ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್‌ನಿಂದ ತೆರಿಗೆ ಹೊರೆ ಇಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 8: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಸತತವಾಗಿ ಕಳೆದ 8 ದಿನಗಳಿಂದ ಇಂಧನ ದರ ಪರಿಷ್ಕರಿಸಿಲ್ಲ. ಆದರೆ, ತೈಲ ಬೆಲೆ ತೀವ್ರವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಂದ ವ್ಯಾಟ್, ಸೆಸ್ ಇಳಿಕೆ ಮಾಡುವ ನಿರೀಕ್ಷೆ ಹುಟ್ಟುಕೊಂಡಿತ್ತು. ಆದರೆ ಕರ್ನಾಟಕ ಬಜೆಟ್ ನಲ್ಲಿಂದು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಬಿ.ಎಸ್ ಯಡಿಯೂರಪ್ಪ ಅವರು ಈ ಬಗ್ಗೆ ಬಜೆಟ್ ಭಾಷಣದಲ್ಲಿ ಸ್ಪಷ್ಟಪಡಿಸಿದ್ದು, ಪೆಟ್ರೋಲ್, ಡೀಸೆಲ್ ಮೇಲೆ ಕರ್ನಾಟಕ ಮಾರಾಟ ತೆರಿಗೆ ( KST) ವಿಧಿಸಲಾಗುತ್ತಿದ್ದು, ಇದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಅತ್ಯಂತ ಕಡಿಮೆ ದರದಲ್ಲಿದೆ ಎಂದರು.

ಏಪ್ರಿಲ್ 5ರಿಂದ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರಏಪ್ರಿಲ್ 5ರಿಂದ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕಲು ಸರ್ಕಾರ ಮುಂದಾಗಿಲ್ಲ. 2021-22ನೇ ಸಾಲಿನಲ್ಲೂ ಇಂಧನದ ಮೇಲೆ ವಿಧಿಸಿರುವ KST ಅದೇ ದರದಲ್ಲಿ ಮುಂದುವರೆಸಲಾಗುತ್ತದೆ, ಸೆಸ್,ವ್ಯಾಟ್ ದರದಲ್ಲಿ ಬದಲಾವಣೆಯಿಲ್ಲ ಎಂದು ಘೋಷಿಸಿದರು.

Live Updates; ಬಜೆಟ್ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪLive Updates; ಬಜೆಟ್ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 94.22ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 86.37 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಸುಮಾರು 14 ಬಾರಿ ಇಂಧನ ದರ ಪರಿಷ್ಕರಣೆ

ಸುಮಾರು 14 ಬಾರಿ ಇಂಧನ ದರ ಪರಿಷ್ಕರಣೆ

ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದ್ದರೂ ಭಾರತದಲ್ಲಿ ತೈಲ ಬೆಲೆ ಸ್ಥಿರತೆ ಕಂಡುಕೊಂಡಿದೆ. ಕಳೆದ ಕೆಲವು ದಿನಗಳಲ್ಲಿ ಸರಿ ಸುಮಾರು 23-25 ಪೈಸೆಯಂತೆ ಪೆಟ್ರೋಲ್ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 24-26 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿತ್ತು. ಒಟ್ಟಾರೆ ಫೆಬ್ರವರಿ 9ರಿಂದ ಸುಮಾರು 14 ಬಾರಿ ಇಂಧನ ದರ ಪರಿಷ್ಕರಣೆಯಾಗಿದ್ದು, ಒಟ್ಟಾರೆ, ಪೆಟ್ರೋಲ್ ಬೆಲೆ 4.22 ರು ಪ್ರತಿ ಲೀಟರ್ ಹಾಗೂ ಡೀಸೆಲ್ 4.34 ಪ್ರತಿ ಲೀಟರ್ ಏರಿಕೆ ಕಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ 1.48 ರಷ್ಟು ಏರಿಕೆ ಕಂಡು 70.78ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ.

ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 94.22ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 86.37 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಅತ್ಯಧಿಕ ದರದಲ್ಲಿ ಇಂಧನ ಮಾರಾಟವಾಗುತ್ತಿದೆ

ಅತ್ಯಧಿಕ ದರದಲ್ಲಿ ಇಂಧನ ಮಾರಾಟವಾಗುತ್ತಿದೆ

ದೇಶದಲ್ಲಿ ರಾಜಸ್ಥಾನದ ಶ್ರೀ ಗಂಗಾನಗರ್ ಎಂಬಲ್ಲಿ ಅತ್ಯಧಿಕ ದರದಲ್ಲಿ ಇಂಧನ ಮಾರಾಟವಾಗುತ್ತಿದೆ. ಇಲ್ಲಿ ಪ್ರತಿ ಲೀಟರ್‌ಗೆ 101. 83 ರೂಪಾಯಿ ಹಾಗೂ ಡೀಸೆಲ್ ದರವು ಪ್ರತಿ ಲೀಟರ್‌ಗೆ 93.77 ರೂಪಾಯಿ ಮುಟ್ಟಿದೆ. ಕೆಲ ರಾಜ್ಯಗಳಲ್ಲಿ ಇಂಧನ ಮೇಲಿನ ಸುಂಕ ಇಳಿಕೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಅಸ್ಸಾಂ ,ಮೇಘಾಲಯ ಹಾಗೂ ನಾಗಾಲ್ಯಾಂಡ್ ನಲ್ಲಿ ವ್ಯಾಟ್, ಸೆಸ್ ಇಳಿಕೆ ಮಾಡಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಸತತವಾಗಿ 100 ರು ಗಡಿ ದಾಖಲೆ ಬರೆದಿತ್ತು.

 ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ ಎಂದ ಕೇಂದ್ರ

ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ ಎಂದ ಕೇಂದ್ರ

ಈ ನಡುವೆ ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ಆದರೆ, ಕೆಲ ತಿಂಗಳುಗಳಲ್ಲಿ ತೈಲ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ. ಕೆಲ ರಾಜ್ಯಗಳು ಮಾತ್ರ ತಮ್ಮ ಪಾಲಿನ ವ್ಯಾಟ್, ಸೆಸ್ ಕಡಿಮೆ ಮಾಡಿ ಜನತೆಗೆ ನೆಮ್ಮದಿ ಸುದ್ದಿ ನೀಡಿವೆ. ರಾಜ್ಯಗಳು ಹಾಕುವ ಸೆಸ್ ಕಡಿಮೆ ಮಾಡುವುದರಿಂದ ಕನಿಷ್ಠ 2 ರಿಂದ 5 ರು ತನಕವಾದರೂ ಪ್ರತಿ ಲೀಟರ್ ಮೇಲಿನ ಬೆಲೆ ಹೊರೆಯನ್ನು ತಗ್ಗಿಸಬಹುದಾಗಿದೆ. ಕೇಂದ್ರ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.

Recommended Video

ಗಗನಕ್ಕೇರಿತು ಪೆಟ್ರೋಲ್- ಡಿಸೇಲ್ ರೇಟ್!! | Oneindia Kannada

English summary
Karnataka Budget 2021: No Cess on Petrol and Diesel, but not reduced Vat on fuel prices NO change in Petrol, Diesel rates across Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X