• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾವಣೆ, ಪುನೀತ್ ಶ್ರದ್ಧಾಂಜಲಿಗೆ ಜನ ಸ್ತೋಮ: TACಗೆ 3ನೇ ಅಲೆಯ ಆತಂಕ

|
Google Oneindia Kannada News

ಬೆಂಗಳೂರು ನವೆಂಬರ್ 3: ರಾಜ್ಯದಲ್ಲಿ ಮೊನ್ನೆಯಷ್ಟೇ ನಡೆದ ಉಪಚುನಾವಣೆಗೆ ಸೇರಿದ ಜನ ಹಾಗೂ ಸ್ಯಾಂಡಲ್‌ವುಡ್ ನಟ ಪುನೀತ್ ರಾಜುಕುಮಾರ್ ನಿಧನದ ಬಳಿಕ ರಾಜ್ಯದಲ್ಲೆಡೆಯಿಂದ ಬೆಂಗಳೂರಿನಲ್ಲಿ ಜನ ಸ್ತೋಮವೇ ನೆರೆದಿರುವ ಪರಿಣಾಮ ಕೊರೊನಾ ಮೂರನೇ ಅಲೆಯ ಆತಂಕವನ್ನು ಹೆಚ್ಚಿಸಿದೆ. ಉಪಚುನಾವಣೆ ಪ್ರಚಾರದಲ್ಲಿ, ಮತದಾನದಲ್ಲಿ ಹಾಗೂ ಪುನೀತ್ ರಾಜುಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅಪಾರ ಜನಸ್ತೋಮ ಸೇರಿತ್ತು. ಇದರಿಂದ ಕೊರೊನಾ ಮೂರನೇ ಅಲೆ ಹರಡುವ ಆತಂಕದ ವರದಿಯನ್ನು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಜೊತೆಗೆ ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯಿಂದಾಗಿ ಪರೀಕ್ಷೆಯನ್ನು ಹೆಚ್ಚಿಸುವುದು ಕಡ್ಡಾಯವಾಗಿದೆ ಎಂದು TAC ಯ ಹಿರಿಯ ಸದಸ್ಯರು ತಿಳಿಸಿದ್ದಾರೆ. "ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಮೀರಿರುವಾಗ, ಉಪಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ (ಸಿಂದಗಿ, ಹಾಣಗಲ್) ಕೊರೊನಾ ಪರೀಕ್ಷೆ ಹೆಚ್ಚಿಸಿಲು TAC ಈಗಾಗಲೇ ಶಿಫಾರಸು ಮಾಡಿದೆ. ಬೆಂಗಳೂರಿನ ಆಸ್ಪತ್ರೆ, ಶ್ರೀಕಂಠೀರವ ಸ್ಟೇಡಿಯಂ ಮತ್ತು ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಗೆ ಜನಸಾಗರವೇ ಹರಿದುಬರುತ್ತಿರುವುದರಿಂದ ಹೊಸ ಸಾಂಕ್ರಾಮಿಕ ರೋಗ ಹರಡುವ ಭೀತಿ ಮುಂದುವರಿದಿದೆ. ಇದನ್ನು ಪರಿಗಣಿಸಿ ಮುಂದಿನ ಹದಿನೈದು ದಿನಗಳಲ್ಲಿ ನಗರದ ಎಲ್ಲ ರೋಗ ಲಕ್ಷಣ ಇರುವವರನ್ನು ತಪ್ಪದೇ ಪರೀಕ್ಷೆಗೆ ಒಳಪಡಿಸಬೇಕು" ಎಂದು ಸದಸ್ಯರು ವಿವರಿಸಿದರು.

ಪುನೀತ್ ಅವರ ಅಂತಿಮ ದರ್ಶನವನ್ನು 25 ಲಕ್ಷಕ್ಕೂ ಹೆಚ್ಚು ಮಂದಿ ಪಡೆದಿದ್ದರು. ಇನ್ನೂ ಅದೆಷ್ಟೊ ಲಕ್ಷ ಮಂದಿಗೆ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸಮಾಧಿ ಬಳಿಯಾದರು ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಲು ಕಾದುಕುಳಿತ್ತಿದ್ದರು. ಆದರೆ ಸಮಾಧಿ ಬಳಿ 144 ಸೆಕ್ಷನ್ ಜಾರಿ ಗೊಳಿಸಲಾಗಿತ್ತು. ಇಂದಿನಿಂದ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ.

