• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಾಸ ಗೆದ್ದ ಸಿಎಂ ಯಡಿಯೂರಪ್ಪ: ಇನ್ನಿತರೆ ಬೆಳವಣಿಗೆಗಳು

|

ಬೆಂಗಳೂರು, ಜುಲೈ 29: ಧ್ವನಿ ಮತದ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ಗೆದ್ದಿದ್ದಾರೆ. ಹಾಗೆಯೇ ಮೂರು ತಿಂಗಳಿಗೆ ಲೇಖಾನುದಾನ ಮಂಡಿಸಿದ್ದಾರೆ.

ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ಶುಕ್ರವಾರ ಪದಗ್ರಹಣ ಮಾಡಿರುವ ಬಿ. ಎಸ್. ಯಡಿಯೂರಪ್ಪ ಇವತ್ತು ವಿಶ್ವಾಸಮತವನ್ನು ಸಾಬೀತುಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದ ರಾಜ್ಯ ರಾಜಕಾರಣದ ಸುದ್ದಿಕೇಂದ್ರವಾಗಿದೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ? ಸದನದ ಘಟನಾವಳಿಗಳು

ಧನ ವಿನಿಯೋಗ ವಿಧೇಯಕ, ಯಡಿಯೂರಪ್ಪ ವಿಶ್ವಾಸಮತ ಹಾಗೂ ಪೂರಕ ಬಜೆಟ್‌ಗೆ ಇಂದು ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

Bs Yeddyurappa Would Move The Motion Of Confidence Live Updates

"ಧನವಿನಿಯೋಗ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲಿಸುತ್ತವೆ ಅಂದುಕೊಂಡಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ, ಎಲ್ಲ ಪಕ್ಷಗಳ ಸಹಕಾರ ಪಡೆದು, ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಯ ನಿರ್ಧಾರ ಮಾಡಿದ್ದೇನೆ," ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಶಾಸಕಾಂಗ ಸಭೆಯ ಬಗ್ಗೆ ವಿವರ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, 105 ಪಕ್ಷದ ಶಾಸಕರಲ್ಲದೇ ಒಬ್ಬರು ಪಕ್ಷೇತರ ಅಭ್ಯರ್ಥಿಗಳು ಬೆಂಬಲಿಸುವ ಸಾಧ್ಯತೆ ಇದೆ.

17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!

ವಿಶ್ವಾಸಮತದ ಹಿನ್ನೆಲೆಯಲ್ಲಿ ಬಿಜೆಪಿ ವಿಪ್ ಜಾರಿ ಮಾಡಲಾಗಿದ್ದು, ಎಲ್ಲ ಶಾಸಕರು ಹಾಜರಾಗುವಂತೆ ನೋಡಿಕೊಳ್ಳುವಂತೆ 12 ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಧನ ವಿನಿಯೋಗ ವಿಧೇಯಕ ಅಂಗೀಕಾರಕ್ಕೆ ಸಹಕರಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಕೋರಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವ ಹಾದಿ ಸುಲಭವಾಗಿದೆ.

ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆ ಪರಸ್ತಾವನೆ ಮೇಲೆ ನಡೆದ ದೀರ್ಘ ಚರ್ಚೆಯ ಬಳಿಕ ಮಂಗಳವಾರ ನಡೆದ ಕಲಾಪದಲ್ಲಿ ವಿಶ್ವಾಸಮತ ಪಡೆಯಲು ವಿಫಲರಾಗಿದ್ದರು.

ಪ್ರಸಕ್ತ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನ್ವಯವಾಗುವಂತೆ ಎಲ್ಲಾ 14 ಶಾಸಕರನ್ನು ಅನರ್ಹಗೊಳಿಸ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.

ಈ ವಿಚಾರ ಸೋಮವಾರ ನ್ಯಾಯಾಲಯದ ಮೆಟ್ಟಿಲೇರಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ, ನ್ಯಾಯಾಲಯಗಳು ಹಾಗೂ ರಾಜಕೀಯ ಪಡಸಾಲೆಯಲ್ಲಿ ನಡೆಯುವ ದಿನ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.

