ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರಾಜ್ಯ ನಾಯಕತ್ವ ಬದಲಾವಣೆಗೆ ಕುರಿತು ಸಿಎಂ ಯಡಿಯೂರಪ್ಪ ಖಡಕ್ ಉತ್ತರ

|
Google Oneindia Kannada News

ಬೆಂಗಳೂರು, ಮೇ 27: ರಾಜ್ಯ ನಾಯಕತ್ವ ಬದಲಾವಣೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಡಕ್ ಉತ್ತರ ನೀಡಿದ್ದಾರೆ.

ಈಗ ನನ್ನೆದುರಿಗೆ ಇರುವುದು ಕೊರೊನಾ ಸವಾಲು ಮಾತ್ರ ಅದನ್ನು ಎದುರಿಸಲು ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ, ಅದನ್ನು ಹೊರತು ಪಡಿಸಿ ನನ್ನ ಬಳಿ ಬೇರೆ ಏನೂ ಆಲೋಚನೆಗಳಿಲ್ಲ ಎಂದಿದ್ದಾರೆ.

BS Yediyurappa Rules Out Leadership Change In Karnataka, Says Covid-19 Management Is My Priority

ದೆಹಲಿಗೆ ಹೋಗಿ ಬಂದವರಿಗೆ ಹೈಕಮಾಂಡ್ ಉತ್ತರ ಕೊಟ್ಟು ಕಳುಹಿಸಿದೆ, ಇನ್ನು ಶಾಸಕಾಂಗ ಸಭೆ ಕುರಿತು ನಿಮ್ಮ ಮುಂದೆ ಚರ್ಚಿಸುವ ಅಗತ್ಯವಿಲ್ಲ ಎಂದು ಮಾಧ್ಯಮದವರಿಗೆ ಖಾರವಾಗಿ ಉತ್ತರ ನೀಡಿದ್ದಾರೆ.

ನನ್ನ ಮುಂದಿರುವುದು ಕೊರೊನಾ ನಿರ್ವಹಣೆ ಮಾತ್ರ, ಕೊರೊನಾ ಎದುರಿಸುವುದು ಮೊದಲ ಕೆಲಸ, ಬೇರೆ ಯಾವುದರ ಬಗ್ಗೆಯೂ ನನ್ನ ಗಮನವಿಲ್ಲ, ಸಚಿವರು, ಶಾಸಕರು ಒಟ್ಟಾಗಿ ಕೋವಿಡ್ ಎದುರಿಸಬೇಕಿದೆ.

ಕೊರೊನಾ ನಿಯಂತ್ರಿಸುವುದು, ಜನಹಿತ ಕಾಪಾಡುವುದು ನನ್ನ ಆದ್ಯತೆಯಾಗಿದೆ. ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದರು, ಅಂದ್ರೆ ಅವರಿಗೆ ಹೈಕಮಾಂಡ್ ಉತ್ತರ ಕೊಟ್ಟು ಕಳುಹಿಸಿದ್ದಾರಲ್ಲಾ ಎಂದ ಅವರು, ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರ ನಿಮ್ಮೊಂದಿಗೆ ಚರ್ಚಿಸುವ ಅಗತ್ಯವಿಲ್ಲ ಎಂದರು.

ಕಳೆದ ಹಲವು ದಿನಗಳಿಂದ ರಾಜ್ಯ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ, ಹಾಗೆಯೇ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವವರ ಸಂಭಾವ್ಯ ಹೆಸರುಗಳು ಕೂಡ ಕೇಳಿಬರುತ್ತಿದೆ.

ಆದರೆ ಇದನ್ನು ಬಿಜೆಪಿ ಶಾಸಕರು, ಸಚಿರು ಅಲ್ಲಗಳೆದಿದ್ದಾರೆ, ಅಂತಹ ಯಾವುದೇ ಚರ್ಚೆಗಳು ನಮ್ಮಲ್ಲಿ ನಡೆಯುತ್ತಿಲ್ಲ ಎಂದು ಹೇಳಿದ್ದರೂ ಕೂಡ ಚರ್ಚೆ ನಡೆಯುತ್ತಿರುವುದಂತೂ ಸತ್ಯ.

ಕೋವಿಡ್ ಸಂಕಷ್ಟದ ಮಧ್ಯೆಯೇ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲವು ಶಾಸಕರು ತೆರೆ ಮರೆಯ ಪ್ರಯತ್ನ ಆರಂಭಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಆದರೆ, ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ಚಿಂತನೆಯನ್ನು ಇದುವರೆಗೂ ನಡೆಸಿಲ್ಲ, ಬದಲಾವಣೆ ಆಗಬೇಕು ಎಂಬ ಕೆಲವು ಶಾಸಕರ ಆಶಯಕ್ಕೆ ಇದುವರೆಗೂ ಸ್ಪಂದಿಸಿಲ್ಲ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಈ ನಡುವೆ ನಾಯಕತ್ವ ಬದಲಾವಣೆ ಪ್ರಯತ್ನ ವದಂತಿ ಹ್ಬಬಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆಯೂ ಶುರುವಾಗಿದೆ.

Recommended Video

IPL ಗಾಗಿ ಟೀಂ ಇಂಡಿಯಾದ ಮತ್ತೊಂದು ಸರಣಿ ರದ್ದು ಮಾಡಿದ BCCI | Oneindia Kannada

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಚಿವ ಮುರುಗೇಶ್ ನಿರಾಣಿ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಅರವಿಂದ್ ಬೆಲ್ಲದ ಹೆಸರು ಕೇಳಿಬರುತ್ತಿದೆ.

English summary
Karnataka Chief Minister BS Yediyurappa Rules Out Leadership Change In Karnataka, Says Covid-19 Management Is My Priority
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X