'ಯಡಿಯೂರಪ್ಪ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ'

Written By:
Subscribe to Oneindia Kannada

ಬೆಂಗಳೂರು, ಮೇ, 14: ' ರಾಜ್ಯದ ಜನ ಎಂದಿಗೂ ಬಿಜೆಪಿಗೆ ಅಧಿಕಾರ ಕೊಡುವುದಿಲ್ಲ, ಮುಂದೆಯೂ ನಮ್ಮದೇ ಅಧಿಕಾರ, ಸಲ್ಲದ ಆರೋಪ ಮಾಡುವುದರಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ. ನಾನು ಎಂದಿಗೂ ಭ್ರಷ್ಟಾಚಾರ ಮಾಡಿಲ್ಲ, ಅದಕ್ಕೂ ಅವಕಾಶವನ್ನು ನೀಡಿಲ್ಲ' ಹೀಗೆಂದು ತಮ್ಮ ಸರ್ಕಾರದ ಸಾಧನೆಗಳನ್ನು ಹೇಳುತ್ತಲೇ ಬಿಜೆಪಿಯ ಆರೋಪಗಳಿಗೆ ಉತ್ತರ ನೀಡಿದ್ದು ಸಿಎಂ ಸಿದ್ದರಾಮಯ್ಯ.

ಶನಿವಾರ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರ್ಕಾರ ಮೂರು ವರ್ಷ ಪೂರ್ಣ ಮಾಡಿದ ಹಿನ್ನೆಲೆಯಲ್ಲಿ 'ನಾಲ್ಕನೇ ವರ್ಷದೆಡೆಗೆ... ಭರವಸೆಯ ನಡಿಗೆ' ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.[ಸಿಎಂಗೆ ಬಿಡದ ವಾಚ್ ಉರುಳು, ಎಸಿಬಿಗೆ ಮತ್ತೊಂದು ದೂರು]

karnataka

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್
* ರಾಜಕೀಯ ಪ್ರೇರಿತವಾಗಿ ಬಿಜೆಪಿಯವರು ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಜೈಲಿಗೆ ಹೋಗಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
* ಬಿಜೆಪಿ ಮತ್ತು ಜಗದೀಶ್ ಶೆಟ್ಟರ್ ಅವರು ಸರ್ಕಾರಕ್ಕೆ 3 ಅಂಕ ಕೊಟ್ಟಿದ್ದಾರೆ. ಯಾವ ಮಾನದಂಡದಲ್ಲಿ ಕೊಟ್ಟರು ಎಂದು ಅವರನ್ನೇ ಕೇಳಬೇಕಿದೆ.[ಕರ್ನಾಟಕ ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ!]
* ಕಾಂಗ್ರೆಸ್ ಅಧಿಕಾರಕ್ಕೆರುವ ಸಂದರ್ಭದಲ್ಲಿ ಜನತೆಗೆ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 120 ಭರವಸೆಗಳನ್ನು ಈಡೇರಿಸಿದ್ದೇವೆ.
* ಬರದ ಸಂದರ್ಭದಲ್ಲಿ ಜನರ ಜತೆಗಿದ್ದೇವೆ. ಜಾನುವಾರುಗಳ ಮೇವಿಗೆ ವ್ಯವಸ್ಥೆ ಮಾಡುತ್ತಿದ್ದೇವೆ. ನಾವು ಕೈಕಟ್ಟಿ ಕುಳಿತುಕೊಂಡಿಲ್ಲ.
* ಹತಾಶೆಯ ಹೇಳಿಕೆ ನೀಡುವವರಿಗೆ ನಾನು ಪ್ರತಿಕ್ರಿಯೆ ನೀಡಬೇಕಲಿಲ್ಲ. ನಮಗೆ ಜನತೆಯ ಪ್ರಮಾಣ ಪತ್ರ ಸಾಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hitting back at BJP state President B S Yeddyurappa for his offensive against him, Karnataka Chief Minister Siddaramaiah on Saturday said BSY was under the "illusion" of becoming the CM again and asserted that Congress will return to power in 2018 Assembly elections. Chief Minister Siddaramaiah released a book regarding State Governments achievements.
Please Wait while comments are loading...