ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಫಲಿತಾಂಶ: ಎಲ್ಲೆಲ್ಲಿ, ಯಾರ್ಯಾರ ಮೇಲೆ, ಎಷ್ಟೆಷ್ಟು ಬೆಟ್ಟಿಂಗ್‌?

|
Google Oneindia Kannada News

Recommended Video

Karnataka By-elections 2018 Results : ಉಪಚುನಾವಣಾ ಫಲಿತಾಂಶ | ಈ 5 ಕ್ಷೇತ್ರಗಳಲ್ಲಿ ಜೋರಾಯ್ತು ಬೆಟ್ಟಿಂಗ್

ಬೆಂಗಳೂರು, ನವೆಂಬರ್ 05: ಉಪಚುನಾವಣೆ ಫಲಿತಾಂಶ ಇನ್ನು ಕೆಲವೇ ಗಂಟೆಗಳ ದೂರದಲ್ಲಿದ್ದಾಗ ಫಲಿತಾಂಶದ ಮೇಲೆ ಬೆಟ್ಟಿಂಗ್‌ ಭಾರಿ ಜೋರಾಗಿ ನಡೆಯುತ್ತಿದೆ.

ದೀಪಾವಳಿ ವಿಶೇಷ ಪುರವಣಿ

ನವೆಂಬರ್ 3ಕ್ಕೆ ನಡೆದಿದ್ದ ಐದು ಕ್ಷೆತ್ರಗಳು ಉಪಚುನಾವಣೆಯ ಫಲಿತಾಂಶ ನಾಳೆ (ನವೆಂಬರ್ 6)ಕ್ಕೆ ಬರಲಿದೆ. ಚುನಾವಣೆ ನಡೆದ ಐದು ಕ್ಷೇತ್ರಗಲ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.

ಚುನಾವಣೆ ಸಮಯ ಹೀಗೆ ಬೆಟ್ಟಿಂಗ್ ಆಡುವುದು ಸಾಮಾನ್ಯದಂತಾಗಿಬಿಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುರಿ, ಕೋಳಿ, ಹೊಲ, ಟ್ರಾಕ್ಟರ್‌ ಹೀಗೆ ಇನ್ನೂ ಏನೇನನ್ನೋ ಅಭ್ಯರ್ಥಿಗಳ ಮೇಲೆ ಬಾಜಿ ಕಟ್ಟಿದ್ದರು.

ಉಪ ಚುನಾವಣೆ ಗುಪ್ತಚರ ವರದಿ : ಬಳ್ಳಾರಿಯಲ್ಲಿ ಬಿಜೆಪಿಗೆ ಸೋಲು!ಉಪ ಚುನಾವಣೆ ಗುಪ್ತಚರ ವರದಿ : ಬಳ್ಳಾರಿಯಲ್ಲಿ ಬಿಜೆಪಿಗೆ ಸೋಲು!

ಉಪಚುನಾವಣೆಯಲ್ಲೂ ಸಹ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲೂ ಇಂತಹಾ ಪಕ್ಷ ಗೆಲ್ಲುತ್ತದೆ, ಇಷ್ಟು ಲೀಡ್ ಪಡೆಯುತ್ತದೆ, ಇಂತವರು ಮೊದಲ ಮೂರು ಸ್ಥಾನ ಗಳಿಸುತ್ತಾರೆ ಎಂಬಿತ್ಯಾದಿ ಬೆಟ್ಟಿಂಗ್ ನಡೆಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿಯೇ ಫೇವರೆಟ್‌

ಶಿವಮೊಗ್ಗದಲ್ಲಿ ಬಿಜೆಪಿಯೇ ಫೇವರೆಟ್‌

ಶಿವಮೊಗ್ಗದಲ್ಲಿ ಬಿಜೆಪಿಯೇ ಗೆಲ್ಲುವ ಫೇವರೆಟ್‌ ಎನ್ನಲಾಗುತ್ತಿದೆ. ಅದರಂತೆ ಬಿಜೆಪಿ ಪರವಾಗಿ ಬೆಟ್ಟಿಂಗ್ ಕಟ್ಟುವರ ಸಂಖ್ಯೆ ಹೆಚ್ಚಿದೆ. ಆದರೆ ಬಿಜೆಪಿ ಪರ ಬೆಟ್ಟಿಂಗ್‌ ಕಟ್ಟುವರು ಒಂದಕ್ಕೆ ಎರಡರಷ್ಟು ಬಾಜಿಗಿಡಬೇಕು. ಬಿಜೆಪಿ ಗೆದ್ದರೆ ಜೆಡಿಎಸ್‌ ನವರು 1000 ಕೊಡುತ್ತಾರೆ, ಆದರೆ ಜೆಡಿಎಸ್‌ ಗೆದ್ದರೆ ಬಿಜೆಪಿಯವರು 2000 ಕೊಡಬೇಕು 1:2 ಅನುಪಾತದಲ್ಲಿ ಶಿವಮೊಗ್ಗದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ.

5 ಕ್ಷೇತ್ರಗಳ ಉಪ ಚುನಾವಣೆ : ಶೇ 65.57 ರಷ್ಟು ಮತದಾನ 5 ಕ್ಷೇತ್ರಗಳ ಉಪ ಚುನಾವಣೆ : ಶೇ 65.57 ರಷ್ಟು ಮತದಾನ

ಜಮಖಂಡಿಯಲ್ಲಿ ಸಮಬಲದ ಹೋರಾಟ

ಜಮಖಂಡಿಯಲ್ಲಿ ಸಮಬಲದ ಹೋರಾಟ

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದ ಜಮಖಂಡಿಯಲ್ಲಿ ಬೆಟ್ಟಿಂಗ್ ಜೋರಾಗಿ ನಡೆದಿದೆ. ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಮತ್ತು ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರುಗಳಿಬ್ಬರೂ ಸಮಬಲದ ಪ್ರತಿಸ್ಪರ್ಧಿಗಳಾದ ಕಾರಣ ಬೆಟ್ಟಿಂಗ್ ಸಹ ಸಮಬಲದಲ್ಲಿ ನಡೆಯುತ್ತಿದೆ.

