿ ವಿಶ್ವನಾಥ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರ

ಚಿಕ್ಕಬಳ್ಳಾಪುರ ಕ್ಷೇತ್ರ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಸವಾಲು ಎದುರಾಗಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಜಿ. ವಿ. ಮಂಜುನಾಥ್ ಪಡೆದ ಮತಗಳು 5,576. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದಿದ್ದ ಡಾ. ಕೆ. ಸುಧಾಕರ್ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಬಿಜೆಪಿಗೆ ಗೆಲ್ಲಲಿದೆಯೇ?

ಬಿಜೆಪಿಗೆ ಗೆಲ್ಲಲಿದೆಯೇ?

ಬೆಂಗಳೂರಿನ ಯಶವಂತಪುರ ಕ್ಷೇತ್ರವೂ ಬಿಜೆಪಿಗೆ ಸವಾಲಿನ ಕ್ಷೇತ್ರ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಟ ಜಗ್ಗೇಶ್ ಪಡೆದ ಮತ 59,308. ಕಳೆದ ಬಾರಿ 115273 ಮತಗಳನ್ನು ಪಡೆದು ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್. ಟಿ. ಸೋಮಶೇಖರ್ ಈ ಬಾರಿ ಬಿಜೆಪಿ ಅಭ್ಯರ್ಥಿ. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಬಲವಾಗಿದ್ದು, ಟಿ. ಎನ್. ಜವರಾಯಿಗೌಡ 104562 ಮತಗಳನ್ನು ಪಡೆದಿದ್ದರು.

English summary
BJP faces tough task in 15 seat by elections of Karnataka. By elections will be held on December 5, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X