ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ: ಪ್ರಚಾರಕ್ಕೆ ಹೋಗಲು ಶಾಸಕರಿಗೆ ಯಡಿಯೂರಪ್ಪ ಸೂಚನೆ

|
Google Oneindia Kannada News

ಬೆಂಗಳೂರು, ಮೇ 01: ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳು ರಾಜ್ಯ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಈ ಉಪಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ.

ಬಿಜೆಪಿಯು ಈಗಾಗಲೇ ಎರಡೂ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ್ದು ನಾಮಪತ್ರ ಸಲ್ಲಿಕೆ ಸಹ ಆಗಿ, ಪ್ರಚಾರ ಕಾರ್ಯ ಆರಂಭಿಸಿದೆ. ಈ ಉಪಚುನಾವಣೆ ಗೆಲವು ಬಿಜೆಪಿಯ ಸಂಖ್ಯಾಬಲ ಹೆಚ್ಚಿಸಿ ಅಧಿಕಾರಕ್ಕೆ ಇನ್ನಷ್ಟು ಹತ್ತಿರ ಮಾಡಲಿದೆ.

ಈ ನಡುವೆ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಸೂಚನೆಯನ್ನು ರವಾನಿಸಿದ್ದು, ಎರಡೂ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

By-Election: Yeddyurappa ask BJP MLAs to campaign

ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಕಡ್ಡಾಯವಾಗಿ ಎರಡೂ ಕ್ಷೇತ್ರದಲ್ಲಿ ಪ್ರಚಾರ ಮಾಡಲೇ ಬೇಕು ಎಂದಿರುವ ಯಡಿಯೂರಪ್ಪ ಅವರು ದಕ್ಷಿಣದ ಶಾಸಕರು ಹಾಗೂ ಖ್ಯಾತಿ ಹೊಂದಿರುವ ಶಾಸಕರನ್ನು ಸಹ ಕ್ಷೇತ್ರಗಳಿಗೆ ಆಹ್ವಾನಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಸಡಿಲಿಕೆ : ಆಯೋಗಕ್ಕೆ ಬಿಎಸ್‌ವೈ ಪತ್ರ ಚುನಾವಣಾ ನೀತಿ ಸಂಹಿತೆ ಸಡಿಲಿಕೆ : ಆಯೋಗಕ್ಕೆ ಬಿಎಸ್‌ವೈ ಪತ್ರ

ನೀತಿ ಸಂಹಿತೆ ಇರುವ ಕಾರಣ ಸ್ವಕ್ಷೇತ್ರದಲ್ಲಿ ಇದ್ದರೂ ಸಹ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ, ಬದಲಾಗಿ ಚುನಾವಣಾ ಅಂಗಳಕ್ಕೆ ಬಂದು ಮತದಾರನ ಮನವೊಲಿಸುವ ಯತ್ನ ಮಾಡಲಿ ಎಂಬುದು ಯಡಿಯೂರಪ್ಪ ಆಶಯ.

ಯಡಿಯೂರಪ್ಪ ಟೀಕೆಗೆ ಟ್ವಿಟರ್‌ನಲ್ಲಿ ಉತ್ತರ ಕೊಟ್ಟ ಕುಮಾರಸ್ವಾಮಿಯಡಿಯೂರಪ್ಪ ಟೀಕೆಗೆ ಟ್ವಿಟರ್‌ನಲ್ಲಿ ಉತ್ತರ ಕೊಟ್ಟ ಕುಮಾರಸ್ವಾಮಿ

ಕಾಂಗ್ರೆಸ್ ಸಹ ತನ್ನ ಪ್ರಭಾವಿ ಉತ್ತರ ಕರ್ನಾಟಕ ಶಾಸಕರು, ಮಂತ್ರಿಗಳ ಕೈಗೆ ಚಿಂಚೋಳಿ, ಕುಂದಗೋಳ ಉಪಚುನಾವಣೆ ಉಸ್ತುವಾರಿ ನೀಡಿದ್ದು, ಈಗಾಗಲೇ ಪ್ರಚಾರ ಆರಂಭಿಸಿದೆ.

English summary
BJP president Yeddyurappa instructed BJP MLAs to campaign for BJP candidates in Chincholi and Kundhagola assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X