ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿಮೂನ್, ಫಾರಿನ್ ಟೂರ್ ಬೇಡವೆಂದ ಬಿಎಸ್ವೈ ಮಾತಿನ ಮರ್ಮವೇನು?

|
Google Oneindia Kannada News

Recommended Video

ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ ಬಿ ಎಸ್ ಯಡಿಯೂರಪ್ಪ | Oneindia kannada

ಬೆಂಗಳೂರು, ಏ.26: ಲೋಕಸಭಾ ಚುನಾವಣಾ ಫಲಿತಾಂಶ ಬರುವವರೆಗೂ ಹನಿಮೂನ್, ಫಾರಿನ್ ಟ್ರಿಪ್ ಎಂದು ಹೋಗುವಂತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿರುವುದು ಹೊಸ ರಾಜಕೀಯಕ್ಕೆ ಮುನ್ನುಡಿ ಬರೆದಂತಿದೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಫಲಿತಾಂಶ ಬರುವವರೆಗೂ ಅಂದರೆ ಮೇ 23ರವರೆಗೂ ಬಿಜೆಪಿ ನಾಯಕರು ಹನಿಮೂನ್, ಫಾರಿನ್ ಟ್ರಿಪ್ ಎಂದು ಎಲ್ಲಿಯೂ ಹೋಗುವಂತಿಲ್ಲ, ಫಲಿತಾಂಶದ ಬಳಿಕ ಎಲ್ಲಿಗೆ ಬೇಕಾದರೂ ಹೋಗಿ ನಾನು ಕೇಳುವುದಿಲ್ಲ ಎಂದು ಮುಗುಳ್ನಗುತ್ತಲೇ ಸೂಚನೆ ನೀಡಿದರು.

ರಮೇಶ್ ಜಾರಕಿಹೊಳಿಯನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ : ಯಡಿಯೂರಪ್ಪರಮೇಶ್ ಜಾರಕಿಹೊಳಿಯನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ : ಯಡಿಯೂರಪ್ಪ

ಹಲವು ದಿನಗಳ ಬಳಿಕ ಬಿಎಸ್‌ ಯಡಿಯೂರಪ್ಪ ಅವರ ಮುಖದಲ್ಲಿ ಸಂತಸ ಕಾಣಿಸಿಕೊಂಡಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕ ಸ್ಥಾನ ಗೆಲ್ಲಲಿದೆ ಎನ್ನುವ ಭರವಸೆ ಮೂಡಿದಂತಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ, ಕಲಬುರಗಿ ಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಲ್ಲಿ ದೇವೇಗೌಡರ ಸೋಲು ಖಚಿತ, ನಾನು ನಿಮ್ಮನ್ನು ಮೆಚ್ಚಿಸಲು ಹೇಳುತ್ತಿಲ್ಲ, ಸರಿಯಾದ ಮಾಹಿತಿ ತೆಗೆದುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಕುಂದಗೋಳ, ಚಿಂಚೋಳಿ ನಾವು ಗೆಲ್ಲಲೇಬೇಕು, ಅಭ್ಯರ್ಥಿಗಳ ಹೆಸರು ದೆಹಲಿಗೆ ಕಳಿಸಿದ್ದೇವೆ.ಉಪ ಚುನಾವಣೆವರೆಗೆ ಯಾರಿಗೂ ವಿಶ್ರಾಂತಿ ಇಲ್ಲ, ಎಲ್ಲರೂ ಎರಡೂ ಕ್ಷೇತ್ರಗಳಿಗೆ ಹೋಗಿ ವಾರ್ಡ್, ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂದರು.

ಕುಮಾರಸ್ವಾಮಿ, ಡಿಕೆ ಶಿವಕುಮಾರ್ 'ಶಿವಮೊಗ್ಗ' ರಾಜಕೀಯದ ಹಿಂದಿದೆ ಭಾರೀ ಲೆಕ್ಕಾಚಾರಕುಮಾರಸ್ವಾಮಿ, ಡಿಕೆ ಶಿವಕುಮಾರ್ 'ಶಿವಮೊಗ್ಗ' ರಾಜಕೀಯದ ಹಿಂದಿದೆ ಭಾರೀ ಲೆಕ್ಕಾಚಾರ

ಟಿಕೆಟ್ ಆಕಾಂಕ್ಷಿ ಸುನಿಲ್ ವಲ್ಯಾಪುರ ಮಾತನಾಡಿ, ಚಿಂಚೋಳಿ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ. ನಿನ್ನೆ ಚುನಾವಣಾ ಸಮಿತಿ ಸಭೆಯಲ್ಲಿ ಎಷ್ಟು ಹೆಸರು ಶಿಫಾರಸ್ಸು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಾಳೆ ನಾನು ಕ್ಷೇತ್ರದಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆ ಕರೆದಿದ್ದೇನೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದ ಬಿ.ಎನ್. ಬಚ್ಚೇಗೌಡ ಹಾಗೂ ಮೈಸೂರಿನ ಪ್ರತಾಪಸಿಂಹ, ಧಾರವಾಡದ ಪ್ರಹ್ಲಾದ್ ಜೋಷಿ, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಚಾಮರಾಜನಗರದ ಶ್ರೀನಿವಾಸಪ್ರಸಾದ್, ಚಿತ್ರದುರ್ಗದ ಎ. ನಾರಾಯಣಸ್ವಾಮಿ, ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ, ದಕ್ಷಿಣ ಕನ್ನಡದ ನಳೀನ್ ಕುಮಾರ್ ಕಟೀಲ್ ಸಭೆಗೆ ಗೈರಾಗಿದ್ದಾರೆ.