Newest First Oldest First
12:37 PM, 29 Jul
ಮಾಜಿ ಡಿಸಿಎಂ ಪರಮೇಶ್ವರ ಸದನಕ್ಕೆ ಗೈರು, ಪರಮೇಶ್ವರ ಪತ್ನಿ ಕನ್ನಿಕಾ ಅವರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ.
12:30 PM, 29 Jul
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ ಹಿನ್ನೆಲೆ ವಿಧಾನಸಭೆ ಕಲಾಪ ಮುನ್ನಡೆಸಲಿರುವ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ
12:27 PM, 29 Jul
ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.ವಿಧಾನಸಭಾ ಕಲಾಪವನ್ನು ಸಂಜೆ 5 ಗಂಟೆಗೆ ಮುಂದೂಡಲಾಗಿದೆ.
12:24 PM, 29 Jul
ಯಾರ ಬಳಿ ಎಷ್ಟು ಆಸ್ತಿ ಇದೆ ಎನ್ನುವ ತಣಿಕೆ ತಕ್ಷಣವೇ ನಡೆಸಬೇಕು. ಕೆಲಸಕ್ಕೆ ಬಾರದಂತಹ ಪ್ರಾವಿಜನ್ಸ್ ಇಡಬಾರದು, ತಕ್ಷಣ ತನಿಖೆ ನಡೆಸಬೇಕು. ಸಾರ್ವಜನಿಕರಿಗೆ ನೆಮ್ಮದಿ ಸಿಗುತ್ತೆ-ರಮೇಶ್ ಕುಮಾರ್
12:19 PM, 29 Jul
ಈ ದೇಶದ ಭ್ರಷ್ಟಾಚಾರದ ಮೂಲ ಚುನಾವಣೆ ವ್ಯವಸ್ಥೆ, ಅದನ್ನು ಸರಿ ಮಾಡದೆ ಭ್ರಷ್ಟಾಚಾರದ ಮಾತನಾಡಿದರೆ ಅದು ಕಾಟಾಚಾರವಾಗುತ್ತದೆ, ಬದ್ಧತೆಯ ಮಾತು ಆಗುವುದಿಲ್ಲ, ಶ್ರೀಸಾಮಾನ್ಯ ಚುನಾವಣೆಯಲ್ಲಿ ಭಾಗವಹಿಸಬೇಕು, ಸಾಮಾನ್ಯ ಜನರ ವಿಶ್ವಾಸ ಹೆಚ್ಚಾಗಬೇಕಿದ್ದರೆ ಎಲೆಕ್ಟೋರಲ್ ರಿಫಾರ್ಮ್ಸ್ ಅಗತ್ಯ- ರಮೇಶ್ ಕುಮಾರ್
12:16 PM, 29 Jul
14 ತಿಂಗಳ ಕಾಲ ಸರ್ವಾನುಮತದಿಂದ ಆಯ್ಕೆ ಯಾಗಿ ಪ್ರಾಮಾಣಿಕತೆ ಯಿಂದ ಕೆಲಸ ಮಾಡಿದ್ದೇನೆ..ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಸೋನಿಯಾಗಾಂಧಿ..ರಾಹುಲ್ ಗಾಂಧಿ ಸೂಚನೆಯಂತೆ ಸ್ಪೀಕರ್ ಸ್ಥಾನ ಅಲಂಕರಿಸಿದೆ. ಇಡೀ ಸದನ ಸರ್ವಾನುಮತದಿಂದ ಆರಿಸಿತ್ತು. 14 ತಿಂಗಳಲ್ಲಿ ಸಿಬ್ಬಂದಿ.. ಅಧಿಕಾರಿಗಳು ಸಹಕರಿಸಿದ್ದಾರೆ, ಕೋಪದಿಂದ ಮಾತನಾಡಿದ್ರೆ ತಪ್ಪು ತಿಳಿಬೇಡಿ- ರಮೇಶ್ ಕುಮಾರ್
12:12 PM, 29 Jul
ರಾಜಕಾರಣದಲ್ಲಿ ಕೆಲವು ಘಟನೆಗಳು ಸಂಭವಿಸಿದಾಗ, ವಿವೇಚನೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ನಾವು ಅಲಂಕರಿಸಿದ ಸ್ಥಾನ ದೊಡ್ಡದು, ನಾವು ಸಣ್ಣವರು, ಇಂತಹ ಅವಕಾಶ ಒದಗಿ ಬಂದಾಗ, ನಾವು ಇಲ್ಲಿರುವವರೆಗೆ ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದೇನೆ- ರಮೇಶ್ ಕುಮಾರ್
