ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಬಿಎಸ್ ಪಿ ಸ್ವತಂತ್ರ ಸ್ಪರ್ಧೆ

|
Google Oneindia Kannada News

Recommended Video

Lok Sabha Election 2019 : ಕರ್ನಾಟಕದಲ್ಲಿ ಬಿಎಸ್ ಪಿ ಸ್ವತಂತ್ರ ಸ್ಪರ್ಧೆ

ಬೆಂಗಳೂರು, ಅಕ್ಟೋಬರ್ 5: ಕರ್ನಾಟಕದ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷವಾದ ಬಹುಜನ ಸಮಾಜವಾದಿ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ವಾಗಿ ಸ್ಪರ್ಧಿಸಲಿದ್ದು, ಜೆಡಿಎಸ್ ಗೆ ಮುಜುಗರ ಉಂಟು ಮಾಡಿದೆ.

ಛತ್ತೀಸ್ ಗಢ, ಮಧ್ಯಪ್ರದೇಶ ಒಳಗೊಂಡಂತೆ ಪಂಚರಾಜ್ಯ ಗಳ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಬಿಎಸ್ ಪಿ ನಿರ್ಧರಿಸಿದೆ.

ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್‌ಪಿಯ ಎನ್.ಮಹೇಶ್? ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್‌ಪಿಯ ಎನ್.ಮಹೇಶ್?

ಮುಖ್ಯಸ್ಥೆ ಮಾಯಾವತಿ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲೂ ಸ್ವತಂತ್ರ ಅಭ್ಯರ್ಥಿ ಸ್ಪರ್ಧೆಗೆ ಸಿದ್ಧತೆ ನಡೆದಿದೆ.ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಸಿದ್ಧತೆ ನಡೆಸಲಾಗಿದೆ. ಆದರೆ, ಈವರೆಗೆ ಮಾಯಾವತಿ ಅವರೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ, ಮತ್ತು ಅವರಿಂದ ನಿರ್ದೇಶನ ಬಂದಿಲ್ಲ ಎಂದು ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.

ಬಿಎಸ್‌ಪಿಯ ಮಾಯಾವತಿ ಕಾಂಗ್ರೆಸ್‌ಗೆ 'ಕೈ' ಕೊಟ್ಟಿದ್ದೇಕೆ? ಬಿಎಸ್‌ಪಿಯ ಮಾಯಾವತಿ ಕಾಂಗ್ರೆಸ್‌ಗೆ 'ಕೈ' ಕೊಟ್ಟಿದ್ದೇಕೆ?

ಛತ್ತೀಗಢ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಕಡಿತ ಆಗಿರುವುದಕ್ಕೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ, ರಾಜ್ಯದಲ್ಲಿ ಜೆಡಿಎಸ್ ನೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾರಣಕ್ಕೆ ನಾನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಂಪುಟದಲ್ಲಿ ಸಚಿವನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಮೈತ್ರಿ ಕೂಟದಲ್ಲಿ ಒಡಕಿನ ನೋಟ, ಜೆಡಿಎಸ್ ಗೆ ಎದುರಾಯ್ತು ಹೊಸ ಕಾಟ

ಮೈತ್ರಿ ಕೂಟದಲ್ಲಿ ಒಡಕಿನ ನೋಟ, ಜೆಡಿಎಸ್ ಗೆ ಎದುರಾಯ್ತು ಹೊಸ ಕಾಟ

ಒಂದೆಡೆ ಆಪರೇಷನ್ ಕಮಲ ನಡೆಸಿ ಬಿಜೆಪಿ ಗೆದ್ದೆ ಎಂದು ಬೀಗುವುದರೊಳಗೆ ಏನೇನೋ ಸಾಹಸ ಮಾಡಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತಮ್ಮ ಸಚಿವರು, ಶಾಸಕರನ್ನು ಉಳಿಸಿಕೊಳ್ಳಲು ಸಫಲವಾಯಿತು. ಆದರೆ ಇದೀಗ ಪಕ್ಷೇತರರು ತಮ್ಮ ನಡೆಯನ್ನು ಬದಲಿಸಿರುವುದು ಜೆಡಿಎಸ್ ಗೂ ಕಂಟಕವಾಗಿ ಪರಿಣಮಿಸಿದೆ.

ಅಲ್ಲಿ ಮಾಯಾವತಿ ಮುನಿಸು, ಎಲ್ಲಿ ಎನ್‌ ಮಹೇಶ್ ಸಿಡುಕು

ಅಲ್ಲಿ ಮಾಯಾವತಿ ಮುನಿಸು, ಎಲ್ಲಿ ಎನ್‌ ಮಹೇಶ್ ಸಿಡುಕು

ಮಾಯಾವತಿ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಲೋಕಸಭಾ ಚುನಾವಣೆಗೆ ಬಿಎಸ್ ಪಿಯನ್ನು ಏಕಾಂಗಿಯಾಗಿ ಕಣಕ್ಕಿಳಿಸುತ್ತೇನೆ ಎನ್ನುವ ಮಾತುಗಳು ಅವರಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಇರುವ ಮುನಿಸು ಗೋಚರಿಸುತ್ತದೆ. ಇಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಎನ್ ಮಹೇಶ್ ಗೆ ಹೊಂದಾಣಿಕೆಯಾಗುತ್ತಿಲ್ಲ, ಪಕ್ಷದಲ್ಲಿದ್ದುಕೊಂಡೇ ಜೆಡಿಎಸ್, ಕಾಂಗ್ರೆಸ್ ವಿರುದ್ಧವಾಗಿ ಮಾತನಾಡಲು ಆರಂಭಿಸಿದ್ದಾರೆ.

