ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ನಿರ್ವಾಹಕ, ಚಾಲಕನಿಂದ ಮಾಸ್ಕ್‌ ವಿತರಿಸಿ ಕೊರೊನಾ ಜಾಗೃತಿ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 14: ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಎಲ್ಲೆಡೆ ಜಾಗೃತಿ ಮೂಡಿಸುವ ಪ್ರಯತ್ನ ಸಾಗುತ್ತಿದೆ. ಭಾರತದಲ್ಲೂ ಕೊರೊನಾ ಆತಂಕ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಜರುಗಿಸುತ್ತಿದ್ದಾರೆ.

ಇದೀಗ, ಬಸ್‌ ಕಂಡಕ್ಟರ್ ಮತ್ತು ಡ್ರೈವರ್ ತಮ್ಮ ಪ್ರಯಾಣಿಕರಿಗೆ ಮಾಸ್ಕ್‌ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದ ಮತ್ತೆ 7 ಭಾರತೀಯರುಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದ ಮತ್ತೆ 7 ಭಾರತೀಯರು

ಯರಗುಪ್ಪಿಯಿಂದ ಹುಬ್ಬಳಿಗೆ ಸಾಗುತ್ತಿದ್ದ ಬಸ್‌ನ ನಿರ್ವಾಹಕ ಎಂಎಲ್ ನಡಾಫ್ ಮತ್ತು ಚಾಲಕ ಎಚ್‌ಟಿ ಮಾಯಣ್ಣನವರ್ ತಮ್ಮ ಸ್ವಂತ ಹಣದಲ್ಲಿ ಮಾಸ್ಕ್‌ ಖರೀದಿಸಿ ಪ್ರಯಾಣಿಕರಿಗೆ ವಿತರಿಸಿದ್ದಾರೆ.

Bus Conductor And Driver Distributed Masks To Passengers

ಈ ಕುರಿತು ಮಾತನಾಡಿರುವ ಬಸ್‌ ನಿರ್ವಾಹಕ ಎಂಎಲ್ ನಡಾಫ್ ''ಕೊರೊನಾ ವೈರಸ್ ಕಾರಣದಿಂದಾಗಿ ಪ್ರಯಾಣಿಕರು ಭಯ ಪಟ್ಟು ಪ್ರಯಾಣ ಮಾಡುತ್ತಿಲ್ಲ. ಹಾಗಾಗಿ, ನಾವು ಈ ಜಾಗೃತಿ ಮೂಡಿಸುತ್ತಿದ್ದೇವೆ. ಜನರಿಗೆ ಉಚಿತ ಮುಖವಾಡಗಳನ್ನು ವಿತರಿಸಲು ನಾನು ಸರ್ಕಾರವನ್ನು ವಿನಂತಿಸುತ್ತೇನೆ'' ಎಂದಿದ್ದಾರೆ.

ಕೊರೊನಾ ಭೀತಿಯಿಂದ ರಾಜ್ಯದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಹುತೇಕ ಐಟಿ ಕಂಪನಿಗಳು ಉದ್ಯೋಗಿಗಳಿಗೆ 'ವರ್ಕ್ ಫ್ರಮ್ ಹೋಮ್' ಮಾಡುವಂತೆ ಸೂಚಿಸಿದೆ. ಮೆಟ್ರೋ, ಬಸ್, ಆಟೋಗಳಲ್ಲಿ ಪ್ರಯಾಣಿಕರು ಕಡಿಮೆಯಾಗಿದ್ದಾರೆ.

English summary
Conductor ML Nadaf driver HT Mayannavar bought, distributed masks among passengers travelling in their bus from Yaraguppi to Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X