12:10 PM, 29 Jul
ಪೂರಕ ಬಜೆಟ್ ಮಂಡಿಸಿದ ಯಡಿಯೂರಪ್ಪ, 3,327 ಕೋಟಿ ರೂ ಪೂರಕ ಬಜೆಟ್ ಅಧಿವೇಶನದಲ್ಲಿ ಅಂಗೀಕಾರ
12:03 PM, 29 Jul
ಸಪ್ಲಿಮೆಂಟರಿ ಬಜೆಟ್‌ನ್ನು ಚರ್ಚೆ ಇಲ್ಲದೆ ಹಾಗೆಯೇ ಪಾಸ್ ಮಾಡಲು ಸಾಧ್ಯವಿಲ್ಲ, ನಾವು ಒಪ್ಪುವುದಿಲ್ಲ 3,327 ಸಾವಿರ ಕೋಟಿ ಬಜೆಟ್‌ನ್ನು ಚರ್ಚೆ ಮಾಡದೆ ಹಾಗೆಯೇ ಒಪ್ಪಿಕೊಳ್ಳಲು ಆಗುತ್ತದೆಯೇ-ಸಿದ್ದರಾಮಯ್ಯ
11:55 AM, 29 Jul
ಹಣಕಾಸು ವಿಧೇಯಕ ವಿಧಾನಸಭೆಯಲ್ಲಿ ಅಂಗೀಕೃತವಾಗಿದೆ- ರಮೇಶ್ ಕುಮಾರ್
11:54 AM, 29 Jul
ಇಲ್ಲಿ ಕೂತವರು ಯಾರಾದರೂ ಸ್ಪೀಕರ್ ಸರಿಯಿಲ್ಲ ಅನ್ನಬಹುದು, ಆದರೆ ಆರೂವರೆ ಕೋಟಿ ಜನ ಸ್ಪೀಕರ್ ಸರಿಯಿದ್ದಾರೆ, ಸ್ಪೀಕರ್ ತಲೆ ಸರಿಯಾಗಿಯೇ ಕೆಲಸ ಮಾಡುತ್ತಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದ ಪಾಟೀಲ್.
11:54 AM, 29 Jul
ಪಾಟೀಲ್ ಭಾಷಣದ ವೇಳೆ ಸರಿಯಾಗಿ ಕೇಳಿಸದ ಮೈಕ್ , ಆಗ ಮೈಕ್ ಸರಿಯಾಗಿ ಕೇಳಿಸುತ್ತಿಲ್ಲ, ಮೈಕ್ ಸರಿಯಾಗಿಲ್ಲ ಅಂದರೆ ಸ್ಪೀಕರ್ ಸರಿಯಾಗಿಲ್ಲ ಅಂತಾರೆ, ಇಲ್ಲಿ ಸ್ಪೀಕರ್ ಸರಿಯಿದೆ ಎಂದ ಸ್ಪೀಕರ್ ರಮೇಶ್ ಕುಮಾರ್
11:52 AM, 29 Jul
ಸರ್ಕಾರವು ಇವತ್ತು , ನಾಳೆ ಸದನ ಕರೆದಿದೆ, ನಾಳೆ ಈ ಸದನದಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕು. ಇದು ಒಂದು ಅಥವಾ ಎರಡು ರೂ ವಿಷಯ ಅಲ್ಲ. ಇಷ್ಟು ದೊಡ್ಡ ಮತ್ತದ ಲೇಖಾನುದಾನವನ್ನು ಯಾವುದೇ ಚರ್ಚೆ ಇಲ್ಲದೆ ಮುಗಿಸಿದರೆ ಸಂವಿಧಾನದಲ್ಲಿ ಕಪ್ಪು ಪುಟವಾದಂತಾಗುತ್ತದೆ-ಎಚ್‌ಕೆ ಪಾಟೀಲ
11:49 AM, 29 Jul
ಲೇಖಾನುದಾನ 3 ತಿಂಗಳಿಗೆ ತೆಗೆದುಕೊಳ್ಳುವುದು ಸರಿಯಿಲ್ಲ ಎಂಟು ತಿಂಗಳಿಗೆ ಮಂಡನೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
11:46 AM, 29 Jul
ಮೂರು ತಿಂಗಳಿಗೆ ಲೇಖಾನುದಾನ ಪಡೆಯುವ ಅಗತ್ಯವಿದೆ-ಯಡಿಯೂರಪ್ಪ
11:44 AM, 29 Jul
ಹಣಕಾಸು ವಿಧೇಯಕ ಮಂಡನೆಗೆ ಯಡಿಯೂರಪ್ಪ ಚಾಲನೆ
11:42 AM, 29 Jul
