ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೀಸೆಲ್ ಬೆಲೆ ಏರಿಕೆ: ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಾ?

By Nayana
|
Google Oneindia Kannada News

ಬೆಂಗಳೂರು, ಮೇ 28: ಪ್ರತಿನಿತ್ಯ ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯಾಗುತ್ತಿದೆ. ಇದರಿಂದ ಸಾರಿಗೆ ನಿಮಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಇದನ್ನು ಸರಿದೂಗಿಸಲು ಬಸ್ ಟಿಕೆಟ್ ದರವನ್ನು ಶೇ.8ರಿಂದ 10 ರಷ್ಟು ಹೆಚ್ಚಿಸಲು ಚಿಂತನೆ ನಡೆದಿದೆ.

ಕೆಲ ದಿನಗಳಿಂದ ಡೀಸೆಲ್ ದರ ಗಗನಕ್ಕೇರುತ್ತಿದೆ. ಏಪ್ರಿಲ್ ಮಧ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 61.02 ರೂ. ಇತ್ತು. ಮೇ 27ರಂದು ಪ್ರತಿ ಲೀಟರ್‌ ಡೀಸೆಲ್‌ ದರ 70.25 ರೂ.ಗೆ ಏರಿಕೆಯಾಗಿದೆ. ದಿನಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಬಳಸುವ ಸಾರಿಗೆ ನಿಗಮಗಳು ಇದೀಗ ಡೀಸೆಲ್‌ಗೆ ಹೆಚ್ಚುವರಿ ಹಣ ಪಾವತಿಸುತ್ತಿವೆ.

ಡೀಸೆಲ್ ಬೆಲೆ ಏರಿಕೆ, ಕೆಎಸ್ಆರ್‌ಟಿಸಿ ಪ್ರಯಾಣ ದರ ಏರಿಕೆ? ಡೀಸೆಲ್ ಬೆಲೆ ಏರಿಕೆ, ಕೆಎಸ್ಆರ್‌ಟಿಸಿ ಪ್ರಯಾಣ ದರ ಏರಿಕೆ?

ಈಗಾಗಲೇ ನಷ್ಟದಲ್ಲಿರುವ ನಿಗಮಗಳಿಗೆ ಈ ಡೀಸೆಲ್ ದರ ಏರಿಕೆ ಭಾರಿ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿರುವುದರಿಂದ ನಾಲ್ಕು ನಿಗಮಗಳು ಚರ್ಚಿಸಿದ್ದು, ಪ್ರಸ್ತಾವನೆ ಸಿದ್ಧಪಡಿಸುತ್ತಿವೆ. ಟಿಕೆಟ್ ದರ ಶೇ. 8ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Bus fare in state may hike by 10percent soon

ಅಂದರೆ 100ಕ್ಕೆ 8 ರೂ.ನಿಂದ 10 ರೂ ಹೆಚ್ಚಳವಾಗಬಹುದು. ಹೊಸ ಸಾರಿಗೆ ಸಚಿವರು ಬಂದ ಬಳಿಕ ಅವರೊಂದಿಗೆ ಚರ್ಚಿಸಿ, ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿರುವ ಬಗ್ಗೆ ಕೆಎಸ್‌ಆರ್ಟಿಸಿ ಮೂಲಗಳಿಂದ ತಿಳಿದುಬಂದಿದೆ.

ತೈಲ ಕಂಪನಿಗಳು ಸಗಟು ಡೀಸೆಲ್ ದರವನ್ನೂ ಏರಿಸಿದೆ. ಇದರಿಂದ ನಿಗಮಗಳಿಗೆ ಪ್ರತಿನಿತ್ಯ 30.97 ಲಕ್ಷ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಒಟ್ಟಾರೆ ತಿಂಗಳಿಗೆ 9.29 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗುತ್ತಿದೆ. ದರ ಏರಿಕೆ ಮಾಡದಿದ್ದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
State owned road transport corporations ha e thinking of increase bus fare as fuel price drastically increased in the last two weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X