ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ: ಅಮಿತ್ ಶಾಗೆ ತನ್ನ ರಾಜಕೀಯ ವಿಲ್ ಪವರ್ ತೋರಿಸಿದ ಯಡಿಯೂರಪ್ಪ

|
Google Oneindia Kannada News

ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ, ಆಂತರಿಕ ಕಚ್ಚಾಟ ಇಲ್ಲದೇ ಇದ್ದಲ್ಲಿ, ಇನ್ನುಳಿದಿರುವ ಮೂರುವರೆ ವರ್ಷದ ಅವಧಿಯಲ್ಲಿ ನಿರಾಂತಕವಾಗಿ ಯಡಿಯೂರಪ್ಪ ಆಡಳಿತ ನಡೆಸಬಹುದಾಗಿದೆ.

ಈ ಚುನಾವಣೆ ಕಂಪ್ಲೀಟ್ ಆಗಿ ಯಡಿಯೂರಪ್ಪನವರ ಶಕ್ತಿಪ್ರದರ್ಶನವಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ವೇಳೆ, ಇದಾದ ನಂತರ, ಸರಕಾರ, ಸಂಪುಟ ರಚನೆ, ಯಾವುದರಲ್ಲೂ, ಯಡಿಯೂರಪ್ಪನವರ ಮಾತಿಗೆ ಹೈಕಮಾಂಡ್ ಸೊಪ್ಪು ಹಾಕುತ್ತಿರಲಿಲ್ಲ. ಇದಕ್ಕೆ ಅವರ ಬಾಡಿ ಲಾಂಗ್ವೇಜ್, ಹೇಳಿಕೆಗಳೇ ಸಾಕ್ಷಿಯಾಗಿದ್ದವು.

ಕೆ.ಆರ್.ಪುರಂನಲ್ಲಿ ಜೆಡಿಎಸ್ಸಿಗೆ ಈ ರೀತಿಯ ಮುಖಭಂಗ ನ್ಯಾಯವೇ?ಕೆ.ಆರ್.ಪುರಂನಲ್ಲಿ ಜೆಡಿಎಸ್ಸಿಗೆ ಈ ರೀತಿಯ ಮುಖಭಂಗ ನ್ಯಾಯವೇ?

ಆದರೆ, ಉಪಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ, ಇಡೀ ಈ ಟಾಸ್ಕ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬಿಎಸ್ವೈ, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಚುನಾವಣೆ ಮುಗಿಯುವವರೆಗೆ, ಎಲ್ಲಾ ಆಗುಹೋಗುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡರು.

ಸುಬ್ರಮಣಿಯನ್ ಸ್ವಾಮಿ ಹೊಗಳಿಕೆಗೆ ಭಾಜನರಾದ ಸಿಎಂ ಯಡಿಯೂರಪ್ಪಸುಬ್ರಮಣಿಯನ್ ಸ್ವಾಮಿ ಹೊಗಳಿಕೆಗೆ ಭಾಜನರಾದ ಸಿಎಂ ಯಡಿಯೂರಪ್ಪ

ಈ ವಯಸ್ಸಿನಲ್ಲೂ ಸುಮಾರು ನಾಲ್ಕುವರೆ ಸಾವಿರ ಕಿಲೋಮೀಟರ್ ಸಂಚರಿಸಿ, ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದರು. ಹೊಸಕೋಟೆ ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಭಿನ್ನಮತವನ್ನು ಸರಿದಾರಿಗೆ ತಂದರು. ಈ ಉಪಚುನಾವಣೆಯ ಅಭೂತಪೂರ್ವ ಯಶಸ್ಸಿನ ಜೊತೆಗೆ, ಅಮಿತ್ ಶಾಗೆ ಬಿಎಸ್ವೈ ಐದು ಸಂದೇಶವನ್ನು ರವಾನಿಸಿದ್ದಾರೆ.

ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ

ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ

ವ್ಹಿಲ್ ಪವರ್ ಇದ್ದರೆ, ವಯಸ್ಸು ಯಾವ ಲೆಕ್ಕ ಎನ್ನುವುದನ್ನು ಯಡಿಯೂರಪ್ಪ ರುಜುವಾತು ಪಡಿಸಿದ್ದಾರೆ. ಬಿಜೆಪಿಯಲ್ಲಿ 75+ ಆದ ಕೂಡಲೇ, ಅವರನ್ನು ಸಕ್ರಿಯ ರಾಜಕಾರಣದಿಂದ ದೂರವುಳಿಸುವ ಪರಿಪಾಠವಿದೆ. ಅದಕ್ಕೆ ಉದಾಹರಣೆ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಷಿ. ಆದರೆ, 76ವರ್ಷದ ಯಡಿಯೂರಪ್ಪ, ಯುವಕರು ನಾಚಿಸುವಂತೆ, ಉಪಚುನಾವಣೆ ಮತ್ತು ಪ್ರವಾಹ ಪರಿಹಾರದ ವೇಳೆ, ಓಡಾಡಿ, '75 ವರ್ಷಗಳ ಏಜ್ ಕ್ಯಾಪ್' ನನಗೆ ಅನ್ವಯಿಸುವುದಿಲ್ಲ ಎಂದು ಸಾರಿದಂತಿದೆ.

ಎಲ್ಲಾ ಐದು ಕ್ಷೇತ್ರಗಳನ್ನು, ಬಿಜೆಪಿ ಕ್ಲೀನ್ ಸ್ವೀಪ್

ಎಲ್ಲಾ ಐದು ಕ್ಷೇತ್ರಗಳನ್ನು, ಬಿಜೆಪಿ ಕ್ಲೀನ್ ಸ್ವೀಪ್

ಉಪಚುನಾವಣೆ ನಡೆದ ಉತ್ತರ ಕರ್ನಾಟಕದ ಭಾಗದ (ಗೋಕಾಕ್, ಅಥಣಿ, ಹಿರೇಕೆರೂರು, ರಾಣೆಬೆನ್ನೂರು, ಕಾಗವಾಡ) ಎಲ್ಲಾ ಐದು ಕ್ಷೇತ್ರಗಳನ್ನು, ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಬಹುತೇಕ ಲಿಂಗಾಯಯ ಸಮುದಾಯ ಪ್ರಾಬಲ್ಯವಿರುವ ಈ ಕ್ಷೇತ್ರಗಳಲ್ಲಿ, ತನ್ನ ವೈಯಕ್ತಿಕ ಚರಿಸ್ಮಾದಿಂದಲೇ ಪಕ್ಷಕ್ಕೆ ಜಯತಂದು ಕೊಡಲು ಕಾರಣಕರ್ತರಾದರು. ಆ ಮೂಲಕ, ಯಡಿಯೂರಪ್ಪ, ತಾವು, ಲಿಂಗಾಯ ಸಮುದಾಯದ ಪ್ರಶ್ನಾತೀತ ನಾಯಕ ಎನ್ನುವುದನ್ನು ಮತ್ತೊಮ್ಮೆ, ರಾಜ್ಯದ ಮತ್ತು ಕೇಂದ್ರದ ಮುಖಂಡರಿಗೆ ಸಾರಿದ್ದಾರೆ.

ತಂತ್ರಗಾರಿಕೆ ರೂಪಿಸುವಲ್ಲಿ ತಾನೆಂತಹ ಗಟ್ಟಿಗ ಎನ್ನುವುದನ್ನು ಬಿಎಸ್ವೈ ರುಜುವಾತು

ತಂತ್ರಗಾರಿಕೆ ರೂಪಿಸುವಲ್ಲಿ ತಾನೆಂತಹ ಗಟ್ಟಿಗ ಎನ್ನುವುದನ್ನು ಬಿಎಸ್ವೈ ರುಜುವಾತು

ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ತಾನೆಂತಹ ಗಟ್ಟಿಗ ಎನ್ನುವುದನ್ನು ಯಡಿಯೂರಪ್ಪ ರುಜುವಾತು ಪಡಿಸಿದ್ದಾರೆ. ಕಳೆದ ಅಸೆಂಬ್ಲಿ, ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಇದನ್ನು ಪ್ರೂವ್ ಮಾಡಿದ್ದಾರೆ. ಈ ಎರಡು ಚುನಾವಣೆಗಳಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ತನ್ನ ಕೈಮೇಲಾಗದಿದ್ದರೂ, ಪ್ರಚಾರ ಮತ್ತು ಇತರ ತಂತ್ರಗಾರಿಕೆ ರೂಪಿಸಿ, ಯಡಿಯೂರಪ್ಪ ಸೈ ಎನಿಸಿಕೊಂಡಿದ್ದರು.