ಧ್ವನಿ ಮತದ ಮೂಲಕ ವಿಶ್ವಾಸ ಗೆದ್ದ ಸಿಎಂ ಯಡಿಯೂರಪ್ಪ
11:41 AM, 29 Jul
ಸದಾಕಾಲ ನಿಮ್ಮ ಸಹಕಾರವನ್ನು ಬಯಸುತ್ತೇನೆ, ನಾವು ತೆಗೆದುಕೊಂಡಿರುವ ತೀರ್ಮಾನಗಳು ಜನರಿಗೆ ಧಕ್ಕೆಯಾಗುತ್ತದೆ ಎಂದು ನಿಮಗೆ ಅನಿಸಿದರೆ, ಯಾವುದೇ ಒಂದು ವಿಶೇಷ ಕಾರಣಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅವಕಾಶ ಸಿಕ್ಕಾಗ, ಪ್ರತಿ ಕ್ಷಣ ನಾಡಿನ ಜನರ ಕಲ್ಯಾಣದ ದೃಷ್ಟಿಯಿಂದ ಕೆಲಸ ಮಾಡುತ್ತೇನೆ ಸಹಕಾರ ನೀಡಿ-ಯಡಿಯೂರಪ್ಪ
11:39 AM, 29 Jul
ನಿಮ್ಮ ಅವ್ಯವಹಾರಗಳಿಗೆ ಬೆಂಬಲ ಕೊಡುವುದಿಲ್ಲ, ನಾಡಿನ ಆಸ್ತಿಗಳನ್ನು ಉಳಿಸುವುದರಲ್ಲಿ, ನಾಡನ್ನು ಕಟ್ಟುವ ವಿಷಯದಲ್ಲಿ ಬೆಂಬಲ ಕೊಡುತ್ತೀವೆ, ಅಕ್ರಮ ನಡೆದಾಗ ಜನರ ಪರವಾಗಿ ನಿಲ್ಲುತ್ತೇವೆ-ಕುಮಾರಸ್ವಾಮಿ
11:37 AM, 29 Jul
ನಾಡಿನ ಜನತೆ ತಿಳಿವಳಿಕೆ ಇಲ್ಲದಿರುವವರು ಅಲ್ಲ, ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಹಲವಾರು ಜನ ಅಧಿಕಾರಕ್ಕೆ ಬಂದಿದ್ದಾರೆ, ಹೋಗಿದ್ದಾರೆ, ಆ ಕ್ಷಣದಲ್ಲಿ ಸಿಕ್ಕಿ ಅವಕಾಶದಲ್ಲಿ ನಾವು ಮಾಡಿದ ಕೆಲಸ ನಮ್ಮನ್ನು ಕಾಯುತ್ತದೆ, ಕುತಂತ್ರ ರಾಜಕಾರಣದಿಂದ ಅಧಿಕಾರ ಹಿಡಿದಿದ್ದೀರಿ, ಯಾರಿಂದಲೂ ಅಧಿಕಾರ ಹಿಡಿದಿಲ್ಲ, ಅಧಿಕಾರಕ್ಕೆ ಬಂದ ನಂತರವಾದಲೂ ಒಳ್ಳೆಯ ಕಾರ್ಯವನ್ನು ಮಾಡಿ- ಎಚ್‌ಡಿ ಕುಮಾರಸ್ವಾಮಿ
11:34 AM, 29 Jul
ಅಪವಿತ್ರ ಸರ್ಕಾರವನ್ನು ತೆಗೆದು, ಪವಿತ್ರವಾದ ಸರ್ಕಾರ ತಂದು ನಿಲ್ಲಿಸಿದ್ದೇನೆ ಎಂದು ನೀವು ಹೇಳುತ್ತಿದ್ದೀರಾ,ಅವರನ್ನು ನಡುನೀರಿನಲ್ಲಿ ಕೈಬಿಡಬೇಡಿ. ಅತೃಪ್ತರು ಯಾವಾಗ ಪಿಶಾಚಿಗಳಾಗುತ್ತಾರೋ ಗೊತ್ತಿಲ್ಲ, ನನಗಂತೂ ಅಂತಹ ಶಾಸಕರ ಬಗ್ಗೆ ಮಾಹಿತಿ ಇಲ್ಲ -ಕುಮಾರಸ್ವಾಮಿ
11:31 AM, 29 Jul
ರಾಜಕೀಯ ಜೀವನ, ಅಧಿಕಾರದಿಂದ ನಿರ್ಗಮಿಸುವಂತಹ ಸಮಯದಲ್ಲಿ, ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ನನಗೆ ನನ್ನ ಕೆಲಸದ ಮೇಲೆ ತೃಪ್ತಿ ಇದೆ- ಕುಮಾರಸ್ವಾಮಿ ಹಲವಾರು ಅಡಚಣೆ ಗಳ ಮಧ್ಯೆ 14 ತಿಂಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಮ್ಮದು ಪಾಪದ ಸರ್ಕಾರ ಎಂದು ಹೇಳಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ‌ಚರ್ಚೆ ಮಾಡುತ್ತೇವೆ. ಮೈತ್ರಿ ಸರ್ಕಾರದಲ್ಲಿ ನನ್ನ ಇತಿಮಿತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ- ಕುಮಾರಸ್ವಾಮಿ
