ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23 : ಐದು ಕ್ಷೇತ್ರಗಳ ಉಪ ಚುನಾವಣಾ ಕಣ ರಂಗೇರಿದೆ. ಪ್ರಚಾರದ ಭರಾಟೆ ಹೆಚ್ಚಾಗಿದ್ದು, ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ಅವರ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ಸೋಮವಾರ ಪ್ರಚಾರ ನಡೆಸಿದರು. ಬಿ.ಶ್ರೀರಾಮುಲು ಅವರ ತವರು ನೆಲದಲ್ಲಿಯೇ ನಿಂತು ಅವರ ವಿರುದ್ಧ ವಾಗ್ದಾಳಿ ನಡೆಸಿದರು, ಹಲವು ಪ್ರಶ್ನೆಗಳನ್ನು ಕೇಳಿದ್ದರು.

ಬಳ್ಳಾರಿ ನೆಲದಲ್ಲಿ ಶ್ರೀರಾಮುಲುಗೆ 5 ಪ್ರಶ್ನೆ ಕೇಳಿದ ಸಿದ್ದರಾಮಯ್ಯಬಳ್ಳಾರಿ ನೆಲದಲ್ಲಿ ಶ್ರೀರಾಮುಲುಗೆ 5 ಪ್ರಶ್ನೆ ಕೇಳಿದ ಸಿದ್ದರಾಮಯ್ಯ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಈಗ ಶ್ರೀರಾಮುಲು ಅವರು ಅದಕ್ಕೆಲ್ಲಾ ಉತ್ತರಗಳನ್ನು ನೀಡಿದ್ದಾರೆ.

ಬಳ್ಳಾರಿ ಉಪ ಚುನಾವಣೆ : ಕಣದಲ್ಲಿ ನಾಲ್ವರು, ತಿಪ್ಪೇಸ್ವಾಮಿ ನಾಮಪತ್ರ ವಾಪಸ್ಬಳ್ಳಾರಿ ಉಪ ಚುನಾವಣೆ : ಕಣದಲ್ಲಿ ನಾಲ್ವರು, ತಿಪ್ಪೇಸ್ವಾಮಿ ನಾಮಪತ್ರ ವಾಪಸ್

ಸಿದ್ದರಾಮಯ್ಯ ಮತ್ತು ಬಿ.ಶ್ರೀರಾಮುಲು ಅವರ ಟ್ವಿಟರ್ ವಾರ್ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇನ್ನೂ ಒಂದು ವಾರಗಳ ಕಾಲ ಚುನಾವಣಾ ಪ್ರಚಾರ ನಡೆಯಲಿದೆ, ಶ್ರೀರಾಮುಲು ಉತ್ತರಕ್ಕೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡಲಿದ್ದಾರೆಯೇ? ಕಾದು ನೋಡಬೇಕು....

ಬಳ್ಳಾರಿ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ ವಿ.ಎಸ್.ಉಗ್ರಪ್ಪ!ಬಳ್ಳಾರಿ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ ವಿ.ಎಸ್.ಉಗ್ರಪ್ಪ!

371 ಜೆ ಜಟಾಪಟಿ

ಶ್ರೀರಾಮುಲುಗೆ 371 ಜೆ ಅಂದರೆ ಏನು ಅಂತಲೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದಕ್ಕೆ ಶ್ರೀರಾಮುಲು ಅವರು ತಿರುಗೇಟು ಕೊಟ್ಟಿದ್ದಾರೆ.

ಲೋಕಸಭೆ, ವಿಧಾಸನಸಭೆಯಲ್ಲಿ ಮಾತನಾಡಿಲ್ಲ

ಲೋಕಸಭೆ, ವಿಧಾಸನಸಭೆಯಲ್ಲಿ ಮಾತನಾಡಿಲ್ಲ

ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಅವರು ಮಾತನಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಹೇಳಿಕೆಗೆ ಶ್ರೀರಾಮುಲು ಅವರು ತಿರುಗೇಟು ನೀಡಿದ್ದಾರೆ. ನಾನು ಮಾತನಾಡುವಾಗ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದರು ಎಂದು ಟಾಂಗ್ ನೀಡಿದ್ದಾರೆ.

ರಾಹುಲ್ ಗಾಂಧಿ ಎಳೆದು ತಂದ ಶ್ರೀರಾಮುಲು

ಲೋಕಸಭೆ ನಾನು ಮಾತನಾಡಿದ್ದೇನೆ ಎಂದು ಹೇಳಿರುವ ಶ್ರೀರಾಮುಲು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ಚರ್ಚೆಗೆ ಎಳೆದು ತಂದಿದ್ದಾರೆ.

ಸಿದ್ದರಾಮಯ್ಯ ಟ್ವಿಟ್

ಸಿದ್ದರಾಮಯ್ಯ ಅವರು ವಿ.ಎಸ್.ಉಗ್ರಪ್ಪ ಅವರು ಬಳ್ಳಾರಿಯವರು ಅಲ್ಲ ಎನ್ನುವುದಾದರೆ ಬಾದಾಮಿಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಶ್ರೀರಾಮುಲು ಅವರು ಬಾದಾಮಿಯಲ್ಲಿಯೇ ಜನಿಸಿದವರಾ ಎಂದು ಪ್ರಶ್ನೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ

ರೈತರ ಸಾಲ ಮನ್ನಾ ಮಾಡಿ ಎಂದು ಶ್ರೀರಾಮುಲು ಒಂದು ದಿನವೂ ಲೋಕಸಭೆಯಲ್ಲಿ ಒತ್ತಾಯ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

English summary
Karnataka by election campaign witnessed for war of words between political leaders. Twitter war between Karnataka Former Chief Minister Siddaramaiah and Molakalmuru MLA B.Sriramulu. Here is a interesting tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X