ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಫಲಿತಾಂಶ; ಬೆಳಗಾವಿಗೆ ಎಷ್ಟು ಸಚಿವ ಸ್ಥಾನ?

|
Google Oneindia Kannada News

ಬೆಳಗಾವಿ, ಡಿಸೆಂಬರ್ 9 : 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಳಗಾವಿ ಜಿಲ್ಲೆಯಲ್ಲಿ 3 ಸ್ಥಾನಗಳಲ್ಲಿ ಜಯಗಳಿಸಿದೆ. ಜಿಲ್ಲೆಗೆ ಎಷ್ಟು ಸಚಿವ ಸ್ಥಾನಗಳು ಸಿಗಲಿವೆ? ಎಂಬ ಲೆಕ್ಕಾಚಾರಗಳು ಈಗ ಆರಂಭವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ.

ಉಪ ಚುನಾವಣೆಯಲ್ಲಿ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಮತ್ತು ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಈ ಮೂವರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂಬ ಲೆಕ್ಕಾಚಾರ ಈಗ ಆರಂಭವಾಗಿದೆ.

ಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲ ಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲ

ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ಜಿಲ್ಲೆಯ ರಾಜಕೀಯದಲ್ಲಿ ಹಬ್ಬಿವೆ. ಜಿಲ್ಲೆಯ ನಾಯಕರಾದ ಲಕ್ಷ್ಮಣ ಸವದಿ ಈಗಾಗಲೇ ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳು.

17 ಅನರ್ಹ ಶಾಸಕರಲ್ಲಿ ಉಪ ಚುನಾವಣೆ ಗೆದ್ದವರು, ಸೋತವರು 17 ಅನರ್ಹ ಶಾಸಕರಲ್ಲಿ ಉಪ ಚುನಾವಣೆ ಗೆದ್ದವರು, ಸೋತವರು

ಲಕ್ಷ್ಮಣ ಸವದಿ ಯಡಿಯೂರಪ್ಪ ಸಂಪುಟದಲ್ಲಿ ಸಾರಿಗೆ ಸಚಿವರು. ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು. ಈಗಾಗಲೇ ಬೆಳಗಾವಿ ಪ್ರತಿನಿಧಿಸುವ ಇಬ್ಬರು ಸಚಿವರು ಇದ್ದಾರೆ. ಈಗ ಉಪ ಚುನಾವಣೆಯಲ್ಲಿ ಗೆದ್ದ ಯಾರು ಸಚಿವರಾಗಲಿದ್ದಾರೆ? ಎಂಬುದು ಪ್ರಶ್ನೆ.

ಉಪ ಚುನಾವಣೆ; ಜೆಡಿಎಸ್ ಸೋಲಿಗೆ ಕಾರಣಗಳೇನು? ಉಪ ಚುನಾವಣೆ; ಜೆಡಿಎಸ್ ಸೋಲಿಗೆ ಕಾರಣಗಳೇನು?

ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ

ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ

ಕರ್ನಾಟಕದಲ್ಲಿಯೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. ಒಟ್ಟು 17 ವಿಧಾನಸಭಾ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಈಗಾಗಲೇ ಒಂದು ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ 2 ಸಚಿವ ಸ್ಥಾನವನ್ನು ಜಿಲ್ಲೆ ಹೊಂದಿದೆ. ಉಪ ಚುನಾವಣೆಯಲ್ಲಿ ಮೂವರು ಬಿಜೆಪಿ ಶಾಸಕರು ಗೆದ್ದಿದ್ದು ಯಾರು ಸಚಿವರಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ?

ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ?

ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿಯಾಗಲಿದ್ದಾರೆಯೇ?. ಗೋಕಾಕ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಶಾಸಕ ಬಾಲಚಂದ್ರ ಜಾರಕಿಹೊಳಿ, "ರಮೇಶ್ ಜಾರಕಿಹೊಳಿ ಗೆದ್ದ ಬಳಿಕ ಡಿಸಿಎಂ ಆಗಲಿದ್ದಾರೆ" ಎಂದು ಹೇಳಿದ್ದರು. ಆದ್ದರಿಂದ, ಈ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಭಾವಿ ಸಚಿವರೇ ಎಂದು ಕರೆದಿದ್ದರು

ಭಾವಿ ಸಚಿವರೇ ಎಂದು ಕರೆದಿದ್ದರು

ಅಥಣಿ ಮತ್ತು ಕಾಗವಾಡದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಚಾರ ಮಾಡುವಾಗ, ಶ್ರೀಮಂತ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿಯನ್ನು "ಭಾವಿ ಸಚಿವರೇ" ಎಂದು ಕರೆದಿದ್ದರು. ಈ ಭರವಸೆ ನಂಬಿ ಜನರು ಬಿಜೆಪಿ ಬೆಂಬಲಿಸಿದ್ದಾರೆ. ಈಗ ಯಾರು ಸಚಿವರಾಗಲಿದ್ದಾರೆ?.

ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿ

ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿ

ಬೆಳಗಾವಿ ಜಿಲ್ಲೆಗೆ ಸೇರಿದ ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಮುಂದಿಟ್ಟಿದ್ದರು. ಈಗ ಉಪ ಚುನಾವಣೆಯಲ್ಲಿ ಗೆದ್ದ ಮೂವರು ಮತ್ತು ಉಮೇಶ್ ಕತ್ತಿ ಸೇರಿ 4 ಸಚಿವರು ಜಿಲ್ಲೆಗೆ ಸಿಗಲಿದ್ದಾರೆಯೇ? ಎಂಬ ಚರ್ಚೆಗಳು ಆರಂಭವಾಗಿವೆ.

English summary
BJP bagged 3 seat in Belagavi in 15 seat by elections of Karnataka assembly. District may get 4 more ministers as Chief Minister B.S.Yediyurappa promise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X