11:31 AM, 29 Jul
ರಾಜಕೀಯ ಜೀವನ, ಅಧಿಕಾರದಿಂದ ನಿರ್ಗಮಿಸುವಂತಹ ಸಮಯದಲ್ಲಿ, ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ನನಗೆ ನನ್ನ ಕೆಲಸದ ಮೇಲೆ ತೃಪ್ತಿ ಇದೆ- ಕುಮಾರಸ್ವಾಮಿ
11:28 AM, 29 Jul
ನನ್ನ ಆತ್ಮಕ್ಕೆ ನಾನು ಉತ್ತರಕೊಡಬೇಕು, ಈ 14 ತಿಂಗಳ ಅವಧಿಯಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ, ನಾವೆಲ್ಲರೂ ಒಂದಲ್ಲಾ ಒಂದು ದಿನ ಉತ್ತರ ಕೊಡಬೇಕಾಗುತ್ತದೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ, 14 ತಿಂಗಳಲ್ಲಿ ನೀವು ಬಳಸಿದ ಪದಗಳು ರೆಕಾರ್ಡ್ ಆಗಿದೆ. ನಾಡಿನ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಂಡಿದ್ದೇನೆ ಎನ್ನುವ ಕಡತವನ್ನು ನೀವು ನೋಡಬಹುದು, ಸತ್ಯಾಂಶವನ್ನು ಆ ಜಾಗದಲ್ಲಾದರೂ ಕೂತು ಜನತೆಗೆ ತಿಳಿಸಿ- ಎಚ್‌ಡಿ ಕುಮಾರಸ್ವಾಮಿ
11:26 AM, 29 Jul
ಕಳೆದ 14 ತಿಂಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ಯಂತ್ರ ಕುಸಿತವಾಗಿತ್ತು, ಎಲ್ಲಾ ಮಾಹಿತಿ ನೀಡಿ ಎಂದು ಹೇಳಲು ಹೋಗುವುದಿಲ್ಲ, ಅಧಿವೇಶನ ನಡೆದಾಗ ಸದನದ ಮುಂದೆ ಮಾಹಿತಿ ಇಡಿ, ಬಾಯಿ ಚಪಲಕ್ಕಾಗಿ ಆಧಾರ ರಹಿತ ಆರೋಪ ಮಾಡುವುದಿರಿಂದ ಯಾರಿಗೂ ಶೋಭೆ ತರುವುದಿಲ್ಲ- ಕುಮಾರಸ್ವಾಮಿ
11:19 AM, 29 Jul
ಜನರ ಆಶೋತ್ತರವೇನಿತ್ತು ಅದರಂತೆ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದ್ದೀರಿ, ಆದರೆ ನಿಮಗೆ ಜನಾದೇಶವೇ ಇಲ್ಲ, ಕೆಲವರನ್ನು ಅತೃಪ್ತರನ್ನು ಮಾಡಿದಿರಿ, ಪ್ರಜಾಪ್ರಭುತ್ವದಲ್ಲಿ ತೃಪ್ತಿ ಯಾವಾಗ ಆಗುತ್ತೆ ಎಂದರೆ ಜನರ ನಿರೀಕ್ಷೆಯಂತೆ ನಡೆದುಕೊಳ್ಳಬೇಕು... ಸಿದ್ದರಾಮಯ್ಯ
11:17 AM, 29 Jul
