• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ? ಸಮಗ್ರ ಪಟ್ಟಿ

|

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಬಿಜೆಪಿಗೆ ವಲಸೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 10 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಮಾತು ಉಳಿಸಿಕೊಂಡಿದ್ದ ಯಡಿಯೂರಪ್ಪ ಅವರು, ಇತ್ತೀಚೆಗೆ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಿ, ವಲಸಿಗರಿಗೆ ಅವಕಾಶ ನೀಡಿದ್ದರು.

ಜನವರಿ 13ರಂದು ರಾಜ್ಯಪಾಲ ವಜುಭಾಯಿವಾಲ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರ ಪೈಕಿ ಅನೇಕರು "ಪಕ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ" ಎಂದು ಘೋಷಿಸಿದ್ದಂತೂ ಕೇಳಿ ಬರಲಿಲ್ಲ. ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಅಸಮಾಧಾನದ ಹೊಗೆ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇನ್ನೂ ಇದೆ

ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಆದೇಶದ ಅನುಸಾರವಾಗಿ ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಮಿಕ್ಕಂತೆ ಇತರೆ ಸಚಿವರ ಬಳಿ ಇದ್ದ ಹೆಚ್ಚುವರಿ ಖಾತೆಗಳು ಮರು ಹಂಚಿಕೆಯಾಗಿವೆ. ಡಾ. ಸುಧಾಕರ್ ಅವರ ಬಳಿ ಹೆಚ್ಚುವರಿಯಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಹಂಚಿಕೆ ಮಾಡಲಾಗಿದೆ. ಜೆಸಿ ಮಾಧುಸ್ವಾಮಿ ಅವರಲ್ಲಿದ್ದ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಮರು ಹಂಚಿಕೆ ಮಾಡಲಾಗಿದೆ. ಇವರಿಬ್ಬರು ಈಗ ಅಸಮಾಧಾನದ ಹೊಗೆಯಲ್ಲಿ ಕೆಮ್ಮುತ್ತಿದ್ದಾರೆ ಎಂಬ ಸುದ್ದಿಯಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಜನವರಿ 21ರಂದು ಮಾಡಿದ್ದ ಖಾತೆ ಹಂಚಿಕೆಯಲ್ಲಿ ಬದಲಾವಣೆ ಮಾಡಿ 6 ಸಚಿವರ ಖಾತೆಗಳನ್ನು ಪರಿಷ್ಕರಿಸಿ ಶುಕ್ರವಾರ ಹೊಸ ಪಟ್ಟಿ ಪ್ರಕಟಿಸಲಾಗಿದೆ.

ದಿನಾಂಕ ಜನವರಿ 22, 2021ರಂತೆ: ಕರ್ನಾಟಕ ಸಂಪುಟ ದರ್ಜೆ ಸಚಿವರ ಪಟ್ಟಿ

ಕರ್ನಾಟಕ ಸಂಪುಟ ದರ್ಜೆ ಸಚಿವರ ಪಟ್ಟಿ: ಯಾರಿಗೆ ಯಾವ ಖಾತೆ?

