ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧಾದುಂದಿ ಸರ್ಕಾರದ ಬಗ್ಗೆ ಬಿಜೆಪಿಯಿಂದಲೇ ಶ್ವೇತಪತ್ರ: ಯಡಿಯೂರಪ್ಪ ಗುಡುಗು

|
Google Oneindia Kannada News

ಬೆಂಗಳೂರು, ನವೆಂಬರ್ 25: ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿಲ್ಲ ಹಾಗಾಗಿ ಸರ್ಕಾರದ ಸಾಧನೆಯ ಬಗ್ಗೆ ಬಿಜೆಪಿಯೇ ಶ್ವೇತಪತ್ರ ಹೊರಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕಳೆದ ಆರು ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ, ಎಲ್ಲಾ ಇಲಾಖೆಗಳು ಸಹ ಕಳಪೆ ಮಟ್ಟದ ಸಾಧನೆಯನ್ನುತೋರಿದ್ದು, ಒಟ್ಟಾರೆ ಕೇವಲ ಶೇ.39ರಷ್ಟು ಮಾತ್ರ ಪ್ರಗತಿಯಾಗಿದೆ ಎಂದು ಹೇಳಿದರು.

ಜಾತಿ ಗಣತಿಯನ್ನು ಕಸದ ಬುಟ್ಟಿಗೆ ಹಾಕಲಿದೆಯಾ ಎಚ್‌ಡಿಕೆ ಸರಕಾರ? ಜಾತಿ ಗಣತಿಯನ್ನು ಕಸದ ಬುಟ್ಟಿಗೆ ಹಾಕಲಿದೆಯಾ ಎಚ್‌ಡಿಕೆ ಸರಕಾರ?

ತಾವು ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ದೋಷವಿದ್ದರೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಬೇಕು. ಇಲಾಖೆಗಳಿಂದಲೇ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.

ಕೇವಲ ಹೆಸರಿಗೆ ಮಾತ್ರ ಕೌಶಲ್ಯಾಭಿವೃದ್ಧಿ

ಕೇವಲ ಹೆಸರಿಗೆ ಮಾತ್ರ ಕೌಶಲ್ಯಾಭಿವೃದ್ಧಿ

ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹೆಸರಿಗೆ ಮಾತ್ರ ಇದ್ದು, ಈವರೆಗೆ 223 ಕೋಟಿ ರೂ ಪೈಕಿ 33 ಕೋಟಿ ರೂ ಆರ್ಥಿಕ ಸಾಧನೆಯಾಗಿದೆ. ಶೇ.14ರಷ್ಟು ಮಾತ್ರ ಸಾಧನೆ ಮಾಡಲಾಗಿದೆ. ಒಂದು ಲಕ್ಷ ಮಂದಿಗೆ ಕೌಶಲ್ಯ ತರಬೇತಿ ಪ್ರಾರಂಭವಾಗಿಲ್ಲ.

ಸಿಎಂ ಅವರಿಂದ ವರ್ಗಾವಣೆ ದಂಧೆ

ಸಿಎಂ ಅವರಿಂದ ವರ್ಗಾವಣೆ ದಂಧೆ

ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವ್ಯವಹಾರಕ್ಕಾಗಿ ಐಷಾರಾಮಿ ಹೋಟೆಲ್ ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಯಾವೊಬ್ಬ ಮುಖ್ಯಮಂತ್ರಿಯೂ ಐಷಾರಾಮಿ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ ಉದಾಹರಣೆ ಇಲ್ಲ, ಗುತ್ತಿಗೆದಾರರು ಸೇರಿದಂತೆ ಇತರರನ್ನು ಗೌಪ್ಯವಾಗಿ ಭೇಟಿ ಮಾಡಿ ಖಾಸಗಿ ವ್ಯವಹಾರ ನಡೆಸಲು ಖಾಸಗಿ ಹೋಟೆಲ್‌ವೊಂದರಲ್ಲಿ ಕೊಠಡಿ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2? ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?

ಸ್ವಚ್ಛಭಾರತನಲ್ಲೂ ಕಳಪೆ ಸಾಧನೆ

ಸ್ವಚ್ಛಭಾರತನಲ್ಲೂ ಕಳಪೆ ಸಾಧನೆ

ಗ್ರಾಮೀಣಾಭಿವೃದ್ಧಿ ಇಲಾಖೆಯ ಪಿಎಂಜೆಎಸ್‌ವೈ ಯೋಜನೆಯಲ್ಲಿ 333 ಕೋಟಿ ರೂ ಅನುದಾನದ ಪೈಕಿ ಆರು ಕೋಟಿ ರೂ ಸಾಧನೆಯಾಗಿದೆ. ಅಂದರೆ ಕೇವಲ ಶೇ.2ರಷ್ಟು ಪ್ರಗತಿ ಸಾಧಿಸಲಾಗಿದೆ. ಸ್ವಚ್ಛ ಭಾರತ್ ಅಭಿಯಾನದಲ್ಲಿ ವಾರ್ಷಿಕ 3 ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲು ಗುರಿ ಹೊಂದಿದ್ದು ಈವರೆಗೆ 171 ಗ್ರಾಮೀಣ ಶೌಚಾಲಯಗಳನ್ನು ನಿರ್ಮಿಸಿ ಶೇ.5ರಷ್ಟು ಪ್ರಗತಿ ಸಾಧಿಸಿದ್ದಾರೆ.

ಬಹುನಿರೀಕ್ಷಿತ ಜಾತಿ ಗಣತಿಗೆ ಸಿದ್ದರಾಮಯ್ಯ ಎಳ್ಳುನೀರು?ಬಹುನಿರೀಕ್ಷಿತ ಜಾತಿ ಗಣತಿಗೆ ಸಿದ್ದರಾಮಯ್ಯ ಎಳ್ಳುನೀರು?

ಹಾಲು ಉತ್ಪಾದಕರಿಗೆ ಪಾವತಿ ಬಾಕಿ

ಹಾಲು ಉತ್ಪಾದಕರಿಗೆ ಪಾವತಿ ಬಾಕಿ

400 ಕೋಟಿ ರೂ ಹಾಲು ಉತ್ಪಾದಕರಿಗೆ ಪಾವತಿಯಾಗಿಲ್ಲ, ಗಂಗಾಕಲ್ಯಾಣ ಯೋಜನೆಯಡಿ ಒಂದೇ ಒಂದು ಬೋರ್‌ವೆಲ್‌ ತೆಗೆಸಿಲ್ಲ, ಇನ್ನು ಬರಗಾಲ ಪೀಡಿತ ತಾಲೂಕುಗಳಿಗೆ 50 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ ಆದರೆ ಹಣ ಖರ್ಚು ಮಾಡಿಲ್ಲ ಎಂದು ಹೇಳಿದರು.

ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ

English summary
State Bjp president B.S.Yeddyurappa has said that he could release white paper on collation governments' financial status soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X