ನೀವು ಕೇಂದ್ರ ಸರ್ಕಾರದಿಂದ 6 ಸಾವಿರ ಕೊಡ್ತೀವಿ ಅಂತ ನರೇಂದ್ರ ಮೋದಿಯವರು ಮಾಡಿದ್ದಾರೆ ಅದಕ್ಕೆ ನಾಲ್ಕು ಸಾವಿರ ಸೇರಿ ಕೊಡುತ್ತೇವೆ ಎಂದು ಹೇಳಿದ್ದೀರಾ, ಒಳ ಬೇಸಾಯ ರೈತರಿಗೆ, ವರ್ಷಕ್ಕೆ 10 ಸಾವಿರದವರೆಗೆ ಕೊಡಬೇಕು ಎನ್ನುವ ರೈತ ಬೆಳಕು ಎನ್ನುವ ಯೋಜನೆ ಜಾರಿಗೆ ತಂದಿದ್ದೆವು. ನೇಕಾರರ ಸಾಲ ಕೂಡ ಮನ್ನಾ ಮಾಡಿದ್ದೆವು. ಸಿದ್ದರಾಮಯ್ಯ
11:14 AM, 29 Jul
ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿರಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಕಾಮನ್ ಮಿನಿಮಮ್ ಪ್ರೋಗ್ರಾಮ್ , ಪ್ರಾಮಾಣಿಕವಾಗಿ ಜಾರಿಗೆ ತರುವ ಪ್ರಯತ್ನ ಮಾಡಿದ್ದೇವೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದ್ದ ಕಾರ್ಯಕ್ರಮಗಳು ಮುಂದುವರೆಸಿದ್ದೆವು. ಸಾಲಮನ್ನಾ ಮಾಡಿದ್ದರು, ಖಾಸಗಿಯವರ ಜೊತೆ ಸಾಲ ತೆಗೆದುಕೊಂಡಿರುವ ಸಾಲ ಮನ್ನಾ ಇರಬಹುದು, ಆಡಳಿತ ಯಂತ್ರ ಕುಸಿದಿರಲಿಲ್ಲ, ಜನರು ಮೆಚ್ಚುವ ರೀತಿಯಲ್ಲಿ 14 ತಿಂಗಳು ಆಡಳಿತ ನಡೆದಿದೆ.-ಸಿದ್ದರಾಮಯ್ಯ
11:12 AM, 29 Jul
ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ ಅದನ್ನೂ ಸ್ವಾಗತ ಮಾಡುತ್ತೇನೆ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ ಅದನ್ನೂ ಕೂಡ ಸ್ವಾಗತ ಮಾಡುತ್ತೇನೆ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು- ಸಿದ್ದರಾಮಯ್ಯ
11:12 AM, 29 Jul
ನಾಲ್ಕು ದಿನಗಳ ಕಾಲ ಚರ್ಚೆಯಾಗಿದೆ, ಅನೇಕ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ, ಹಾಗಾಗಿ ದೀರ್ಘ ಚಚೆ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ, ಯಡಿಯೂರಪ್ಪ ಅವರು ಯಾವ ಮಾರ್ಗದಿಂದ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವ ಬಗ್ಗೆ ಪ್ರಸ್ತಾಪ ಮಾಡಬಹುದಿತ್ತು-ಸಿದ್ದರಾಮಯ್ಯ.
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief minister BS Yeddyurappa Calls For Trust Vote Today, he would move the motion of confidence in the assembly on July 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more