ಮಾತ್ರವಲ್ಲದೆ ರಾಪಿಡ್ ಆಂಟಿಜೆನ್ ಟೆಸ್ಟಿಂಗ್‌ಗೆ (ಆರ್‌ಎಟಿ) ಒಳಪಡುವಾಗ ಪಾಸಿಟಿವ್ ಅಥವಾ ನೆಗೆಟಿವ್ ಎಂದು ಪರೀಕ್ಷಿಸಿದ ಎಲ್ಲರೂ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಅನುಸರಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. "ಟ್ರೇಸಿಂಗ್, ಟ್ರ್ಯಾಕಿಂಗ್ ಮತ್ತು ಪರೀಕ್ಷೆಯು ವಿಫಲಗೊಳ್ಳದೆ ಮುಂದುವರಿಯಬೇಕು. ಇನ್ಫ್ಲುಯೆನ್ಸ ತರಹದ ಸೋಂಕು (ಐಎಲ್ಐ), ತೀವ್ರವಾದ ಉಸಿರಾಟದ ಸೋಂಕು (ಎಸ್ಎಆರ್‌ಐ) ಮತ್ತು ಇತರ ಉಸಿರಾಟದ ಕಾಯಿಲೆಗಳ ಲಕ್ಷಣಗಳನ್ನು ಹೊಂದಿರುವವರಿಗೆ ವಿಶೇಷ ಗಮನವನ್ನು ತೆಗೆದುಕೊಳ್ಳಬೇಕು"ಎಂದು ಸದಸ್ಯರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ ಮಂಗಳವಾರ 239 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಐದು ಸಾವುಗಳು ಕೂಡ ವರದಿಯಾಗಿವೆ. 376 ಜನರನ್ನು ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಗುಣಮುಖರಾದವರ ಸಂಖ್ಯೆ 29,42,272 ಕ್ಕೆ ತಲುಪಿದೆ. ಜೊತೆಗೆ ರಾಜ್ಯದಲ್ಲಿ 8,370 ಸಕ್ರಿಯ ಪ್ರಕರಣಗಳಿದ್ದು ಒಟ್ಟು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 29,88,760 ಮತ್ತು 38,089 ಆಗಿದೆ.

60,711 ಪರೀಕ್ಷೆಗಳ ವಿರುದ್ಧ ಸಕಾರಾತ್ಮಕತೆಯ ದರವು 0.39 ಪ್ರತಿಶತದಷ್ಟಿದ್ದರೆ, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 2.09 ರಷ್ಟಿದೆ. ಬೆಂಗಳೂರು (ನಗರ ಮತ್ತು ಗ್ರಾಮಾಂತರ) ಹಲವಾರು ತಿಂಗಳ ನಂತರ ಸೋಮವಾರ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಯಾವುದೇ ಸಾವುಗಳನ್ನು ವರದಿ ಮಾಡಿಲ್ಲ. ಆದಾಗ್ಯೂ, ಮಂಗಳವಾರ ರಾಜ್ಯ ರಾಜಧಾನಿಯಲ್ಲಿ ಮೂರು ಸಾವುಗಳು ಕೋವಿಡ್ -19 ಗೆ ಸಂಬಂಧಿಸಿವೆ.

   ಪುನೀತ್ ಗೆ ಅವಮಾನ ಮಾಡಿದವನಿಗೆ ಹಿಗ್ಗಾಮುಗ್ಗ ಜಾಡಿಸಿದ ಸುದೀಪ್ ಮಗಳು | Oneindia Kannada

   ಈ ವರ್ಷದ ಆರಂಭದಲ್ಲಿ ಜನವರಿ 16 ರಂದು ಕರ್ನಾಟಕದಲ್ಲಿ ಸೋಂಕಿನ ವಿರುದ್ಧ ಚುಚ್ಚುಮದ್ದು ಪ್ರಾರಂಭವಾದ ನಂತರ ರಾಜ್ಯದ ಕೇಂದ್ರಗಳಲ್ಲಿ ಮಧ್ಯಾಹ್ನ 3:30 ರವರೆಗೆ 1,75,174 ಡೋಸ್‌ಗಳನ್ನು ನೀಡಲಾಯಿತು ಎಂದು ಬುಲೆಟಿನ್ ಉಲ್ಲೇಖಿಸಿದೆ. ರಾಜ್ಯದಲ್ಲಿ ಒಟ್ಟು 64,418 ಮಂದಿಯ ಕೋವಿಡ್‌ ಆರ್‌ಟಿ-ಪಿಸಿಆರ್‌ ಪರೀಕ್ಷೆಯನ್ನು ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆಯು 5.09 ಕೋಟಿಗೆ ಏರಿಕೆ ಕಂಡಿದೆ.

   English summary
   With huge crowds turning up to pay tributes to late Kannada actor Puneeth Rajkumar in Bengaluru since news about his death spread Friday till his funeral Sunday and the bypolls held in north Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X