ಮೂರುವರೆ ವರ್ಷ ನಿರಾಂತಕವಾಗಿ ಕೆಲಸ ಮಾಡಲು ಬಿಡಿ

ಮೂರುವರೆ ವರ್ಷ ನಿರಾಂತಕವಾಗಿ ಕೆಲಸ ಮಾಡಲು ಬಿಡಿ

ಹಾಲೀ ಸರಕಾರದ ಅವಧಿ ಮುಗಿದ ನಂತರ, ಯಡಿಯೂರಪ್ಪ ಬಹುತೇಕ ಸಕ್ರಿಯ ರಾಜಕಾರಣದಿಂದ ದೂರ ಸರಿಯಬಹುದು. ವರಿಷ್ಠರು ಕೂಡಾ, ಅವರಿಗೆ ರಾಜ್ಯಪಾಲ ಹುದ್ದೆಯ ಆಫರ್ ಅನ್ನು ನೀಡಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು. ತಮ್ಮ ಮಕ್ಕಳಿಗೆ ರಾಜಕೀಯದಲ್ಲಿ ದಾರಿ ತೋರಿ, ಬಿಎಸ್ವೈ ರಾಜಕೀಯದಿಂದ ರಿಟೈರ್ಡ್ ಆಗಬಹುದು. ಹಾಗಾಗಿ, ನನ್ನ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ, ಮೂರುವರೆ ವರ್ಷ ನಿರಾಂತಕವಾಗಿ ಕೆಲಸ ಮಾಡಲು ಬಿಡಿ, ಎನ್ನುವ ಸಂದೇಶವೂ,, ವರಿಷ್ಠರಿಗೆ ತಲುಪಬಹುದು.

ಉತ್ತರ ಕರ್ನಾಟಕದ ಕಂಡು ಕೇಳರಿಯದ ಪ್ರವಾಹ

ಉತ್ತರ ಕರ್ನಾಟಕದ ಕಂಡು ಕೇಳರಿಯದ ಪ್ರವಾಹ

ಉತ್ತರ ಕರ್ನಾಟಕದ ಭಾಗಗಳು ಕಂಡು ಕೇಳರಿಯದ ಪ್ರವಾಹಕ್ಕೆ ಒಳಗಾದಾಗ, ಕೇಂದ್ರದಿಂದ, ತನ್ನದೇ ಪಕ್ಷದ ರಾಜ್ಯ ಸರಕಾರಕ್ಕೆ ಸೂಕ್ತ ಸಹಾಯ ದೊರಕಿರಲಿಲ್ಲ. ಇದು, ರಾಜ್ಯ ಬಿಜೆಪಿ ಮುಖಂಡರಿಗೆ ಭಾರೀ ಇರಿಸುಮುರಿಸು ಉಂಟುಮಾಡಿತ್ತು. ಮೋದಿ, ಶಾ ಭೇಟಿಗೆ ಹೋದಾಗ, ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಆಪಾದನೆಯೂ ವರಿಷ್ಠರ ಮೇಲಿತ್ತು. ಈ ಉಪಚುನಾವಣೆಯ ಫಲಿತಾಂಶದ ಮೂಲಕ, ದೆಹಲಿಗೆ ಬಂದಾಗ ಸರಿಯಾದ ಮರ್ಯಾದೆಯನ್ನು ಕೊಡಿ, ಎನ್ನುವ ಸಂದೇಶವೂ, ದೆಹಲಿ ನಾಯಕರಿಗೆ ಹೋಗಬಹುದು.

English summary
By Elections Big Win For BJP: What Message Will Go To BJP National President Amit Shah From Karnataka CM B.S. Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X