ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಹಾಕಿದ ಒಂದೇ ಒಂದು ಪ್ರಶ್ನೆಗೆ ಮೂಲ ಕಾಂಗ್ರೆಸ್ಸಿಗರು ಥಂಡಾ

|
Google Oneindia Kannada News

"ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ" ಎಂದು ಕಾಂಗ್ರೆಸ್ ಮುಖಂಡರು ಎಷ್ಟೇ ಹೇಳಿದರೂ, ಬೆಂಕಿಯಿಲ್ಲದೇ ಹೊಗೆಯಾಡುತ್ತದೆಯೇ?

ಡಿಸೆಂಬರ್ ಐದರಂದು ಉಪಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವ ಸಂಬಂಧ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆ ಕರೆದಿದ್ದದ್ದು ಗೊತ್ತಿರುವ ವಿಚಾರ. ಅದರಲ್ಲಿ, ಸಿದ್ದರಾಮಯ್ಯ, ಕೆ.ಎಚ್.ಮುನಿಯಪ್ಪ ಆದಿಯಾಗಿ ಹಿರಿಯ ಮುಖಂಡರು ಭಾಗವಹಿಸಿದ್ದರು.

ಸಭೆ ಆರಂಭವಾದ ಸ್ವಲ್ಪಹೊತ್ತಿನಲ್ಲೇ ಮುನಿಯಪ್ಪ ಸಭೆಯಿಂದ ಹೊರ ನಡೆದಿದ್ದರು. ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಪೈಕಿ, ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿಯಾಗಿದೆ.

ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಹಿರಿಯ ಮುಖಂಡರ ನಡುವೆ ಮತ್ತೊಮ್ಮೆ ಮನಸ್ತಾಪದ ಮಾತುಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಸರಣಿ ಸಭೆಯಲ್ಲಿ ಮತ್ತೊಮ್ಮೆ ಸಮನ್ವಯದ ಕೊರತೆ

ಕೆಪಿಸಿಸಿ ಸರಣಿ ಸಭೆಯಲ್ಲಿ ಮತ್ತೊಮ್ಮೆ ಸಮನ್ವಯದ ಕೊರತೆ

ಸೋಮವಾರ (ನ 11) ನಡೆದಿದ್ದ ಕೆಪಿಸಿಸಿ ಸರಣಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ವಿರೋಧಿ ಬಣದ ನಡುವೆ ಮತ್ತೊಮ್ಮೆ ಸಮನ್ವಯದ ಕೊರತೆ ಎದುರಾಗಿದೆ. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ, ಮುಂದಿನ ಚರ್ಚೆ ನಡೆಸೋಣ ಎಂದು ಸಭೆಯನ್ನು ಮುಂದೂಡಲಾಯಿತು. ಈ ಹಿಂದೆಯೂ, ಸಿದ್ದರಾಮಯ್ಯ ವಿರುದ್ದ ಮುನಿಸಿಕೊಂಡಿದ್ದ ಕೆ.ಎಚ್.ಮುನಿಯಪ್ಪ ಸಭೆಯ ಮಧ್ಯದಲ್ಲೇ ಹೊರ ನಡೆದಿದ್ದರು.

ಕೆ.ಎಚ್. ಮುನಿಯಪ್ಪ, ಬಿ.ಕೆ.ಹರಿಪ್ರಸಾದ್

ಕೆ.ಎಚ್. ಮುನಿಯಪ್ಪ, ಬಿ.ಕೆ.ಹರಿಪ್ರಸಾದ್

ಆದರೆ, ಸಭೆಯಿಂದ ಹೊರ ಬಂದಾಗ, ಕೋಲಾರ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧದ ಕೆಲಸಕ್ಕೆ ತುರ್ತಾಗಿ ಹೋಗಬೇಕಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಮುನಿಯಪ್ಪನವರಂತೇ ಬಿ.ಕೆ.ಹರಿಪ್ರಸಾದ್ ಕೂಡಾ ಹೊರನಡೆದಿದ್ದರು. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಬೇಕು ಎನ್ನುವ ಇವರಿಬ್ಬರ ಒತ್ತಾಯಕ್ಕೆ ಸಿದ್ದರಾಮಯ್ಯ ಮಣಿದಿಲ್ಲ ಎನ್ನುವ ಮಾತಿದೆ. ಜೊತೆಗೆ, ಸಿದ್ದರಾಮಯ್ಯ ಹಾಕಿದ ಪ್ರಶ್ನೆ, ಇವರನ್ನು ಕೆರಳಿಸಿದೆ.

