ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಷರತ್ : ಬಿಜೆಪಿ ಜತೆ ಬಿಎಸ್ಆರ್ ವಿಲೀನ ಇಲ್ಲ

By Mahesh
|
Google Oneindia Kannada News

ಗಂಗಾವತಿ, ಸೆ.25 : ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಬಿಜೆಪಿ ಮತ್ತೊಮ್ಮೆ ತಾನು ಬೆಳೆಸಿದ ನಾಯಕ ಶ್ರೀರಾಮುಲು ಕಡೆ ತಿರುಗಲಿದೆ ಎಂಬ ಸುದ್ದಿ ಈಗ ಸತ್ತಿದೆ. ಬಿಜೆಪಿ ಜತೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ವಿಲೀನಗೊಳಿಸಲಾರೆ ನಾನು ಯಾವ ಷರತ್ತು ವಿಧಿಸಿಲ್ಲ ಎಂದು ಪಕ್ಷದ ಅಧ್ಯಕ್ಷ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೆಜೆಪಿ ನಂತರ ಬಿಎಸ್ ಆರ್ ಕಾಂಗ್ರೆಸ್ ಹಾಗೂ ಶ್ರೀರಾಮುಲು ಜತೆ ಬಿಜೆಪಿ ಮೈತ್ರಿಗೆ ಮುಂದಾಗಿದ್ದು ಗುಟ್ಟಾಗಿ ಉಳಿದಿಲ್ಲ. ಕೆಜೆಪಿ ಜತೆ ಬಿಜೆಪಿ ವಿಲೀನವಾಗದಿದ್ದರೂ ಯಡಿಯೂರಪ್ಪ ಅವರ ಷರತ್ತಿಗೆ ತಕ್ಕಂತೆ ಬಿಜೆಪಿ ಹೈಕಮಾಂಡ್ ಕುಣಿಯಲಿರುವ ಸುದ್ದಿ ಬಂದಿದೆ.

ಆದರೆ, ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಅವರು ಮತ್ತೆ ಪಕ್ಷಕ್ಕೆ ಮರಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಬಿಜೆಪಿ ಹಿರಿಯ ನಾಯಕರು ಷರತ್ತುಗಳ ಪರಿಶೀಲನೆ ನಡೆಸಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ಶ್ರೀರಾಮುಲು ಅಲ್ಲಗೆಳೆದಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷ ಸ್ವಂತ ಬಲದಿಂದ ಎಲ್ಲಾ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಶ್ರೀರಾಮುಲು ಘೋಷಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಕೋರ್ಟಿಗೆ ಹಾಜರಾಗಿದ್ದ ಶ್ರೀರಾಮುಲು ಅವರು ಚುನಾವಣಾ ಮೈತ್ರಿ, ಗಾಲಿ ರೆಡ್ಡಿ ಪ್ರಕರಣ, ಸುರೇಶ್ ಬಾಬು ಬಂಧನ ಬಗ್ಗೆ ಮಾತನಾಡಿದರು. ಶ್ರೀರಾಮುಲು ಹೇಳಿಕೆ ವಿವರ ಮುಂದಿದೆ ಓದಿ...

 ಸಿಬಿಐ ಭೀತಿ

ಸಿಬಿಐ ಭೀತಿ

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಸಂಬಂಧಿ ಸುರೇಶ್ ಬಾಬು ಹಾಗೂ ಇತರರನ್ನು ಸಿಬಿಐ ಬಂಧಿಸಿದೆ. ಆದರೆ, ನನಗೆ ಸಿಬಿಐ ಭಯವಿಲ್ಲ. ನಾನು ಜನ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಜನ ಸೇವೆಯನ್ನು ಮುಂದುವರೆಸುತ್ತೇನೆ ಎಂದರು.

