ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಚಿವ ಕೆ.ಜೆ.ಜಾರ್ಜ್‌ಗೆ ಬುಲೆಟ್‌ ಪ್ರೂಫ್ ಕಾರು

|
Google Oneindia Kannada News

ಬೆಂಗಳೂರು, ನ.9 : ಎಲ್ಲವೂ ಅಂದುಕೊಂಡಂತೆ ಆದರೆ ಕರ್ನಾಟಕದ ಗೃಹ ಸಚಿವ ಕೆ.ಜೆ.ಜಾರ್ಜ್ ಇನ್ನುಮುಂದೆ ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲಿದ್ದಾರೆ. ಗೃಹಸಚಿವರಿಗೆ 45 ಲಕ್ಷ ರೂ. ಮೌಲ್ಯದ ಬುಲೆಟ್ ಪ್ರೂಫ್ ಕಾರು ಖರೀದಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಗೃಹ ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದು, ಗೃಹ ಸಚಿವರ ಭದ್ರತೆ ದೃಷ್ಟಿಯಿಂದ ಗುಂಡು ನಿರೋಧಕ ಸಾಮರ್ಥ್ಯವುಳ್ಳ ಟೊಯೋಟಾ ಫಾರ್ಚೂನರ್ ಕಾರನ್ನು ಖರೀದಿಸಲು ಅನುಮೋದನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಗೃಹ ಮತ್ತು ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ಬಳಿಕ ಕಾರು ಖರೀದಿ ಮಾಡಬಹುದಾಗಿದೆ. [ಕೆಜೆ ಜಾರ್ಜ್ ಕಾಡಿದ 7 ವಿವಾದಗಳು]

KJ George

ಕೆ.ಜೆ.ಜಾರ್ಜ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಜಿಲ್ಲಾ ಪ್ರಗತಿ ಪರಿಶೀಲನೆ ಮತ್ತಿತರ ಕಾರ್ಯನಿಮಿತ್ತ ಅವರು ಕೊಡಗು ಜಿಲ್ಲೆ ಸೇರಿದಂತೆ, ನಕ್ಸಲ್ ಪೀಡಿತ ಪ್ರದೇಶದಲ್ಲೂ ಸಂಚಾರ ನಡೆಸುತ್ತಾರೆ. ಆದ್ದರಿಂದ ಅವರ ಭದ್ರತಾ ದೃಷ್ಟಿಯಿಂದ ಕಾರು ಖರೀದಿ ಮಾಡಲು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

45 ಲಕ್ಷ ಕಾರಿನ ಬೆಲೆ : ಟೊಯೋಟಾ ಫಾರ್ಚೂನರ್ ಸಾಮಾನ್ಯ ಕಾರಿನ ಬೆಲೆ 22.25 ಲಕ್ಷ ರೂ. ಗಳಿಂದ ಆರಂಭವಾಗಿ 24.28 ಲಕ್ಷ ರೂ. ವರೆಗೆ ಇದೆ. ಗುಂಡು ನಿರೋಧಕ ಸಾಮರ್ಥ್ಯವನ್ನು ಅಳವಡಿಸಿದರೆ ಕಾರಿನ ಬೆಲೆ ಸುಮಾರು 45 ಲಕ್ಷ ರೂ.ಗಳಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದಲ್ಲಿ ಯಾರೊಬ್ಬರೂ ಬುಲೆಟ್‌ಪ್ರೂಫ್ ಕಾರುಗಳನ್ನು ಬಳಸುತ್ತಿಲ್ಲ. ಆದರೆ, ಗೃಹ ಸಚಿವರಿಗೆ ಬುಲೆಟ್‌ಪ್ರೂಫ್ ಖರೀದಿ ಮಾಡಲು ಹೊರಟಿರುವುದು ಏಕೆ? ಎಂಬ ಪ್ರಶ್ನೆ ಎದ್ದಿದೆ. ಗೃಹ ಇಲಾಖೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ ಬಳಿಕ, ಖರೀದಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಲಿದೆ.

2 ಕಾರುಗಳಿವೆ : ಸದ್ಯ ರಾಜ್ಯ ಸರ್ಕಾರದ ಬಳಿ ಎರಡು ಅಂಬಾಸಿಡರ್ ಬುಲೆಟ್ ಪ್ರೂಫ್ ಕಾರುಗಳಿವೆ. ವಿದೇಶಿ ವಿಐಪಿಗಳು ಆಗಮಿಸಿದಾಗ ಅದನ್ನು ಬಳಸಲಾಗುತ್ತಿದೆ. ವಿದೇಶಿಯ ಅತಿ ಗಣ್ಯವ್ಯಕ್ತಿಗಳು ಆಗಮಿಸಿದಾಗ ಓಡಾಡಲು ಒಂದು ಕೋಟಿ ರೂ. ಬೆಲೆಯ ಕಾರು ಖರೀದಿಸಲಾಗಿದ್ದು, ಅದು ರಾಜಭವನದಲ್ಲಿದೆ.

English summary
Karnataka police department has sent a proposal to buy bullet-proof car for Home Minister K.J George. Police wants to buy car for the security of Home Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X