ಎಕ್ಸಿಟ್ ಪೋಲ್‌: ಉಪಚುನಾವಣೆಯಲ್ಲಿ ಮೈತ್ರಿಯೇ ಬಾಸ್‌, ಬಿಜೆಪಿಗೆ ಹಿನ್ನಡೆ ಎಕ್ಸಿಟ್ ಪೋಲ್‌: ಉಪಚುನಾವಣೆಯಲ್ಲಿ ಮೈತ್ರಿಯೇ ಬಾಸ್‌, ಬಿಜೆಪಿಗೆ ಹಿನ್ನಡೆ

ಮಂಡ್ಯದಲ್ಲಿ ಜೆಡಿಎಸ್‌ ಕಡೆ ಒಲವು

ಮಂಡ್ಯದಲ್ಲಿ ಜೆಡಿಎಸ್‌ ಕಡೆ ಒಲವು

ಮಂಡ್ಯದಲ್ಲಿ ಸಹ ಬೆಟ್ಟಿಂಗ್ ಜೋರಾಗಿ ನಡೆದಿದೆ. ಬಿಜೆಪಿ-ಜೆಡಿಎಸ್‌ (ಮೈತ್ರಿ) ಅಭ್ಯರ್ಥಿ ನಡುವೆ ಸಮಬಲದ ಹೋರಾಟವೇ ನಡೆದಿದೆ ಎನ್ನಲಾಗಿತ್ತು ಆದರೆ ಮತದಾನ ಅಂತ್ಯವಾಗುವ ವೇಳೆಗೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರ ಕೈ ಮೇಲಾಗುವ ಲಕ್ಷಣಗಳಿವೆ ಎಂಬ ಸುದ್ದಿ ಹರಡಿತು ಹಾಗಾಗಿ ಇಲ್ಲಿ ಜೆಡಿಎಸ್‌ ಪರ ಬೆಟ್ಟಿಂಗ್ ಕಟ್ಟುವರ ಸಂಖ್ಯೆ ಹೆಚ್ಚಿದೆ. ಬಿಜೆಪಿಗೂ ಗೆಲ್ಲುವ ಸಮಾನ ಅವಕಾಶ ಇರುವ ಕಾರಣ ಇಲ್ಲಿ ಸಹ ಬೆಟ್ಟಿಂಗ್ ಜೋರಿದೆ.

ಉಪಚುನಾವಣೆ 2018 ಮತದಾನ ಅಂತ್ಯ: ಇಲ್ಲಿದೆ ಹೈಲೈಟ್ಸ್‌ ಉಪಚುನಾವಣೆ 2018 ಮತದಾನ ಅಂತ್ಯ: ಇಲ್ಲಿದೆ ಹೈಲೈಟ್ಸ್‌

ಬಳ್ಳಾರಿಯಲ್ಲಿ ಜೋರಿದೆ ಬೆಟ್ಟಿಂಗ್ ಹವಾ

ಬಳ್ಳಾರಿಯಲ್ಲಿ ಜೋರಿದೆ ಬೆಟ್ಟಿಂಗ್ ಹವಾ

ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಇದೆ. ಅಲ್ಲಿ ಯಾರಿಗೆ ಜಯ ಎಂದು ನಿರ್ಣಯಿಸುವುದು ಬಹು ಕಷ್ಟ ಹಾಗಾಗಿ ಅಲ್ಲಿ 1:1 ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿರುವುದು ಬಳ್ಳಾರಿಯಲ್ಲೇ ಎನ್ನಲಾಗಿದೆ. ಬಿಜೆಪಿಯ ಶ್ರೀರಾಮುಲು ಮತ್ತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮಧ್ಯೆ ನಡೆಯುತ್ತಿರುವ ರಾಜಕೀಯ ಇದು ಎನ್ನಲಾಗುತ್ತಿದೆ.

ರಾಮನಗರದಲ್ಲಿ ಫುಲ್‌ ಡಲ್ಲು

ರಾಮನಗರದಲ್ಲಿ ಫುಲ್‌ ಡಲ್ಲು

ರಾಮನಗರ ಚುನಾವಣಾ ಕಣ ಏಕಮುಖಿ ಆಗಿಬಿಟ್ಟ ಕಾರಣ ಇಲ್ಲಿ ಬೆಟ್ಟಿಂಗ್ ನಡೆಯುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಪಕ್ಷವನ್ನೇ ತ್ಯಜಿಸಿದ ಕಾರಣ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರು ಏಕಾಂಗಿ ಅಭ್ಯರ್ಥಿ ಆಗಿದ್ದಾರೆ ಅವರ ಗೆಲುವು ಬಹುತೇಕ ನಿಶ್ಚಿತವೇ ಹಾಗಾಗಿ ಇಲ್ಲಿ ಬೆಟ್ಟಿಂಗ್‌ ನಡೆಯುತ್ತಲೇ ಇಲ್ಲವೆಂದೇ ಹೇಳಬಹುದು.

English summary
By election 2018 result will be out tomorrow. people betting on them favorite parties. Heavy betting going on in Ballari and Shimoga constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X