ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಶಾಸಕರ ಮೇಲೆ ಕೆ.ಸಿ.ವೇಣುಗೋಪಾಲ್ ಅಸಮಾಧಾನ!

|
Google Oneindia Kannada News

Recommended Video

ಕರ್ನಾಟಕ ಕಾಂಗ್ರೆಸ್ ನ ಶಾಸಕರ ಮೇಲೆ ಅಸಮಾಧಾನಗೊಂಡ ಕೆ ಸಿ ವೇಣುಗೋಪಾಲ್ | Oneindia kannada

ಬೆಂಗಳೂರು, ಮೇ 07 : ಕರ್ನಾಟಕದ ಕಾಂಗ್ರೆಸ್ ಶಾಸಕರ ವಿರುದ್ಧ ಕೆ.ಸಿ.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷ ನೀಡಿದ ಸೂಚನೆ ಪಾಲಿಸದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ಪಕ್ಷದ ಶಾಸಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕರೆ ಮಾಡಿದ್ದಾರೆ.

ಬಿಜೆಪಿಗೆ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ : ದಿನೇಶ್ ಗುಂಡೂರಾವ್ಬಿಜೆಪಿಗೆ ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ : ದಿನೇಶ್ ಗುಂಡೂರಾವ್

ಮೇ 19ರಂದು ನಡೆಯುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ವಿಚಾರದಲ್ಲಿ ಅವರು ಅಸಮಾಧಾನಗೊಂಡಿದ್ದಾರೆ. ಉಪ ಚುನಾವಣೆ ಉಸ್ತುವಾರಿ ವಹಿಸಿದ ಶಾಸಕರು ಪ್ರಚಾರದಲ್ಲಿ ತೊಡಗುತ್ತಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.

ಕುಂದಗೋಳ, ಚಿಂಚೋಳಿ ಚುನಾವಣೆ ಗೆಲ್ಲುತ್ತೇವೆ : ಯಡಿಯೂರಪ್ಪಕುಂದಗೋಳ, ಚಿಂಚೋಳಿ ಚುನಾವಣೆ ಗೆಲ್ಲುತ್ತೇವೆ : ಯಡಿಯೂರಪ್ಪ

ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಕಾಂಗ್ರೆಸ್ ತಂತ್ರ ರೂಪಿಸಿದೆ. ಆದ್ದರಿಂದ, ಸಚಿವರಿಗೆ, ಶಾಸಕರಿ ಎರಡು ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ. ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಲಾಗಿದೆ....

ಕುಂದಗೋಳ ಉಪ ಚುನಾವಣೆ : ಪಕ್ಷಗಳ ಬಲಾಬಲಕುಂದಗೋಳ ಉಪ ಚುನಾವಣೆ : ಪಕ್ಷಗಳ ಬಲಾಬಲ

ನಮಗೆ ಪಟ್ಟಿ ಕಳಿಸಿ ಕೊಡಿ

ನಮಗೆ ಪಟ್ಟಿ ಕಳಿಸಿ ಕೊಡಿ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕರೆ ಮಾಡಿರುವ ಕೆ.ಸಿ.ವೇಣುಗೋಪಾಲ್ ಅವರು, 'ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆ ಪ್ರಚಾರಕ್ಕೆ ಗೈರಾದ ಶಾಸಕರು ಯಾರು? ಎಂಬ ಪಟ್ಟಿಯನ್ನು ಕಳುಹಿಸಿಕೊಡಿ' ಎಂದು ಸೂಚನೆ ನೀಡಿದ್ದಾರೆ.

ಕಾರಣ ಕೇಳಿ ಮಾಹಿತಿ ನೀಡಿ

ಕಾರಣ ಕೇಳಿ ಮಾಹಿತಿ ನೀಡಿ

'ಯಾವ ಸಚಿವರು, ಯಾವ ಶಾಸಕರು ಗೈರಾಗಿದ್ದಾರೆ ಎಂಬುದನ್ನು ತಿಳಿದು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ. ಬಳಿಕ ಈ ಕುರಿತು ಸಮಗ್ರ ಮಾಹಿತಿಯನ್ನು ನಮಗೆ ನೀಡಿ' ಎಂದು ಕೆ.ಸಿ.ವೇಣುಗೋಪಾಲ್ ನಿರ್ದೇಶನ ನೀಡಿದ್ದಾರೆ.

ಕುಂದಗೋಳಕ್ಕೆ ಉಸ್ತುವಾರಿ ಯಾರು?

ಕುಂದಗೋಳಕ್ಕೆ ಉಸ್ತುವಾರಿ ಯಾರು?

ಮೇ 19ರಂದು ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕುಂದಗೋಳ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಅವರು ಸಂಪೂರ್ಣ ಉಸ್ತುವಾರಿಯಾಗಿದ್ದಾರೆ. ವಿನಯ್ ಕುಲಕರ್ಣಿ ಮತ್ತು ಸಂತೋಷ್ ಲಾಡ್ ಅವರು ಸಹ ಉಸ್ತುವಾರಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್, ವಿನಯ್ ಕುಲಕರ್ಣಿ ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಚಿಂಚೋಳಿ ಕ್ಷೇತ್ರ

ಚಿಂಚೋಳಿ ಕ್ಷೇತ್ರ

ಡಾ.ಜಿ.ಪರಮೇಶ್ವರ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್ ಅವರು ಚಿಂಚೋಳಿ ಕ್ಷೇತ್ರದ ಸಂಪೂರ್ಣ ಉಸ್ತುವಾರಿಯಾಗಿದ್ದಾರೆ. ಪ್ರಿಯಾಂಕ್‌ ಖರ್ಗೆ ಮತ್ತು ಅಜಯ್ ಸಿಂಗ್ ಅವರು ಸಹ ಉಸ್ತುವಾರಿಯಾಗಿದ್ದಾರೆ. ಡಾ.ಜಿ.ಪರಮೇಶ್ವರ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ಗೆ ಮುಖ್ಯವಾದ ಚುನಾವಣೆ

ಕಾಂಗ್ರೆಸ್‌ಗೆ ಮುಖ್ಯವಾದ ಚುನಾವಣೆ

ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 2018ರ ಚುನಾವಣೆಯಲ್ಲಿ ಕುಂದಗೋಳದಲ್ಲಿ ಸಿ.ಎಸ್.ಶಿವಳ್ಳಿ, ಚಿಂಚೋಳಿಯಲ್ಲಿ ಡಾ.ಉಮೇಶ್ ಜಾಧವ್ ಗೆಲುವು ಸಾಧಿಸಿದ್ದರು. ಆದ್ದರಿಂದ, ಎರಡೂ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಪಕ್ಷಕ್ಕೆ ಅನಿವಾರ್ಯವಾಗಿದೆ.

English summary
Congress General Secretary and Karnataka party in-charge K.C.Venugopal upset with MLA's for not in active in Kundgol and Chincholi by election campaign. Election will be held on May 19, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X