ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ವೈಗೆ ಢವಢವ: ನ.14ಕ್ಕೆ ಡಿನೋಟಿಫಿಕೇಷನ್ ಪ್ರಕರಣ ವಿಚಾರಣೆ

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪಡಿನೋಟಿಫಿಕೇಷನ್ ಪ್ರಕರಣ ನವೆಂಬರ್ 14 ಕ್ಕೆ ವಿಚಾರಣೆ | Oneindia Kannada

ಬೆಂಗಳೂರು, ಸೆ.25: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎದುರಿಸುತ್ತಿರುವ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 14ರಂದು ನಡೆಸಲಿದೆ.

ಯಡಿಯೂರಪ್ಪ, ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್ ಯಡಿಯೂರಪ್ಪ, ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇನ್ ಪ್ರಕರಣವನ್ನು ಬಿಎಸ್ ವೈ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಿಎಸ್ ವೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಹೈಕೋರ್ಟ್ ತಡೆಹಿಡಿದಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ನ.14ರಂದು ವಿಚಾರಣೆ ಮಾಡಲಿದೆ.

15 ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಖುಲಾಸೆ 15 ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಖುಲಾಸೆ

ಈ ಕುರಿತು ಸುಪ್ರೀಂಕೋರ್ಟ್ ಎದುರು ವಿಚಾರಣೆಗೆ ಬಂದಾಗ ಈ ಕುರಿತು ಸಮಗ್ರ ತನಿಖೆ ಮಾಡುವ ಅಗತ್ಯವಿದೆ ಎಂದು ಬಿಎಸ್ ವೈ ಪರ ವಕೀಲ ಹೇಳಿದ್ದಾರೆ. ಇವರ ವಾದವನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಭಾನುಮತಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಪ್ರಕರಣದ ಕುರಿತಂತೆ ಎಲ್ಲ ವಿವರಗಳನ್ನು ಕೋರ್ಟ್ ಗೆ ಸಲ್ಲಿಸಬೇಕೆಂದು ಸೂಚಿಸಿದೆ.

BSY another denotification case hearing on November 14

ಕೋರ್ಟ್ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ ಎಸಿಬಿ ಪರ ವಕೀಲರಾದ ಅಭಿಷೇಕ್ ಮನಸಿಂಘ್ವಿ ಮತ್ತು ಅರಿಸ್ಟಾಟಲ್, ಶಾಸನಬದ್ಧ ಸಂಸ್ಥೆಯೊಂದು ನಡೆಸುತ್ತಿದ್ದ ತನಿಖೆಗೆ ತಡೆ ನೀಡಿರುವ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿದರು.

English summary
Supreme Court will hear Shivaram Karanth layout denotification case on November 14 which former chief minister B.S.Yeddyurappa allegedly involved in the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X