   Uddhav Thackerayಹೇಳಿಕೆ ಖಂಡಿಸಿ ರಾಜ್ಯದ ಗಡಿಯಲ್ಲಿ Vatal Nagaraj Protest | Oneindia Kannada
   ಕರ್ನಾಟಕ ಸಂಪುಟ ದರ್ಜೆ ಸಚಿವರು
   ಕ್ರಮ ಸಂಖ್ಯೆ ಸಚಿವರ ಹೆಸರು ಖಾತೆ
   01 ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ, ಡಿಪಿಎಆರ್, ಸಂಪುಟ ವ್ಯವಹಾರ, ವಿತ್ತ, ಬೆಂಗಳೂರು ನಗರಾಭಿವೃದ್ಧಿ, ಇಂಧನ, ಗುಪ್ತಚರ ವಾರ್ತೆ ಖಾತೆ, ಸಣ್ಣ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇನ್ನಿತರ ಎಲ್ಲಾ ಹಂಚಿಕೆಯಾಗದ ಖಾತೆಗಳು.
   02 ಬಸವರಾಜ ಬೊಮ್ಮಾಯಿ ಗೃಹ(ಗುಪ್ತಚರ ಹೊರತುಪಡಿಸಿ), ಕಾನೂನು ಮತ್ತು ಸಂಸದೀಯ ವ್ಯವಹಾರ
   03 ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
   04 ವಿ. ಸೋಮಣ್ಣ ವಸತಿ
   05 ಆರ್.ಅಶೋಕ ಕಂದಾಯ (ಮುಜರಾಯಿ ಹೊರತುಪಡಿಸಿ)
   06 ಲಕ್ಷ್ಮಣ ಸವದಿ ಸಾರಿಗೆ
   07 ಜಗದೀಶ್ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ (ಸಕ್ಕರೆ ಖಾತೆ ಹೊರತುಪಡಿಸಿ), ಹೆಚ್ಚುವರಿಯಾಗಿ ಸಾರ್ವಜನಿಕ ಉದ್ದಿಮೆ ಖಾತೆ
   08 ಡಾ. ಅಶ್ವಥ್ ನಾರಾಯಣ್ ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ
   09 ಗೋವಿಂದ ಕಾರಜೋಳ ಲೋಕೋಪಯೋಗಿ, ಹೆಚ್ಚುವರಿಯಾಗಿ ಸಮಾಜ ಕಲ್ಯಾಣ
   10 ಜೆ. ಸಿ ಮಾಧುಸ್ವಾಮಿ ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ಫ್ ಇಲಾಖೆ
   11 ಬಿ. ಶ್ರೀರಾಮುಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
   12 ಸಿ.ಸಿ ಪಾಟೀಲ್ ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
   13 ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ
   14 ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ
   15 ಪ್ರಭು ಚೌಹಾಣ್ ಪಶು ಸಂಗೋಪನೆ
   16 ಕೋಟಾ ಶ್ರೀನಿವಾಸ ಪೂಜಾರಿ (ಎಂಎಲ್ಸಿ) ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ
   17 ಉಮೇಶ್ ಕತ್ತಿ ಆಹಾರ ಮತ್ತು ಪಡಿತರ ವಿತರಣೆ ಹಾಗೂ ಗ್ರಾಹಕ ವ್ಯವಹಾರ
   18 ಅಂಗಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ
   19 ರಮೇಶ್ ಜಾರಕಿಹೊಳಿ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆ (ಜಲ ಸಂಪನ್ಮೂಲ)
   20 ಎಸ್. ಟಿ ಸೋಮಶೇಖರ್ ಸಹಕಾರ
   21 ಆನಂದ್ ಸಿಂಗ್ ಪರಿಸರ, ಪ್ರವಾಸೋದ್ಯಮ
   22 ಡಾ. ಕೆ ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
   23 ಬೈರತಿ ಬಸವರಾಜು ಬೆಂಗಳೂರು ಮಹಾನಗರ (ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂ ಎಸ್ಎಸ್ ಬಿ, ಬಿಎಂಆರ್ ಡಿಎ, ಬಿಎಂಆರ್ ಸಿಎಲ್, ಕೆಯುಡಬ್ಲ್ಯೂ ಎಸ್ ಡಿಬಿ, ಕೆಯುಐಡಿ ಎಫ್ ಸಿ, ಟೌನ್ ಶಿಪ್ ನಿರ್ದೇಶನಾಲಯ) ಹೊರತು ಪಡಿಸಿ ನಗರಾಭಿವೃದ್ಧಿ
   24 ಶಿವರಾಮ ಹೆಬ್ಬಾರ್ ಕಾರ್ಮಿಕ
   25 ಬಿ.ಸಿ ಪಾಟೀಲ್ ಕೃಷಿ
   26 ಕೆ ಗೋಪಾಲಯ್ಯ ಅಬಕಾರಿ ಇಲಾಖೆ
   27 ಕೆ.ಸಿ ನಾರಾಯಣ ಗೌಡ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ,ಯೋಜನೆ, ನಿರ್ವಹಣೆ ಮತ್ತು ಸಾಂಖ್ಯಿಕ
   28 ಶ್ರೀಮಂತ ಪಾಟೀಲ್ ಜವಳಿ
   29 ಅರವಿಂದ ಲಿಂಬಾವಳಿ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
   30 ಮುರುಗೇಶ್ ನಿರಾಣಿ ಗಣಿ ಮತ್ತು ಭೂಗರ್ಭ ಇಲಾಖೆ
   31 ನಾಗರಾಜ (ಎಂಟಿಬಿ) ಕಬ್ಬುಬೆಳೆ ಅಭಿವೃದ್ಧಿ, ಕಬ್ಬು ನಿರ್ದೇಶನಾಲಯ, ಪೌರಾಡಳಿತ
   32 ಸಿ. ಪಿ ಯೋಗೇಶ್ವರ ಸಣ್ಣ ನೀರಾವರಿ ಇಲಾಖೆ
   33 ಆರ್ ಶಂಕರ್ ರೇಷ್ಮೆ, ತೋಟಗಾರಿಕೆ
   English summary
   Karnataka CM BS Yediyurappa has allotted portfolios to newly inducted ministers today(Jan 21, 2021). Here is the list of new cabinet ministers and their portfolios.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X