ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ ನಾಯಕರು!

|
Google Oneindia Kannada News

ಬೆಂಗಳೂರು, ಆಗಸ್ಟ್ 01 : ಕರ್ನಾಟಕದ ಕಾಂಗ್ರೆಸ್ ನಾಯಕರು ಗುರುವಾರ ಮಹತ್ವದ ಸಭೆ ನಡೆಸಿದರು. ಉಪ ಚುನಾವಣೆ, ಶಾಸಕರ ಅನರ್ಹತೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಮೈತ್ರಿ ಸರ್ಕಾರ ಪತನದ ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಮೊದಲ ಸಭೆ ಇದಾಗಿದೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ ಶಿವಕುಮಾರ್, ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಪ್ರತಿಪಕ್ಷದ ನಾಯಕನ ಹುದ್ದೆ: ಸಿದ್ದರಾಮಯ್ಯನ ಮುಂದಿದೆ ಮುಳ್ಳಿನ ಹಾದಿಪ್ರತಿಪಕ್ಷದ ನಾಯಕನ ಹುದ್ದೆ: ಸಿದ್ದರಾಮಯ್ಯನ ಮುಂದಿದೆ ಮುಳ್ಳಿನ ಹಾದಿ

14 ಶಾಸಕರನ್ನು ಅನರ್ಹಗೊಳಿಸಿದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಉಪ ಚುನಾವಣೆ ಎದುರಾದರೆ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಹಿರಿಯ ನಾಯಕರು ಚರ್ಚೆ ನಡೆಸಿದರು. ರಾಜ್ಯದ ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಯಿತು.

ಕರ್ನಾಟಕ ಕಾಂಗ್ರೆಸ್‌ನ 14 ಮಾಜಿ ಶಾಸಕರು ಉಚ್ಛಾಟನೆಕರ್ನಾಟಕ ಕಾಂಗ್ರೆಸ್‌ನ 14 ಮಾಜಿ ಶಾಸಕರು ಉಚ್ಛಾಟನೆ

17 ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದು ಖಚಿತವಾಗಿದ್ದು, ಹಿರಿಯ ನಾಯಕರಿಗೆ ಚುನಾವಣೆಯ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.

ಕೆಪಿಸಿಸಿ ಪುನಾರಚನೆ : ಪದಾಧಿಕಾರಿಗಳ ನೇಮಕ 75ಕ್ಕೆ ಸೀಮಿತಕೆಪಿಸಿಸಿ ಪುನಾರಚನೆ : ಪದಾಧಿಕಾರಿಗಳ ನೇಮಕ 75ಕ್ಕೆ ಸೀಮಿತ

ಪಕ್ಷಕ್ಕೆ ದ್ರೋಹ ಬಗೆದವರು

ಪಕ್ಷಕ್ಕೆ ದ್ರೋಹ ಬಗೆದವರು

ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, "ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಅತೃಪ್ತ ಶಾಸಕರ ವಿರುದ್ಧ ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ನಮ್ಮ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯದ ಕ್ರಮ ಆಗಬೇಕು" ಎಂದು ಹೇಳಿದರು.

ಕಾರ್ಯಕರ್ತರು ಹೋಗಬಾರದು

ಕಾರ್ಯಕರ್ತರು ಹೋಗಬಾರದು

"ಅತೃಪ್ತ ಅನರ್ಹ ಶಾಸಕರನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಅವರ ಜತೆ ಹೋಗಬಾರದು. ಆ ಕ್ಷೇತ್ರದ ಬ್ಲಾಕ್ ಸಮಿತಿಯನ್ನು ವಿಸರ್ಜನೆ ಮಾಡಿದ್ದೇವೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕುದುರೆ ವ್ಯಾಪಾರ ಮಾಡಿದೆ

ಕುದುರೆ ವ್ಯಾಪಾರ ಮಾಡಿದೆ

"ಲಿಂಗಾಯತ ಸಮುದಾಯದ ಮುಖಂಡರು ಸಿಎಂ ಭೇಟಿ ಮಾಡಿದಾಗ.
15 ಶಾಸಕರಿಗೆ ವಿಷ ಕೊಡಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ. ಅವರ ಮಾತಿನಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕುದುರೆ ವ್ಯಾಪಾರ ಮಾಡಿರುವುದು ಅವರ ಬಾಯಿಂದ ಬಂದಿದೆ" ಎಂದು ಹೇಳಿದರು.

ಸಮಿತಿ ರಚನೆ ಮಾಡಲಾಗಿದೆ

ಸಮಿತಿ ರಚನೆ ಮಾಡಲಾಗಿದೆ

"ಉಪ ಚುನಾವಣೆ 17 ಕ್ಷೇತ್ರಗಳಲ್ಲಿ ನಿಶ್ಚಿತ. ಹಿರಿಯ ನಾಯಕರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ಪಕ್ಷಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ಕೊಡಲಾಗುತ್ತದೆ" ಎಂದು ಹೇಳಿದರು.

English summary
Karnataka Congress leaders crucial meeting at KPCC office. Meeting lead by KPCC president Dinesh Gundu Rao and Former CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X