ಮಹಾರಾಷ್ಟ್ರ ರಾಜಕೀಯ ಪ್ರಹಸನದಲ್ಲಿ ಕೊನೆಗೆ ಗೆದ್ದಿದ್ದು ಕಾಂಗ್ರೆಸ್!ಮಹಾರಾಷ್ಟ್ರ ರಾಜಕೀಯ ಪ್ರಹಸನದಲ್ಲಿ ಕೊನೆಗೆ ಗೆದ್ದಿದ್ದು ಕಾಂಗ್ರೆಸ್!

ಸಿದ್ದರಾಮಯ್ಯ ಮತ್ತು ಕೆಲವು ಹಿರಿಯ ಮುಖಂಡರ ನಡುವೆ ಕಾವೇರಿದ ವಾತಾವರಣ?

ಸಿದ್ದರಾಮಯ್ಯ ಮತ್ತು ಕೆಲವು ಹಿರಿಯ ಮುಖಂಡರ ನಡುವೆ ಕಾವೇರಿದ ವಾತಾವರಣ?

ರಾಜು ಕಾಗೆ ಮತ್ತು ಅಶೋಕ್ ಪೂಜಾರಿಗೆ ಟಿಕೆಟ್ ನೀಡಬೇಕೇ, ಬೇಡವೇ ಎನ್ನುವ ಚರ್ಚೆ, ಸಿದ್ದರಾಮಯ್ಯ ಮತ್ತು ಕೆಲವು ಹಿರಿಯ ಮುಖಂಡರ ನಡುವೆ ಕಾವೇರಿದ ವಾತಾವರಣಕ್ಕೆ ಸಾಕ್ಶಿಯಾಗಿದೆ. "ನೀವು ಹೇಳಿದ ಅಭ್ಯರ್ಥಿಗೇ ಟಿಕೆಟ್ ಕೊಡೋಣ. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳುತ್ತೀರಾ" ಎನ್ನುವ ಪ್ರಶ್ನೆಗೆ, ಹಿರಿಯ ಕಾಂಗ್ರೆಸ್ಸಿಗರು ಮರುತ್ತರ ನೀಡಿದರು ಎಂದು ಹೇಳಲಾಗುತ್ತಿದೆ.

ಅವರನ್ನೆಲ್ಲಾ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ನಿಮ್ಮದಲ್ಲವೇ

ಅವರನ್ನೆಲ್ಲಾ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ನಿಮ್ಮದಲ್ಲವೇ

"ಈಗಾಗಲೇ ಎಂಟು ಕ್ಷೇತ್ರದ ಅಭ್ಯರ್ಥಿಯ ಘೋಷಣೆಯಾಗಿದೆ. ನೀವು ಬಯಸಿದಂತೆ ಟಿಕೆಟ್ ನೀಡಲಾಗಿದೆ. ಅವರನ್ನೆಲ್ಲಾ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ನಿಮ್ಮದಲ್ಲವೇ" ಎನ್ನುವ ಮರುಪ್ರಶ್ನೆ ಸಿದ್ದರಾಮಯ್ಯನವರಿಗೆ ಎದುರಾಗಿದೆ. ಈ ವಿಚಾರ, ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಸಿದ್ದರಾಮಯ್ಯನವರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ನಡುವೆ 'ಏಕವಚನದ ವಾಕ್ಸಮರ

ಸಿದ್ದರಾಮಯ್ಯ ನಡುವೆ 'ಏಕವಚನದ ವಾಕ್ಸಮರ

ಕರ್ನಾಟಕ ಕಾಂಗ್ರೆಸ್ ನಲ್ಲಿ ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಕೆ.ಎಚ್.ಮುನಿಯಪ್ಪ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ಪರಾಭವಗೊಂಡ ನಂತರ, ಸ್ವಪಕ್ಷೀಯರ ಮೇಲಿನ ಇವರ ಸಿಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೇರವಾಗಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿರುವ ಮುನಿಯಪ್ಪ, ಕೆಲವು ದಿನಗಳ ಹಿಂದೆ, ಇವರ ಮತ್ತು ಸಿದ್ದರಾಮಯ್ಯ ನಡುವೆ 'ಏಕವಚನದ ವಾಕ್ಸಮರ' ರಾಜ್ಯದೆಲ್ಲಡೆ ಸುದ್ದಿಯಾಗಿತ್ತು.

English summary
By Election Congress Ticket Finalization For 7 Assembly Seats: Opposition Leader Siddaramaiah Question To Senior Leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X