ಮಾಯಾವತಿ ಜೊತೆ ಮತ್ತದೇ ಮಿಸ್ಟೇಕ್ ಮಾಡುತ್ತಿರುವ ರಾಹುಲ್ ಗಾಂಧಿಮಾಯಾವತಿ ಜೊತೆ ಮತ್ತದೇ ಮಿಸ್ಟೇಕ್ ಮಾಡುತ್ತಿರುವ ರಾಹುಲ್ ಗಾಂಧಿ

ಬಿಎಸ್ ಪಿಗೆ ಸಿಗುವುದು ಕಷ್ಟ ಅನ್ಯರ ಸಾಂಗತ್ಯ

ಬಿಎಸ್ ಪಿಗೆ ಸಿಗುವುದು ಕಷ್ಟ ಅನ್ಯರ ಸಾಂಗತ್ಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಮೈತ್ರಿ ಮೂಲಕ ಕಾದಾಡುವ ಮಹತ್ವಾಕಾಂಕ್ಷೆಗೆ ರಾಜ್ಯ ವೇದಿಕೆಯಾಗಿತ್ತು. ಕಳೆದ ಮೇ ತಿಂಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪದಗ್ರಹಣ ಸಮಾರಂಭದಲ್ಲಿ ದೇಶದ ಬಿಜೆಪಿಯೇತರ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು. ಆದರೆ ಮಹಾಮೈತ್ರಿ ಕನಸು ಆರಂಭದಲ್ಲೇ ಭಗ್ನಗೊಂಡಿದೆ. ವರ್ಷಾಂತ್ಯಕ್ಕೆ ನಡೆಯುವ ಪಂಚರಾಜ್ಯಗಳ ಚುನಾವಣೆಗೆ ಏಕಾಂಗಿ ಸ್ಪರ್ಧೆಯ ತೀರ್ಮಾನವನ್ನು ಬಿಎಸ್ ಪಿ ಯ ಮಾಯಾವತಿ ಪ್ರಕಟಿಸಿದ್ದಾರೆ.

ಬಿಎಸ್ ಪಿಗೆ ದಲಿತರ ಅಭಿವೃದ್ಧಿಯೇ ಹಿತ

ಬಿಎಸ್ ಪಿಗೆ ದಲಿತರ ಅಭಿವೃದ್ಧಿಯೇ ಹಿತ

ದೇಶದಲ್ಲಿ ಜಾತಿ ವ್ಯವಸ್ಥೆ ನಾಶ ಮಾಡಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ನಾನು ಉದ್ದೇಶಿಸಿ ಮಾತನಾಡಿದ್ದೇನೆಯೇ ಹೊರತು, ಜೆಡಿಎಸ್ ಬಗ್ಗೆ ಈ ಮಾತು ಹೇಳಿಲ್ಲ, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ ನಾನು ಕಾಂಗ್ರೆಸ್ ಪಕ್ಷದ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ ಎಂದು ಸಚಿವ ಮಹೇಶ್ ಹೇಳಿದ್ದಾರೆ.

'ಕೈ'ಕೊಟ್ಟ ಮಾಯಾವತಿ... ಕಾಂಗ್ರೆಸ್ ಗೆ ಅಳಿವು-ಉಳಿವಿನ ಸವಾಲು!'ಕೈ'ಕೊಟ್ಟ ಮಾಯಾವತಿ... ಕಾಂಗ್ರೆಸ್ ಗೆ ಅಳಿವು-ಉಳಿವಿನ ಸವಾಲು!

ಸಚಿವ ಎನ್ ಮಹೇಶ್ ಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭಯ

ಸಚಿವ ಎನ್ ಮಹೇಶ್ ಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭಯ

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದೆಡೆ ಕರ್ನಾಟಕದಲ್ಲಿಯೂ ಸ್ವತಂತ್ರವಾಗಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಪ್ರಯತ್ನವನ್ನು ಬಿಎಸ್ ಪಿ ಮಾಡುತ್ತಿದೆ.

'ಕಾಂಗ್ರೆಸ್ ಮೈತ್ರಿಕೂಟ ಕನಸು ಭಗ್ನ, ಮಾಯಾವತಿಯಿಂದ ಹಿಂದೇಟು''ಕಾಂಗ್ರೆಸ್ ಮೈತ್ರಿಕೂಟ ಕನಸು ಭಗ್ನ, ಮಾಯಾವತಿಯಿಂದ ಹಿಂದೇಟು'

English summary
Coalition government partner in Karnataka Bahujan Samajwadi Party has decided to contest in all 28 seats in Karnataka in upcoming parliament election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X