ಜಾರಕಿಹೊಳಿ ಶೀಘ್ರ ಕಾಂಗ್ರೆಸ್‌ಗೆ ರಾಜೀನಾಮೆ

ಜಾರಕಿಹೊಳಿ ಶೀಘ್ರ ಕಾಂಗ್ರೆಸ್‌ಗೆ ರಾಜೀನಾಮೆ

ಇತ್ತೀಚಿನ ಪ್ರಮುಖ ರಾಜಕೀಯ ಬೆಳವಣಿಗೆಯೆಂದರೆ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ, ಇದು ಒಂದು ರೀತಿಯಲ್ಲಿ ಬಿಜೆಪಿಯ ಗೆಲುವು ಎಂದೇ ಹೇಳಬಹುದು. ಸಧ್ಯದಲ್ಲೇ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

ಈ ನಾಲ್ವರ ಸೋಲು ಖಚಿತ, ಯಾರಿವರು?

ಈ ನಾಲ್ವರ ಸೋಲು ಖಚಿತ, ಯಾರಿವರು?

ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ, ಕಲಬುರಗಿ ಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಲ್ಲಿ ದೇವೇಗೌಡರ ಸೋಲು ಖಚಿತ, ನಾನು ನಿಮ್ಮನ್ನು ಮೆಚ್ಚಿಸಲು ಹೇಳುತ್ತಿಲ್ಲ, ಕೆಲವು ವರದಿಯನ್ನು ಎದುರಿಟ್ಟುಕೊಂಡೇ ಹೇಳುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಫಲಿತಾಂಶ ಬಂದ ಮೇಲೆ ಎಲ್ಲಿಗೆ ಬೇಕಾದರೂ ಹೋಗಿ

ಫಲಿತಾಂಶ ಬಂದ ಮೇಲೆ ಎಲ್ಲಿಗೆ ಬೇಕಾದರೂ ಹೋಗಿ

ಮೇ 23ರಂದು ಲೋಕಸಭೆ ಚುನಾವಣಾ ಫಲಿತಾಂಶ ಹೊರಬೀಳಿಲಿದೆ. ಅಲ್ಲಿಯವರೆಗೂ ಫಾರಿನ್ ಟೂರು ಮತ್ತೊಂದು ಎಂದು ಹೋಗುವುದು ಬೇಡ, ಫಲಿತಾಂಶ ಬಂದ ಬಳಿಕ ಎಲ್ಲಿ ಬೇಕಾದರೂ ಹೋಗಿ ಎಂದು ಹೇಳಿದರು.

ಅತೃಪ್ತ ಕಾಂಗ್ರೆಸ್ ಶಾಸಕರು ಯಾರು ಸಹಾಯ ಮಾಡ್ತಾರೋ ಮಾಡ್ಲಿ

ಅತೃಪ್ತ ಕಾಂಗ್ರೆಸ್ ಶಾಸಕರು ಯಾರು ಸಹಾಯ ಮಾಡ್ತಾರೋ ಮಾಡ್ಲಿ

ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಸೇರಿದಂತೆ ಅತೃಪ್ತ ಕಾಂಗ್ರೆಸ್ ಶಾಸಕರು ಯಾರ್ಯಾರು ಆಂತರಿಕವಾಗಿ ಬಿಜೆಪಿಗೆ ಸಹಾಯ ಮಾಡುತ್ತಾರೋ ಮಾಡಲಿ, ಅವರ ನಂತರ ಪಕ್ಷ ಸೇರಿದ ಬಳಿಕ ಅವರ ಕೆಲಸಗಳನ್ನು ಪರಿಗಣಿಸೋಣ, ಎಲ್ಲಿಯವರೆಗೂ ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಸಭೆಯಲ್ಲಿ ಎಸ್‌ಎಂ ಕೃಷ್ಣ ಹೆಸರು ಪ್ರಸ್ತಾಪವಾಗಿದ್ದೇಕೆ?

ಬಿಜೆಪಿ ಸಭೆಯಲ್ಲಿ ಎಸ್‌ಎಂ ಕೃಷ್ಣ ಹೆಸರು ಪ್ರಸ್ತಾಪವಾಗಿದ್ದೇಕೆ?

ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರನ್ನು ಇನ್ನೂ ಹೆಚ್ಚಿನ ಸಮಯ ಪ್ರಚಾರಕ್ಕೆ ಬಳಸಿಕೊಳ್ಳಬಹುದಾಗಿತ್ತು. ಮೈಸೂರು ಭಾಗದಲ್ಲಿ ಅವರ ಪ್ರಚಾರ ಕಡಿಮೆಯಾಯಿತು. ಹೆಲಿಕಾಪ್ಟರ್ ಕೊರತೆ ಹಿನ್ನೆಲೆಯಲ್ಲಿ ಕೃಷ್ಣರನ್ನ ಹೆಚ್ಚು ಹೆಚ್ಚು ಲೋಕಸಭೆ ಕ್ಷೇತ್ರಗಳಿಗೆ ಬಳಸಿಕೊಳ್ಳಲು ಆಗಲಿಲ್ಲ ಎಂಬ ಮಾತುಗಳು ಕೇಳಿಬಂದವು.

English summary
Bjp state president BS Yeddyurappa warns to party leaders not to go abroad till parliament election result come out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X