• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

BTS2020: ಸೈಬರ್ ಸುರಕ್ಷತೆಗೆ 'ಸೈಸೆಕ್'

|

ಬೆಂಗಳೂರು, ನ. 21: ಬೆಂಗಳೂರಿನಲ್ಲಿ ನಡೆಯುತ್ತಿರುವ ವರ್ಚ್ಯುಯಲ್ ರೂಪದ 3 ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020ಯಲ್ಲಿ ವೈವಿಧ್ಯಮಯ ಮಳಿಗೆಗಳಿದ್ದು, ರಾಜ್ಯ ಸರ್ಕಾರದ ಸೈಬರ್ ಭದ್ರತೆ ಕುರಿತ ಕಾರ್ಯಕ್ರಮಗಳ ಕುರಿತು 'ಸೈಸೆಕ್' ಮಳಿಗೆಯಲ್ಲಿ ವಿಸ್ತೃತ ಮಾಹಿತಿ ಲಭ್ಯವಿದೆ.

ಪ್ರಸಕ್ತ ಕಂಪ್ಯೂಟರ್ ಮತ್ತು ಡಿಜಿಟಲ್ ಯುಗದಲ್ಲಿ ದತ್ತಾಂಶ ಸುರಕ್ಷತೆ ಹಾಗೂ ಸೈಬರ್ ಸುರಕ್ಷತೆ ಅತ್ಯಂತ ಪ್ರಮುಖ ಅಂಶವಾಗಿದ್ದು, ಸದ್ಯದ ಭವಿಷ್ಯದಲ್ಲೂ ಈ ವಲಯ ವೈವಿಧ್ಯಮಯ ಅವಕಾಶಗಳನ್ನು ತೆರೆದಿಟ್ಟಿದೆ. ಈ ನಿಟ್ಟಿನಲ್ಲಿ ಸೈಬರ್ ಸುರಕ್ಷತೆ ಕುರಿತು ಲಭ್ಯವಿರುವ ಉತೃಷ್ಟ ಶಿಕ್ಷಣ ಮತ್ತು ವ್ಯಾಸಂಗ ಕಾರ್ಯಕ್ರಮಗಳ ಬಗ್ಗೆ ಮಳಿಗೆಯಲ್ಲಿ ವಿವರವಾದ ಮಾಹಿತಿ ಲಭ್ಯವಿದೆ.

BTS2020: ಟೊಮ್ಯಾಟೊ ಚೆಲ್ಲುವುದು ತಪ್ಪಲಿದೆ, ಸೋಯಾ ತೈಲದಂಶ ಹೆಚ್ಚಲಿದೆ!

ಸೈಬರ್ ಸುರಕ್ಷತೆ ವಲಯದಲ್ಲಿ ನವೋದ್ಯಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರವು 'ಹ್ಯಾಕ್' ಕಾರ್ಯಕ್ರಮ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ನವೋದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣ, ಜಾಗತಿಕ ಮಟ್ಟದ ತರಬೇತಿ-ಮಾರ್ಗದರ್ಶನ, ಮೂಲಸೌಕರ್ಯ, ನಾವಿನ್ಯತಾ ಇನ್ ಕುಬೇಷನ್ ವೇದಿಕೆ ಒದಗಿಸುವುದು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುತ್ತಿದೆ.

ಈ ಎಲ್ಲದರ ಬಗ್ಗೆ ಮಳಿಗೆಯಲ್ಲಿ ವಿವರ ಲಭ್ಯವಿದ್ದು, ಆಸಕ್ತರು ವರ್ಚುವಲ್ ರೂಪದಲ್ಲಿ ಭೇಟಿ ನೀಡಬಹುದು. ಸಂದೇಹಗಳನ್ನು ಬಗೆಹರಿಸಿಕೊಳ್ಳಲು ವಾಟ್ಸ್ ಅಪ್ ಮೂಲಕ ಸಂವಾದ ನಡೆಸುವ ಅವಕಾಶವನ್ನೂ ನೀಡಲಾಗಿದೆ.

   26 /11 ಅದೇ ದಿನ ಮತ್ತೊಂದು ದಾಳಿ ಸಾಧ್ಯತೆ | Oneindia Kannada

   English summary
   The Virtual Form 3-Day Bengaluru Technology Summit -2020 in Benagaluru has a variety of stores and detailed information on the state government's cybersecurity programs is available at the CySec Store. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X