ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ನೀರಾವರಿ ಕ್ಷೇತ್ರಕ್ಕೆ 20,996 ಕೋಟಿ ಅನುದಾನ

|
Google Oneindia Kannada News

ಬೆಂಗಳೂರು, ಮಾರ್ಚ್ 8: ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಬಜೆಟ್ ಎಂದು ವಿಪಕ್ಷ ಕಾಂಗ್ರೆಸ್ ದನಿಯೆತ್ತಿರುವ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದೆ.

ಆಯವ್ಯಯದಲ್ಲಿ ಎಲ್ಲ ವರ್ಗಗಳಿಗೆ, ಎಲ್ಲ ವಲಯಗಳಿಗೆ ಹಾಗೂ ಎಲ್ಲ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ'' ಎಂದು ಸಿಎಂ ಯಡಿಯೂರಪ್ಪ ಅವರು ಬಜೆಟ್ ಭಾಷಣದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನೀರಾವರಿ ನಿರ್ಲಕ್ಷಿಸಿದ ನಿರಾಶಾದಾಯಕ ಬಜೆಟ್: ಎಸ್.ಆರ್. ಪಾಟೀಲ್ನೀರಾವರಿ ನಿರ್ಲಕ್ಷಿಸಿದ ನಿರಾಶಾದಾಯಕ ಬಜೆಟ್: ಎಸ್.ಆರ್. ಪಾಟೀಲ್

ನೀರಾವರಿ ಕ್ಷೇತ್ರಕ್ಕೆ ಸಿಕ್ಕಿದ್ದ ಅನುದಾನದ ಮುಖ್ಯಾಂಶಗಳು:
* ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಅನುಕೂಲವಾಗುವಂತೆ ರೂ. 20,996 ಕೋಟಿ ಅನುದಾನ.

Karnataka Budget 2021: Major Announcements for Irrigation Department

* ಕೃಷ್ಣಾ ಮೇಲ್ದಂಡೆ ಹಂತ 3, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ.

* ಭದ್ರಾ ಮೇಲ್ದಂಡೆ ಯೋಜನೆಗೆ ರೂ. 21,477 ಕೋಟಿ ಅನುದಾನ.

* ಬೇಡ್ತಿ-ವರದಾ ನದಿ ಜೋಡಣೆಗೆ ಪ್ರಸ್ತಾವನೆ. ಈ ಯೋಜನೆಯಡಿ ಒಟ್ಟು 22 ಟಿ.ಎಂ.ಸಿ. ನೀರು ಬಳಸಿಕೊಳ್ಳುವ ಉದ್ದೇಶವಿದ್ದು, ಯೋಜನಾ ವರದಿಯನ್ನು National Perspective Plan ಅಡಿಯಲ್ಲಿ ಸಿದ್ಧಪಡಿಸಲು NWDAಗೆ ಮನವಿ. ಈ ನಿರ್ಧಾರದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ರಾಜ್ಯ ಬಜೆಟ್ ಕುರಿತು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಬೇಸರರಾಜ್ಯ ಬಜೆಟ್ ಕುರಿತು ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಬೇಸರ

* ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮ.
* ಪ್ರಾಧಿಕಾರದ ಆದೇಶದಂತೆ ಕಳಸಾ- ಬಂಡೂರಿ ಯೋಜನೆಯಡಿ ನೀರು ಹರಿಸಲು 1,677 ಕೋಟಿ ರು ಮೀಸಲು.

* ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ ಯೋಜನೆಯಡಿ ರೂ. 1,500 ಕೋಟಿ ಮೊತ್ತದಲ್ಲಿ ರಾಜ್ಯದ 58 ಆಣೆಕಟ್ಟುಗಳ ಪುನಶ್ವೇತನ ಮತ್ತು ಅಭಿವೃದ್ಧಿಗೆ ಪ್ರಸ್ತಾವನೆ.
ಇದಲ್ಲದೆ, ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಭರಪೂರ ಅನುದಾನ ನೀಡಿರುವ ಸರ್ಕಾರ, ಕೃಷಿ ಕ್ಷೇತ್ರದ ಅಭ್ಯುದಯ, ಅನ್ನದಾತ ರೈತರ ಕಲ್ಯಾಣಕ್ಕಾಗಿ ಒಟ್ಟು ರೂ. 31,028 ಕೋಟಿ ಅನುದಾನ ಮೀಸಲು ಇಟ್ಟಿದೆ.

English summary
Karnataka Budget 2021: Major Announcements for Irrigation Department. Rs 1,677 cr for Kalsa Banduri project to extract the water as per tribunal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X