ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2018: ಸಿದ್ದು ಕೊಡುಗೆ, ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ

By Mahesh
|
Google Oneindia Kannada News

Recommended Video

ಸಿದ್ದರಾಮಯ್ಯ ಸರ್ಕಾರದಿಂದ ಸರ್ಕಾರೀ ನೌಕರರಿಗೆ ಡಬಲ್ ಧಮಾಕಾ | Oneindia Kannada

ಬೆಂಗಳೂರು, ಫೆಬ್ರವರಿ 16: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಕೊಡುಗೆ ನೀಡಿದ್ದಾರೆ. 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗಳಿಸಲು ಸರ್ಕಾರ ಮುಂದಾಗಿದೆ.

'ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ಬದ್ಧವಾಗಿದ್ದು, ಆಯೋಗದ ಶಿಫಾರಸ್ಸಿನಂತೆ ಏಪ್ರಿಲ್ 01,2018ರಿಂದ ಜಾರಿಗೆ ಬರುವಂತೆ ಸೌಲಭ್ಯಗಳು ಸಿಗಲಿವೆ ಎಂದು ಬಜೆಟ್ ನಂತರದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಸಂಜೆ ವೇಳೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಐಎಎಸ್‌ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆ ಆಯೋಗ ಸಲ್ಲಿಸಿರುವ ವರದಿ ಹಾಗೂ ಶಿಫಾರಸ್ಸನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ರು ಅಧಿಕ ಹೊರೆ ಬೀಳಲಿದೆ. ಆಯೋಗದ ಅವಧಿಯನ್ನು ಏಪ್ರಿಲ್ 30, 2018ರ ತನಕ ವಿಸ್ತರಿಸಲಾಗಿದೆ.

ಸರ್ಕಾರಿ ನೌಕರರ ವೇತನ ಹೆಚ್ಚಳ ಹಾಗೂ ನಿವೃತ್ತಿ ವಯಸ್ಸನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಲು ಬೇಡಿಕೆ ಇತ್ತು. ಹಾಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಏರಿಕೆ ಮಾಡಲು ವಿರೋಧ ವ್ಯಕ್ತವಾಗಿತ್ತು. ಆದರೆ, ಕನಿಷ್ಟ ವೇತನ ಮೊತ್ತ, ವಾರದ ರಜಾದಿನ, ಶೇ30 ರಷ್ಟು ವೇತನ ಹೆಚ್ಚಳ ಸೇರಿದಂತೆ ಅನೇಕ ಶಿಫಾರಸುಗಳಿಗೆ ಸರ್ಕಾರ ಸಮ್ಮತಿಸಿದೆ. ಇನ್ನಷ್ಟು ವಿವರಗಳು ಮುಂದಿದೆ...

ಸಿದ್ದರಾಮಯ್ಯ ಘೋಷಿಸಿದ್ದು ಏನು?

ಸಿದ್ದರಾಮಯ್ಯ ಘೋಷಿಸಿದ್ದು ಏನು?

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ರಚನೆಗೊಂಡ 6ನೇ ವೇತನ ಆಯೋಗದ ಅವಧಿ ಏಪ್ರಿಲ್ 30, 2018ರ ತನಕ ವಿಸ್ತರಣೆ ಮಾಡಲಾಗಿದೆ. ಆಯೋಗದ ಶಿಫಾರಸ್ಸಿನ ಅನ್ವಯ ಏಪ್ರಿಲ್ 01,2018ಕ್ಕೆ ಅನ್ವಯವಾಗುವಂತೆ ಸರ್ಕಾರಿ ನೌಕರರಿಗೆ 5.93 ಲಕ್ಷ ಉದ್ಯೋಗಿಗಳು ಹಾಗೂ 5.73 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಈ ಶಿಫಾರಸ್ಸು ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ರು ಹೊರೆ ಬೀಳಲಿದೆ.

ಸರ್ಕಾರಿ ನೌಕರರ ಸಂಘದ ಬೇಡಿಕೆ ಏನು?

ಸರ್ಕಾರಿ ನೌಕರರ ಸಂಘದ ಬೇಡಿಕೆ ಏನು?

* ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು
* ಏಪ್ರಿಲ್ 1, 2017ರಿಂದ ಅನ್ವಯಿಸುವಂತೆ ಶೇ 30ರಷ್ಟು ಹಣ ಬಿಡುಗಡೆ ಮಾಡಬೇಕು. ವೇತನ ಪರಿಷ್ಕರಣೆಯಾದ ನಂತರ ಶೇ. 42.25 ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನವಾಗಬೇಕು.
* ಕೇಂದ್ರ ಸರ್ಕಾರ ಘೋಷಿಸುವ ತುಟ್ಟಿಭತ್ಯೆಯ ಪ್ರಮಾಣದಲ್ಲಿ ಶೇ. 0.944 ರಷ್ಟು ತುಟ್ಟಿಭತ್ಯೆ ನೀಡುವ ಭರವಸೆಯೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು.

ಟಿಎ, ಡಿಎ, ಎಚ್ಆರ್ ಎ ಏರಿಕೆಗೂ ಬೇಡಿಕೆ

ಟಿಎ, ಡಿಎ, ಎಚ್ಆರ್ ಎ ಏರಿಕೆಗೂ ಬೇಡಿಕೆ

* ಶೇ 30ರಿಂದ 35ರಷ್ಟು ವೇತನ ಹೆಚ್ಚಳ ಮಾಡಿದರೆ, ಸರ್ಕಾರದ ಬೊಕ್ಕಸಕ್ಕೆ ಸರಿ ಸುಮಾರು 10,000 ಕೋಟಿ ರು ಹೊರೆ ಬೀಳಲಿದೆ.

* ಮನೆ ಬಾಡಿಗೆ ಭತ್ಯೆಯನ್ನು ಶೇ. 45 ರಷ್ಟು ಫಿಟ್ ಮೆಂಟ್ ನೀಡಬೇಕೆಂದು ನೌಕರರು ಮನವಿ ಮಾಡಿದ್ದಾರೆ.

* ಈಗ ಸಿದ್ದರಾಮಯಯ್ಯ ಅವರು ಶೇ 35ರಷ್ಟು ವೇತನ ಏರಿಕೆ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೇತನ ಅಂತರ ಶೇ32ರಷ್ಟಿರಲಿದೆ.

6ನೇ ವೇತನ ಆಯೋಗದ ಶಿಫಾರಸುಗಳು

6ನೇ ವೇತನ ಆಯೋಗದ ಶಿಫಾರಸುಗಳು

ರಾಜ್ಯ ಸರ್ಕಾರಿ ನೌಕರರ ವೇತನ ಶೇ 30ರಷ್ಟು ಹೆಚ್ಚಳ.
* ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಸರಿ ಸಮಾನವಾಗಿರಬೇಕು.
* ಕೆಲವು ಜಯಂತಿ /ದಿನಾಚರಣೆ ಸರ್ಕಾರಿ ರಜೆ ರದ್ದು, ವಾರದಲ್ಲಿ 5 ದಿನಗಳು ಮಾತ್ರ ಕಚೇರಿ. * ಕೇಂದ್ರ ಸರ್ಕಾರದ ಕಚೇರಿ ಅನ್ವಯ ವಾರದ ರಜೆ ಹಾಗೂ ಕೆಲಸದ ಅವಧಿ ಬದಲಾವಣೆ.
* ಕನಿಷ್ಟ ವೇತನ ಮೊತ್ತ 16,350 ರು, ಗರಿಷ್ಟ ಮೊತ್ತ 1,32,925 ರು. ಎಂದು ನಿಗದಿ. * ಐಎಎಸ್ ಯೇತರ ಅಧಿಕಾರಿಗಳು- 95,325 ರು ನಿಂದ 1 ಲಕ್ಷ ರು.
* ಐಎಎಸ್ ಯೇತರ ಅಧಿಕಾರಿಗಳು- 95,325 ರು ನಿಂದ 1 ಲಕ್ಷ ರು.
* ಗ್ರೂಪ್ ಬಿ: 39,425 ರು
* ಗ್ರೂಪ್ ಸಿ : 19, 850 ರು
* ಗ್ರೂಪ್ ಡಿ : 16,350 ರು

English summary
Siddaramaiah led Congress Government announced 30% pay hike as per 6th Pay commission recommendations implementations will be from April 01, 2018 as said by CM Siddaramaiah after his Budget speech. Karnataka state government employees association president BP Manjegowda has demanded TA and DA hike along with 6th Pay commission recommendations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X