ಜಗನ್ ಬಿಡುಗಡೆ ಬಗ್ಗೆ

ಜಗನ್ ಬಿಡುಗಡೆ ಬಗ್ಗೆ

ಅಕ್ರಮ ಆಸ್ತಿ ಪ್ರಕರಣದ ಆರೋಪಿಯಾಗಿದ್ದ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಬಿಡುಗಡೆ ಗೊಂಡಿರುವುದಕ್ಕೆ ಶ್ರೀರಾಮುಲು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಗಾಲಿ ಜನಾರ್ದನ ರೆಡ್ಡಿ ಅವರಿಗೂ ಜಾಮೀನು ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ಸಖ್ಯ ಬೇಡ ಎಂದಿರುವ ಶ್ರೀರಾಮುಲು ಈಗ ವೈಎಸ್ಸಾರ್ ಪಕ್ಷದ ಬ್ರ್ಯಾಂಚ್ ಆಫೀಸ್ ಕರ್ನಾಟಕದಲ್ಲಿ ಓಪನ್ ಮಾಡುತ್ತಾರಾ ಕಾದು ನೋಡಬೇಕಿದೆ. ಗಾಲಿ ರೆಡ್ಡಿ ಹೊರ ಬರುವ ತನಕ ಹಾಗು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವೈಎಸ್ಸಾರ್ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ಬಿಎಸ್ಸಾರ್ ಪಕ್ಷ ರಾಜ್ಯದಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಸುದ್ದಿಯೂ ಇದೆ

ಬಿಜೆಪಿ ಕಥೆ ಏನು?

ಬಿಜೆಪಿ ಕಥೆ ಏನು?

ಶ್ರೀರಾಮುಲು ಪಕ್ಷಕ್ಕೆ ಮರಳಿದರೆ ವಿಧಾನಸಭೆ ವಿಪಕ್ಷ ಉಪನಾಯಕನ ಸ್ಥಾನ ನೀಡಲು ಬಿಜೆಪಿಯಲ್ಲಿ ಗೊಂದಲವಿದೆ. ಹಲವರ ವಿರೋಧವಿದೆ. ಅಲ್ಲದೆ ಕೋರ್ ಕಮಿಟಿಯಲ್ಲಿ ಶ್ರೀರಾಮುಲುಗೆ ಏಕೆ ಸ್ಥಾನ ಎಂಬ ಪ್ರಶ್ನೆ ಎದ್ದಿದೆ.

ಹಲವರ ವಿರೋಧ

ಹಲವರ ವಿರೋಧ

ಶ್ರೀರಾಮುಲು ಮರಳುವುದಕ್ಕೆ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್,ಅನಂತಕುಮಾರ್ ಸೇರಿದಂತೆ ಹಲವರ ವಿರೋಧವಿದೆ. ಅಲ್ಲದೆ, ಗಾಲಿ ರೆಡ್ಡಿ ಬೆಂಬಲಿಗರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಡಿವಿ ಸದಾನಂದ ಗೌಡರು ಕೂಡಾ ಉತ್ಸಾಹ ತೋರಿಲ್ಲ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತ್ರ ಗಾಲಿ ರೆಡ್ಡಿ ಪತ್ನಿ ಅರುಣಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದಾರೆ.

ಹೈಕಮಾಂಡ್ ಒಪ್ಪಿಲ್ಲ

ಹೈಕಮಾಂಡ್ ಒಪ್ಪಿಲ್ಲ

ಯಡಿಯೂರಪ್ಪ ಅವರನ್ನು ಬಿಜೆಪಿಗೆ ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಒಪ್ಪದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಸುಷ್ಮಾ ಸ್ವರಾಜ್ ಅವರ ತಂಡ ಈಗ ಶ್ರೀರಾಮುಲು ಬಳಗಕ್ಕೂ ಅಡ್ಡಗಾಲು ಹಾಕುತ್ತಿದೆ.

ರಾಜನಾಥ್ ಸಿಂಗ್ ಅವರು ಈ ರೀತಿ ಪ್ರಸ್ತಾಪ ಬಂದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಲಹೆಯಂತೆ ನಡೆಯಲು ನಿರ್ಧರಿಸಿದ್ದಾರೆ. ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ಬಿಜೆಪಿ ಎಲ್ಲಾ ರೀತಿ ಮೈತ್ರಿಗೆ ತಯಾರಿ ನಿಂತಿದೆ.

English summary
BSR Congress will not be merged with BJP said BSR Congress president B Sreeramulu. BSR Congress party will be contesting independently in all 28 constituencies in the upcoming Lok Sabha elections he added
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X