ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ 2018 ಮತದಾನ ಅಂತ್ಯ: ಇಲ್ಲಿದೆ ಹೈಲೈಟ್ಸ್‌

|
Google Oneindia Kannada News

ಬೆಂಗಳೂರು, ನವೆಂಬರ್ 03: ಪಂಚ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗಿ ಅಂತ್ಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ದೀಪಾವಳಿ ವಿಶೇಷ ಪುರವಣಿ

ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ಹಾಗೂ ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯಿತು. ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಮತ್ತು ಬಿಜೆಪಿ ನಡುವೆ ಏರ್ಪಟ್ಟಿದ್ದ ಚುನಾವಣೆ ಇದು.

ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಗಿದಿದೆ, ಎಲ್ಲಿಯೂ ಗಲಾಟೆ ಆದ ವರದಿ ಆಗಿಲ್ಲ. ಮತಯಂತ್ರ ಕೈಕೊಟ್ಟ ಪ್ರಸಂಗ ಸಹ ವರದಿ ಆಗದೇ ಇರುವುದು ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗ ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ತೋರುತ್ತದೆ.

ಶೇಕಡಾವಾರು ಮತದಾನವನ್ನು ಗಮನಿಸಿದಲ್ಲಿ ಜಮಖಂಡಿಯಲ್ಲಿ ವಿಧಾನಸಭೆ ಉಪಚುನಾವಣೆಗೆ ಬಿರುಸಿನಿಂದ ಮತದಾನ ನಡೆದಿದೆ. ಮಂಡ್ಯದ ಲೋಕಸಭಾ ಉಪಚುನಾವಣೆಗೆ ನೀರಸವಾಗಿ ಮತದಾನ ನಡೆದಿದ್ದು ಅಲ್ಲಿ ಶೇ 50 ಸಹ ಮತದಾನ ಆಗಿಲ್ಲ.

ಕರ್ನಾಟಕ ಉಪಚುನಾವಣೆ LIVE : ಜಮಖಂಡಿಯಲ್ಲಿ ಹುರುಪು, ಮಂಡ್ಯದಲ್ಲಿ ನಿದ್ದೆ ಕರ್ನಾಟಕ ಉಪಚುನಾವಣೆ LIVE : ಜಮಖಂಡಿಯಲ್ಲಿ ಹುರುಪು, ಮಂಡ್ಯದಲ್ಲಿ ನಿದ್ದೆ

ಬಳ್ಳಾರಿಯ ಹಗರಿನಡೋಣಿ ಹಳ್ಳಿಯ ಜನ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅವರುಗಳ ಮನವೊಲಿಕೆ ನಂತರ ಮಧ್ಯಾಹ್ನದ ನಂತರ ಅಲ್ಲಿ ಚುನಾವಣೆ ನಡೆದಿದೆ.

ಮತಗಟ್ಟೆಗೆ ಹಾವು

ಮತಗಟ್ಟೆಗೆ ಹಾವು

ರಾಮನಗರದಲ್ಲಿ ಮತಗಟ್ಟೆಯೊಂದಕ್ಕೆ ಹಾವೊಂದು ಏಕಾ-ಏಕಿ ಪ್ರವೇಶಿಸಿ ಆತಂಕ ಸೃಷ್ಠಿಸಿತು. ಬಿಟ್ಟಂತೆ ಬಳ್ಳಾರಿಯಲ್ಲಿ ಚುನಾವಣಾ ಕರ್ತವ್ಯಕ್ಕೆಂದು ಬಂದಿದ್ದ ಅಧಿಕಾರಿ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ತೆರಳಿ ಅಲ್ಲಿ ಪ್ರಾಣ ಬಿಟ್ಟಿರುವ ಘಟನೆ ಸಹ ನಡೆಯಿತು.

ರಾಮನಗರ ರಾಜಕೀಯ ಬೆಳವಣಿಗೆ ಬಗ್ಗೆ ಅಂಬಿ ಸರಿಯಾಗಿ ಹೇಳಿದ್ದಾರೆ ರಾಮನಗರ ರಾಜಕೀಯ ಬೆಳವಣಿಗೆ ಬಗ್ಗೆ ಅಂಬಿ ಸರಿಯಾಗಿ ಹೇಳಿದ್ದಾರೆ

ಮತಚಲಾಯಿಸಿದ ಗಣ್ಯರು

ಮತಚಲಾಯಿಸಿದ ಗಣ್ಯರು

ಚುನಾವಣೆಯಲ್ಲಿ ಅಂಬರೀಶ್‌, ಶ್ರೀರಾಮುಲು, ಯಡಿಯೂರಪ್ಪ ಕುಟುಂಬ, ಈಶ್ವರಪ್ಪ ಮತ್ತು ಕುಟುಂಬ, ಶಾಮನೂರು ಶೀವಶಂಕರಪ್ಪ ಮತ್ತು ಕುಟುಂಬ, ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ ಸೇರಿ ಇನ್ನೂ ಹಲವು ಪ್ರಮುಖ ರಾಜಕಾರಣಿಗಳು ತಮ್ಮಿಷ್ಟದ ಪಕ್ಷಕ್ಕೆ ಮತಚಲಾಯಿಸಿದರು.

ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ

ಖಾಸಗಿ ವಾಹನದಲ್ಲಿ ಇವಿಎಂ

ಖಾಸಗಿ ವಾಹನದಲ್ಲಿ ಇವಿಎಂ

ಜಮಖಂಡಿ ಕ್ಷೇತ್ರದ ಚುನಾವಣೆಗೆ ಇವಿಎಂ ಯಂತ್ರಗಳನ್ನು ಎಂಬಿ ಪಾಟೀಲ್ ಅವರಿಗೆ ಸೇರಿದ ಖಾಸಗಿ ವಾಹನದಲ್ಲಿ ತರಲಾಗಿದೆ ಎಂಬ ಆರೋಪ ಕೇಳಿಬಂದಿತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಬಿಜೆಪಿ ಹೇಳಿದೆ.

ರಾಮನಗರದಲ್ಲಿ ಬಿಜೆಪಿಗೆ ಬೇಸರ

ರಾಮನಗರದಲ್ಲಿ ಬಿಜೆಪಿಗೆ ಬೇಸರ

ರಾಮನಗರದ ಬಿಜೆಪಿಗೆ ಈ ಉಪಚುನಾವಣೆ ಬಹು ಬೇಸರ ತರಿಸಿದ ಚುನಾವಣೆ. ತಮ್ಮ ಅಭ್ಯರ್ಥಿಯೇ ಕೈಕೊಟ್ಟ ನಂತರ ಪಕ್ಷಕ್ಕಾಗಿ ಪ್ರಚಾರ ಮಾಡಿದ್ದರು. ಆದರೆ ಇಂದು ಮತ್ತೆ ಏಟು ಕೊಟ್ಟ ಬಿಜೆಪಿ ಪಲಾಯನ ಅಭ್ಯರ್ಥಿ ಬಿಜೆಪಿಯ ಬೂತ್‌ ಏಜೆಂಟ್‌ಗಳ ಮಾನ್ಯತೆ ರದ್ದು ಮಾಡಿದರು. ಬಿಜೆಪಿ ಏಜೆಂಟ್ ಸಹ ಇಲ್ಲದೆ ರಾಮನಗರದಲ್ಲಿ ಚುನಾವಣೆ ನಡೆದಿದೆ.

English summary
By election for 5 constituency voting ends today. it is a peaceful voting, Mandya gets least voting and Jamkhandi sees highest voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X